ಸುದ್ದಿಮೂಲ ವಾರ್ತೆ ಬೀದರ್, ಡಿ.24:
ಪ್ರಧಾನಿ ನರೇಂದ್ರ ಮೋದಿಜಿ ಜಾರಿಗೆ ತಂದಿರುವ ಪ್ರಧಾನಮಂತ್ರಿಿ ಸಲ್ ಬಿಮಾ ಯೋಜನೆಯನ್ನು ಗೊಲ್ಮಾಾಲ್ ಯೋಜನೆ ಎಂದು ಕಳೆದ 10 ವರ್ಷಗಳಿಂದ ಬೊಬ್ಬೆೆ ಹೊಡೆಯುತ್ತಿಿರುವ ಈಶ್ವರ ಖಂಡ್ರೆೆ ತಲೆ ಮತ್ತು ಮನಸ್ಥಿಿತಿ ಎರಡು ಸರಿಯಿಲ್ಲ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.
ದಶಕಗಳಿಂದ ರೈತರನ್ನು ಶೋಷಣೆ ಮಾಡುತ್ತಾಾ ಬಂದಿರುವ ಈಶ್ವರ ಖಂಡ್ರೆೆ ಪರಿವಾರ, ಸಲ್ ಬಿಮಾ ಯೋಜನೆಯಂತಹ ಒಳ್ಳೆೆಯ ಯೋಜನೆ ಬಗ್ಗೆೆ ಅಪ್ರಪಚಾರ ಮಾಡುತ್ತಿಿರುವುದು ನಾಚಿಕೆಗೇಡು. ಇದಕ್ಕೆೆ ಈ ವರ್ಷ ಬೆಳೆ ಹಾಳಾದಾಗ ಬಂದಿರುವ ಪರಿಹಾರವೇ ದೊಡ್ಡ ಸಾಕ್ಷಿಯಾಗಿದೆ. ಇದನ್ನು ನೋಡಿಯಾದರೂ ಬಾಯಿ ಬಡೆದುಕೊಳ್ಳೊೊದು ನಿಲ್ಲಿಸಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿಿ ಸಲ್ ಬಿಮಾ ಯೋಜನೆಯಡಿ ಒಟ್ಟು 2,04,019 ರೈತರು, 1,22,061 ಹೇಕ್ಟರ ಪ್ರದೇಶಕ್ಕೆೆ ನೊಂದಣಿ ಮಾಡಿಸಿಕೊಂಡಿರುತ್ತಾಾರೆ, ಇದರಲ್ಲಿ ರೈತರು 9 ಕೋಟಿ 98 ಲಕ್ಷ, ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 17.96 ಕೋಟಿ ಪ್ರೀೀಮಿಯಮ್ ಭರಿಸಿವೆ. ಪ್ರಸಕ್ತ ಸಾಲಿನಲ್ಲಿ ಇನ್ಸುರೇನ್ಸ್ ಕಂಪನಿಗೆ ಒಟ್ಟು 45.91 ಕೋಟಿ ಮೊತ್ತದ ಪ್ರಿಿಮಿಯಮ್ ಹೋಗಿರುತ್ತದೆ.
ಅದಕ್ಕೆೆ ಎದುರಾಗಿ ಸಲ್ ಬಿಮಾ ಯೋಜನೆ ನಿಯಮದಂತೆ ಈ ವರ್ಷ ಅತಿವೃಷ್ಠಿಿಯಿಂದ ಹಾಳಾಗಿರುವ ಬೆಳೆಗೆ ಈಗಾಗಲೆ ಮಧ್ಯ ಋತುವಿನ ಪ್ರತಿಕೂಲ ಪರಿಸ್ಥಿಿತಿ ಅಡಿ 78,274 ರೈತರಿಗೆ 36.74 ಕೋಟಿ ಪರಿಹಾರ ರೈತರ ಖಾತೆಗೆ ಜಮೆಯಾಗಿದೆ, ಮುಂದಿನ ತಿಂಗಳು ಸ್ಥಳಿಯ ಪೃಕೃತಿ ವಿಕೋಪದಡಿ ದೂರು ದಾಖಲಿಸಿದ 88,886 ರೈತರಿಗೆ ರೂ. 42 ಕೋಟಿ ಪರಿಹಾರ ಖಂಡಿತವಾಗಿ ಜಮೆಯಾಗುತ್ತದೆ, ಒಟ್ಟು ಈ ವರ್ಷ 78.74 ಕೋಟಿ ಪರಿಹಾರ ಬರಲಿದೆ, ಇನ್ನು ಕ್ರಾಾಪ್ ಕಟಿಂಗ್ ಎಕ್ಸಪರಿಮೆಂಟ ಅಡಿಯಲ್ಲಿ ಪರಿಹಾರ ಮುಂದಿನ ದಿನಗಳಲ್ಲಿ ಬರುತ್ತದೆ ಎಂದು ಖೂಬಾ ಮಾಹಿತಿ ನೀಡಿದ್ದಾರೆ.
ಈ ವರ್ಷ ರೈತರು ಮತ್ತು ಸರ್ಕಾರ ಕಟ್ಟಿಿದ 45.91 ಕೋಟಿ ಪ್ರೀೀಮಿಯಮ್ಗೆ ಎದುರಾಗಿ ಮೊದಲ ಹಂತದಲ್ಲಿ ನಮ್ಮ ರೈತರು 78.74 ಕೋಟಿ ಪರಿಹಾರ ಬಂದಿರುತ್ತದೆ, ಕಟ್ಟಿಿದ ಪ್ರಿಿಮಿಯಮ್ಗಿಂತ ಹೆಚ್ಚಾಾಗಿ ಪರಿಹಾರ ಬಂದಿರುತ್ತದೆ. ಆದರೂ ಈಶ್ವರ ಖಂಡ್ರೆೆ ಸುಮ್ನೆೆ ಪುಂಗಿ ಊದುತ್ತಾಾ ಇದ್ದಾರೆ, ರೈತರು ಜಾಣರಾಗಿದ್ದಾರೆ, ಖಂಡ್ರೆೆ ಎಷ್ಟು ಅಪಪ್ರಚಾರ ಮಾಡಿದರೂ ಪ್ರತಿವರ್ಷ 2 ಲಕ್ಷಕ್ಕಿಿಂತ ಹೆಚ್ಚಿಿನ ರೈತರು ತಮ್ಮ ಬೇಳೆಗಳನ್ನು ನೊಂದಣಿ ಮಾಡಿಸುತ್ತಿಿದ್ದಾರೆ, ಇದನ್ನು ಅರ್ಥ ಮಾಡಿಕೊಂಡಾದರೂ ಈಶ್ವರ ಖಂಡ್ರೆೆ ಅಪಪ್ರಚಾರ ನಿಲ್ಲಿಸಬೇಕೆಂದು ಭಗವಂತ ಖೂಬಾ ಪತ್ರಿಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ಖಂಡ್ರೆ ಸಲ್ ಬಿಮಾ ಅಪಪ್ರಚಾರ ನಿಲ್ಲಿಸಲಿ : ಖುಬಾ ಆಗ್ರಹ

