ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.24:
ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿಯ 4ನೇ ವಾರ್ಡ್ಗೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮುನಿಯಪ್ಪ ಜಯಭೇರಿ ಬಾರಿಸಿದ್ದಾಾರೆ.
ಕಾಂಗ್ರೆೆಸ್ ಪಕ್ಷದ ಸದಸ್ಯ ಡಿ.ಶಂಕರಗೌಡ ವೀರನಗೌಡ ಅಕಾಲಿಕ ನಿಧನದಿಂದ ತೆರವಾದ ಸ್ಥಾಾನಕ್ಕೆೆ ಹಿಂದುಳಿದ ವರ್ಗ(ಅ) ಸ್ಥಾಾನದ ಉಪಚುನಾವಣೆ ಡಿ.21 ರಂದು ನಡೆದಿತ್ತು. ನಗರದ ತಹಶೀಲ್ ಕಛೇರಿಯಲ್ಲಿ ಬುಧವಾರ ಮತ ಎಣಿಕೆ ನಡೆಯಿತು. ಭಾರತೀಯ ಜನತಾಪಕ್ಷ ಅಭ್ಯರ್ಥಿ ಮುನಿಯಪ್ಪ ತಂದೆ ಪರಮೇಶ್ವರಪ್ಪ 376 ಮತಗಳಲ್ಲಿ ಮತಗಳನ್ನು ಪಡೆದ 22 ಮತಗಳ ಅಂತರದಲ್ಲಿ ಕಾಂಗ್ರೆೆಸ್ ಅಭ್ಯರ್ಥಿ ಬಾಲಾಜಿ ತಂದೆ ಮರಿಯಪ್ಪ(354) ರನ್ನು ಸೋಲಿಸಿದ್ದಾಾರೆ. 735 ಮತಗಳು ಚಲಾವಣೆಗೊಂಡಿದ್ದವು.
ಸಂಭ್ರಮಾಚರಣೆ:
ಪಟ್ಟಣ ಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಿಸಿದ ಹಿನ್ನೆೆಲೆಯಲ್ಲಿ ಪಟ್ಟಣದ ಶಂಕರಲಿಂಗೇಶ್ವರ ದೇವಸ್ಥಾಾನದ ಮುಂದೆ ಈಳು ಕಾಯಿ ಒಡೆದು, ಕನಕದಾಸ ಸರ್ಕಲ್, ಬಸವೇಶ್ವರ ಸರ್ಕಲ್ನಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಮಸ್ಕಿಿಯ ಮಾಜಿ ಶಾಸಕ ಪ್ರತಾಪ್ಗೌಡ ಪಾಟೀಲ್ ಮಾತನಾಡಿ, ಪಟ್ಟಣದ ಶಂಕರ ಲಿಂಗೇಶ್ವರ ತಾತನವರ ಕೃಪಾಶೀರ್ವಾದ ಮತ್ತು ಕಾಂಗ್ರೆೆಸ್ ಪಕ್ಷದ ದುರಾಡಳಿತಕ್ಕೆೆ ಜನರು ಬೇಸತ್ತು ನಮ್ಮ ಪಕ್ಷದ ಅಭ್ಯರ್ಥಿಗೆ ಮತದಾರರು ಆಶೀರ್ವಾದ ಮಾಡಿದ್ದಾಾರೆ ಎಂದರು
ಸಿಂಧನೂರು ಬಿಜೆಪಿ ಮುಖಂಡ ಕೆ.ಕರಿಯಪ್ಪ, ಮುಖಂಡರಾದ ಬಸವರಾಜ್ ಸ್ವಾಾಮಿ ಹಸಮಕಲ್, ಜಿಲ್ಲಾಾ ಉಪಾಧ್ಯಕ್ಷ ಚಂದ್ರಕಾಂತ ಗೂಗೆಬಾಳ್, ಶರಣಯ್ಯ ಸೊಪ್ಪಿಿನಮಠ್, ಸಿದ್ದೇಶ್ ಕುರಿಕಾರ್, ವೆಂಕೋಬಯ್ಯ ಶೆಟ್ಟಿಿ, ವೆಂಕಣ್ಣ ಸಾಹುಕಾರ್ ಗುಂಡ, ಕರಕಪ್ಪ ಸಾಹುಕಾರ, ಬಾಲಪ್ಪ ಕುಂಟೋಜಿ, ಕರಿಯಪ್ಪ ಬಂಗಿ, ನಿಂಗಪ್ಪ ಸಜ್ಜನ್, ಚನ್ನಬಸವ ದೇಸಾಯಿ, ಸಿದ್ದರಾಮೇಶ ಮನ್ನಾಾಪುರ, ಚಂದ್ರು ಪವಾಡಶೆಟ್ಟಿಿ, ವೆಂಕಣ್ಣ ಉಪ್ಪಾಾರ್, ನಿರುಪಾದಿ ಉಪ್ಪಲದೊಡ್ಡಿಿ, ಶಿವು ಮೊಬೈಲ್, ಮರಿಸ್ವಾಾಮಿ ಬುದ್ದಿನ್ನಿಿ, ಬಸನಗೌಡ ಮೈಲಾಪುರ್, ಯಲ್ಲಪ್ಪ ಪೂಜಾರಿ, ನಾಗರಾಜ್ ತೆಕ್ಕಲಕೋಟಿ, ನಾಗರಾಜ್ ಗಡ್ಯಾಾಳ್, ದೇವಪ್ಪ ಬಳಗಾನೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ತುರವಿಹಾಳ ಪ.ಪಂ.ಉಪಚುನಾವಣೆ : ಬಿಜೆಪಿ ಜಯಭೇರಿ

