ಸುದ್ದಿಮೂಲ ವಾರ್ತೆ ರಾಯಚೂರು, ಡಿ.24:
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರತಿಯೊಂದು ವ್ಯವಹಾರದಲ್ಲಿ ಪ್ರಾಾಮಾಣಿಕ ಮತ್ತು ಜವಾಬ್ದಾಾರಿಯುತವಾಗಿ ಕಾರ್ಯನಿರ್ವಸಿದರೆ ಮಾತ್ರ ಸಂಘದ ಅಭಿವೃದ್ಧಿಿ ಸಾಧ್ಯ ಎಂದು ರಾಯಚೂರು ಜಿಲ್ಲಾಾ ಸಹಕಾರ ಒಕ್ಕೂಟದ ಅಧ್ಯಕ್ಷ ಜಯಕುಮಾರ ಪಾಟೀಲ ಶಾವಂತಗೇರಿ ಹೇಳಿದರು.
ನಗರದ ಜೆ.ಸಿ. ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಯಚೂರು ಜಿಲ್ಲಾಾ ಸಹಕಾರ ಒಕ್ಕೂಟ, ರಾಯಚೂರು-ಕೊಪ್ಪಳ ಜಿಲ್ಲಾಾ ಕೇಂದ್ರ ಸಹಕಾರ ಬ್ಯಾಾಂಕ್, ಸಹಕಾರ ಇಲಾಖೆ ಹಾಗೂ ವಿವಿಧ ಸಹಕಾರ ಸಂಘಗಳ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡಿದ್ದ ರಾಯಚೂರು ಉಪ ವಿಭಾಗದಲ್ಲಿ 2024-25ನೇ ಸಾಲಿನಲ್ಲಿ ಸಹಕಾರ ಚುನಾವಣೆ ಜರುಗಿದ ವಿವಿಧ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಕಾರ್ಯದರ್ಶಿಗಳು ಸಂಘದ ಜೀವನಾಡಿ ಇದ್ದಂತೆ. ಸಂಪನ್ಮೂಲ ವ್ಯಕ್ತಿಿಗಳು ತಿಳಿಸುವ ವಿಷಯಗಳನ್ನು ಗಮನದಿಂದ ಆಲಿಸಿ, ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಸಂಘದ ನಿರ್ದೇಶಕ ಸ್ಥಾಾನಕ್ಕೆೆ ಸ್ಪರ್ಧೆ ಬಯಸುವ ವ್ಯಕ್ತಿಿಗಳು ತಮ್ಮ ಕುಟುಂಬದ ಆಸ್ತಿಿ ಘೋಷಣೆ ಮಾಡುವುದನ್ನು ಸಹಕಾರ ಕಾಯ್ದೆೆಯ ತಿದ್ದುಪಡಿಯಾಗಿ ಪ್ರಸ್ತುತ ಕಡ್ಡಾಾಯವಾಗಿ ಜಾರಿಯಾಗಿದ್ದು ತರಬೇತಿ ಹೊಂದದ ಸಂಘದ ಸಿಬ್ಬಂದಿಗಳು ಕಡ್ಡಾಾಯವಾಗಿ ತರಬೇತಿ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಉದ್ಘಾಾಟನೆ ಮಾಡಿದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶೇಖ್ ಹುಸೇನ್ ಮಾತನಾಡಿ ಸಂಪನ್ಮೂಲ ವ್ಯಕ್ತಿಿಗಳು ನೀಡುವ ಉಪನ್ಯಾಾಸದ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಿಗಳಾದ ನಿವೃತ್ತ ಸಹಾಯಕ ನಿಬಂಧಕ ಲಿಯಾಕತ್ ಅಲಿ ಸಹಕಾರ ಸಂಘಗಳಲ್ಲಿ ಆಡಳಿತ ಮಂಡಳಿ ಸದಸ್ಯರ ಹಕ್ಕು ಮತ್ತು ಜವಾಬ್ದಾಾರಿಗಳು, ಸಂಘದಲ್ಲಿ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಪಾತ್ರ ಮತ್ತು ಸಂಘಗಳ ಆಡಳಿತ ನಿರ್ವಹಣೆ ಕುರಿತು ಉಪನ್ಯಾಾಸ ನೀಡಿದರು.
ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾಾ ಸಹಕಾರ ಒಕ್ಕೂಟ ನಿರ್ದೇಶಕರಾದ ಎಸ್. ಜಿ. ಕಲ್ಲಯ್ಯಸ್ವಾಾಮಿ, ಶಶಿಧರ ಪಾಟೀಲ, ಟ್ಯಾಾಗೋರ ಸ್ಮಾಾರಕ ಶಿಕ್ಷಣ ಸಂಸ್ಥೆೆ ನಿರ್ದೇಶಕ ಶರಣರಡ್ಡಿಿ, ಸಂಘದ ಸಿಇಓ ವೈಘಿ.ಗಾಯತ್ರಿಿಘಿ, ಸಹಕಾರ ಶಿಕ್ಷಕರಾದ ಮಂಜುಳಾ, ಕೆ.ಅಶ್ವಿಿನಿ ಮುಂತಾದವರು ಉಪಸ್ಥಿಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸಹಕಾರ ಸಂಘದ ಜೀವನಾಡಿ – ಜಯಕುಮಾರ ಪಾಟೀಲ ಶಾವಂತಗೇರಿ

