ಸುದ್ದಿಮೂಲ ವಾರ್ತೆ ಮಾನ್ವಿ, ಡಿ.24:
ಕನ್ನಡ ನಾಡು, ನುಡಿ ರಕ್ಷಣೆ ನಮ್ಮೆೆಲ್ಲರ ಹೊಣೆಯಾಗಿದ್ದು ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾಾರಿ ನಮ್ಮ ಮೇಲಿದೆ ಎಂದು ಕಾಂಗ್ರೆೆಸ್ ಮುಖಂಡ ಬಾಲಸ್ವಾಾಮಿ ಕೊಡ್ಲಿಿ ಹೇಳಿದರು.
ಬುಧವಾರ ಪಟ್ಟಣದ ಬಾಲಕಿಯರ ಸರ್ಕಾರಿ ಪಿ.ಯು. ಕಾಲೇಜು ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ದತ್ತಿಿ ಉಪನ್ಯಾಾಸ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡುತ್ತಿಿದ್ದರು.
ಕ.ಸಾ.ಪ. ತಾಲೂಕು ಅಧ್ಯಕ್ಷ ಶರಣಬಸವ ನೀರಮಾನ್ವಿಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ದಾನಿಗಳಿಂದ ದತ್ತಿಿಯನ್ನು ಪಡೆದು ಶಾಲಾ ವಿದ್ಯಾಾರ್ಥಿಗಳಿಗೆ ಕನ್ನಡ ಸಾಹಿತಿಗಳನ್ನು ಹಾಗೂ ಕನ್ನಡ ಸಾಹಿತ್ಯವನ್ನು ಪರಿಚಯಿಸುವ ಕಾರ್ಯ ಮಾಡುತ್ತಿಿದೆ ಎಂದರು.
ದಿ.ದ್ಯಾಾಸನೂರು ತಿಪ್ಪಣ್ಣಶೆಟ್ಟಿಿ, ದಿ.ಕು, ಸೌಮ್ಯ ದ್ಯಾಾಸನೂರು ಮಾನ್ವಿಿ ಸ್ಮಾಾರಕ ದತ್ತಿಿ ವಿಷಯವಾದ ಶಿಕ್ಷಣ ಮತ್ತು ಸ್ವಾಾತಂತ್ರ, ಶಿಕ್ಷಣ ಅಂದು- ಇಂದು ಕುರಿತು ನಿವೃತ್ತ ಕನ್ನಡ ಉಪನ್ಯಾಾಸಕ ರೇವಣಸಿದ್ದಯ್ಯ ಹಿರೇಮಠ ಉಪನ್ಯಾಾಸ ನೀಡಿದರು.
ಕಾರ್ಯಕ್ರಮದಲ್ಲಿ ದತ್ತಿಿದಾನಿ ದ್ಯಾಾಸನೂರು ರಾಮಚಂದ್ರಶೆಟ್ಟಿಿ, ಡಾಕ್ಟರೇಟ್ ಪದವಿ ಪಡೆದ ಉಪನ್ಯಾಾಸಕ ಡಾ. ಸೈಯದ್ ಮಿನಾಜ್ ಉಲ್ ಹಸನ್, ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ತಡಕಲ್ ಇವರನ್ನು ಸನ್ಮಾಾನಿಸಲಾಯಿತು.
ವೇದಿಕೆಯ ಮೇಲೆ ಕಾಲೇಜಿನ ಪ್ರಾಾಚಾರ್ಯ ನಾಗಮಲ್ಲೇಶ, ಹಿರಿಯ ಮುಖಂಡರಾದ ಜಿ.ನಾಗರಾಜ, ಮಹಿಮೂದಾಬೇಗಂ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಹಂಪಣ್ಣ ಚಂಡೂರು, ರವಿಶರ್ಮಾ, ಲಕ್ಷ್ಮಣ ಜಾನೇಕಲ್, ಚನ್ನಬಸವ ಮಾಡಗಿರಿ, ಹನುಮಂತ ಕೋಟೆ ಮುಂತಾದವರು ಉಪಸ್ಥಿಿತರಿದ್ದರು.
ಮಾತೃಭಾಷೆ ಕನ್ನಡ ಉಳಿಸಿ, ಬೆಳೆಸಲು ಬಾಲಸ್ವಾಮಿ ಕೊಡ್ಲಿ ಸಲಹೆ

