ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಡಿ.24:
ಪಟ್ಟಣದ ಅಯ್ಯಪ್ಪಸ್ವಾಾಮಿ ದೇವಸ್ಥಾಾನದ 9ನೇ ವಾರ್ಷಿಕೋತ್ಸವ ಹಾಗೂ ಮಂಡಲ ಪೂಜೆ ನಿಮಿತ್ಯ ಮಾಲಾಧಾರಿಗಳು ಪಟ್ಟಣದ ಪ್ರಮುಖ ರಸ್ತೆೆಗಳಲ್ಲಿ ಅಯ್ಯಪ್ಪಸ್ವಾಾಮಿ ಉತ್ಸವಮೂರ್ತಿ ಮತ್ತು ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಿದರು.
ನಂತರ ಅನ್ನಸಂತರ್ಪಣೆ ನೆರವೇರಿತು.ಸಂಜೆ ದೀಪಾರಾಧನೆ, ಅಯ್ಯಪ್ಪಸ್ವಾಾಮಿ 18ಮೆಟ್ಟಿಿಲು ಪಡಿಪೂಜೆ, ಪುಷ್ಪಾಾಭಿಷೇಕ,ಪಾನಕ ನೈವೇದ್ಯ ಅರ್ಪಿಸಲಾಯಿತು. ಕೇರಳ ಮೂಲದ ಪ್ರಶಾಂತ್ ನಂಬೊದರಿ, ನೇತೃತ್ವದಲ್ಲಿ ಸಿದ್ರಾಾಮು ಗುರುಸ್ವಾಾಮಿ ನಗರಗುಂಡ ಅವರ ಸಹಕಾರದಲ್ಲಿ ಪೂಜಾ ಕಾರ್ಯಗಳು ನಡೆದವು. ಅಯ್ಯಪ್ಪಸ್ವಾಾಮಿ ದೇವಸ್ಥಾಾನದ ಸಮಿತಿ ಟ್ರಸ್ಟ ಅಧ್ಯಕ್ಷ ಮನೋಹರರೆಡ್ಡಿಿ ಮುನ್ನೂರು, ಕಾರ್ಯದರ್ಶಿ ಈರಣ್ಣ ಗುರುಸ್ವಾಾಮಿ, ಖಜಾಂಚಿ ಈ ಬಾಲನ್, ಮಾರೆಪ್ಪ ನಾಯಕ ಸೇರಿ ಇತರರು ಭಾಗವಹಿಸಿದ್ದರು.
ಲಿಂಗಸಗೂರು: ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ, ಭಾವಚಿತ್ರ ಮೆರವಣಿಗೆ

