ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.24:
ತಾಲೂಕಿನ ದಿದ್ದಿಗಿ ಗ್ರಾಾಮದ ಯಂಕನಗೌಡ ಅವರಿಗೆ ಕರ್ನಾಟಕ ಜಾನಪದ ಅಕಾಡಮಿಯು 2025ನೇ ಸಾಲಿಗೆ ವಾರ್ಷಿಕ ಗೌರವ ಪ್ರಶಸ್ತಿಿಗೆ ಆಯ್ಕೆೆಯಾಗಿದ್ದಾಾರೆ.
ಜನೇವರಿ-1, 1971 ರಲ್ಲಿ ಜನಿಸಿದ ಯಂಕನಗೌಡರು, 5ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದಿದ್ದಾಾರೆ. ನಂತರ ಕೃಷಿಯನ್ನು ಮೈಗೂಡಿಸಿಕೊಂಡ ಅವರು, ಸಂಗೀತದ ಗುರುಗಳಾದ ದಿ.ದ್ಯಾಾವಪ್ಪ ಸಾಹುಕಾರ ಉದ್ಬಾಾಳ ಅವರ ಬಳಿ ಸಂಗೀತಾಭ್ಯಾಾಸ ಮಾಡಿ, ಅನೇಕ ಬಯಲಾಟ ಕಾರ್ಯಕ್ರಮದಲ್ಲಿ ಮೃದಂಗ ನುಡಿಸುವದು. ರಂಗಭೂಮಿ ಕಲೆ ಹಾರ್ಮೋನಿಯಂ ನುಡಿಸುವದು ಕಲಿತರು. ಅನೇಕ ಹಳ್ಳಿಿಗಳಲ್ಲಿ ಶರಣರ, ಸಂತರ, ಅನುಭಾವಿಗಳ ತತ್ವ ಹಾಗೂ ಜಾನಪದ ಹಾಡುಗಳ ಜೊತೆಗೆ ಅನೇಕ ರಂಗ ಸಜ್ಜಿಿಕೆಗಳಲ್ಲಿ ಏಕಪಾತ್ರಾಾಭಿಯನ ಮಾಡುತ್ತಾಾ, ತತ್ವಪದ, ಭಜನಾ ಗಾಯನ ಗಾರುಡಿಗ ಪ್ರಶಸ್ತಿಿ ನೀಡಿ ಗೌರವಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2020 ರಲ್ಲಿ ಸುಗ್ಗಿಿ-ಹುಗ್ಗಿಿ ಜಾನಪದ ಕಾರ್ಯಕ್ರಮದಲ್ಲಿ ಪ್ರಶಸ್ತಿಿ ನೀಡಿ ಗೌರವಿಸಿತ್ತು. 2022 ನೇ ಸಾಲಿನಲ್ಲಿ 75ನೇ ಸ್ವಾಾತಂತ್ರೋೋತ್ಸವದ ಅಮೃತ ಮಹೋತ್ಸವ ಸಾಂಸ್ಕೃತಿಕ ಕಲಾವೈಭವ ಕಾರ್ಯಕ್ರಮದಲ್ಲಿ ಪ್ರಶಸ್ತಿಿ ನೀಡಿ ಗೌರವಿಸಲಾಗಿತ್ತು. 2019 ರಲ್ಲಿ ಗಿರಿಜನ ಉತ್ಸವದಲ್ಲಿ ಪ್ರಶಸ್ತಿಿ, ಸಿದ್ದರೂಢ ಸ್ವಾಾಮಿಗಳ ಮಠದಿಂದ ಏಳನೇ ವರ್ಷದ ರಾಜ್ಯಮಟ್ಟದ ಭಜನಾ ಕಾರ್ಯಕ್ರಮದಲ್ಲಿ ಭಾಗಿ, 2022 ರಲ್ಲಿ ಕರ್ನಾಟಕ ಜಾನಪದ ಅಕಾಡಮಿ ಕಾರ್ಯಕ್ರಮಕ್ಕೆೆ ಗೌರವಿಸಿ ಪ್ರಶಸ್ತಿಿ ನೀಡಿ ಗೌರವಿಸಲಾಗಿದೆ.
ಕರ್ನಾಟಕ ಜಾನಪದ ಅಕಾಡಮಿಯಿಂದ ದಿದ್ದಿಗಿಯ ಯಂಕನಗೌಡರಿಗೆ ವಾರ್ಷಿಕ ಗೌರವ ಪ್ರಶಸ್ತಿ

