ಸುದ್ದಿಮೂಲ ವಾರ್ತೆ ಬೀದರ್, ಡಿ.24:
ತೀವ್ರ ಸ್ವರೂಪದ ಆರ್ಥಿಕ ಸಂಕಟದಲ್ಲಿ ಸಿಲುಕಿರುವ ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಗೆ ಎನ್ಸಿಿಡಿಸಿಯಿಂದ 550 ಕೋಟಿ ರೂ. ಆರ್ಥಿಕ ನೆರವು ಕೊಡಿಸಲು ರಾಜ್ಯ ಸರಕಾರ ನೆರವಾಗಬೇಕು ಎಂದು ಕಾರಖಾನೆ ಅದ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿಿ ಮನವಿ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಕಬ್ಬು ಆಭಿವೃದ್ದಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಕಾರಖಾನೆ ಎದುರಿಸುತ್ತಿಿರುವ ಆರ್ಥಿಕ ಸಮಸ್ಯೆೆ ಮತ್ತು ಈ ಸಮಸ್ಯೆೆಗೆ ಕಾರಣವಾದ ಅಂಶಗಳ ಬಗ್ಗೆೆ ಸೂರ್ಯಕಾಂತ್ ನಾಗಮಾರಪಳ್ಳಿಿ ಅವರು ಕಬ್ಬು ಅಭಿವೃದ್ದಿ ಆಯುಕ್ತ ಗೋವಿಂದರೆಡ್ಡಿಿ ಅವರಿಗೆ ಸಂಪೂರ್ಣ ಮಾಹಿತಿ ನೀಡಿ ಮನವರಿಕೆ ಮಾಡಿಕೊಟ್ಟಿಿದ್ದಾರೆ.
ಕಾರಖಾನೆಯ ನಿರ್ಮಾಣಕ್ಕಾಾಗಿ ಮಾಡಿದ ಸಾಲ, ಎ್ಆರ್ಪಿಗಿಂತ ಅಧಿಕ ಬೆಲೆ ಪಾವತಿಸಿದ್ದರಿಂದ ಉಂಟಾದ ನಷ್ಟ, ಉಚಿತ ಸಕ್ಕರೆ ವಿತರಣೆಯಿಂದ ಆಗಿರುವ ನಷ್ಟ ಮತ್ತು ಬ್ಯಾಾಂಕ್ ಸಾಲದ ಬಡ್ಡಿಿ ಪಾವತಿಯಿಂದಾದ ಆರ್ಥಿಕ ಹೊರೆ ಕುರಿತು ಸೂರ್ಯಕಾಂತ್ ಅವರು ಮಾಹಿತಿ ನೀಡಿದ್ದಾರೆ.
ರೈತ ಸದಸ್ಯರು, ಖಾಯಂ ನೌಕರರು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋೋಗ ಮಾಡುವವರೂ ಸೇರಿದಂತೆ ಸುಮಾರು 2 ಲಕ್ಷ ಜನ ಈ ಕಾರಖಾನೆಯನ್ನು ಅವಲಂಬಿಸಿದ್ದಾರೆ. ತೀವ್ರ ಸ್ವರೂಪದ ಆರ್ಥಿಕ ಸಮಸ್ಯೆೆಯಿಂದಾಗಿ ಕಾರಖಾನೆಯನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟಸಾಧ್ಯವಾಗಿದ್ದು, ಕಾರಖಾನೆ ಬಂದ್ ಆದಲ್ಲಿ, 2 ಲಕ್ಷ ಜನರ ಬದುಕು ಪ್ರಭಾವಿತವಾಗುತ್ತದೆ. ಕಬ್ಬು ಬೆಳೆಗಾರರು ತೀವ್ರ ಸಂಕಟಕ್ಕೆೆ ಸಿಲುಕಿ ಇನ್ನಷ್ಟು ಸಮಸ್ಯೆೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸೂರ್ಯಕಾಂತ್ ತಿಳಿಸಿದ್ದಾರೆ.
ರಾಜ್ಯ ಸರಕಾರವು ಸಹಕಾರಿ ಕ್ಷೇತ್ರದ 5 ಕಾರಖಾನೆಗಳಿಗೆ ಎನ್ಸಿಿಡಿಸಿಯಿಂದ ಆರ್ಥಿಕ ನೆರವು ಕೊಡಿಸಲು ಪ್ರಸ್ತಾಾವನೆ ಸಲ್ಲಿಸಿದೆ. ಈ ಐದು ಕಾರಖಾನೆಗಳೊಂದಿಗೆ ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ಪ್ರಸ್ತಾಾವನೆಯನ್ನೂ ಎನ್ಸಿಿಡಿಸಿಗೆ ಸಲ್ಲಿಸಬೇಕು. ಇತರ ಸಹಕಾರಿ ಕಾರಖಾನೆಗಳ ಮಾದರಿಯಲ್ಲಿ ನಾರಂಜಾ ಕಾರಖಾನೆಯೂ ಎನ್ಸಿಿಡಿಸಿ ಸಾಲ ಪಡೆಯಲು ಖಾತರಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಎನ್ಸಿಿಡಿಸಿಯಿಂದ 550 ಕೋಟಿ ರೂ. ಆರ್ಥಿಕ ನೆರವು ಕೊಡಿಸಬೇಕು. ಇದರಲ್ಲಿ ಡಿಸಿಸಿ ಬ್ಯಾಾಂಕಿನ ಅಸಲು ಸಾಲ 57.90 ಕೋಟಿ ಮತ್ತು ಅಪೆಕ್ಸ್ ಬ್ಯಾಾಂಕಿನ 40 ಕೋಟಿ ಪಾವತಿಸಿ,ಉಳಿದ ಮೊತ್ತವನ್ನು 60 ಕೆಪಿಎಲ್ಡಿಿ ಸಾಮರ್ಥ್ಯದ ಎಥೆನಾಲ್ ಘಟಕ ಸ್ಥಾಾಪನೆ ಮತ್ತು ದುಡಿಯುವ ಬಂಡವಾಳಕ್ಕೆೆ ಬಳಸಲಾಗುತ್ತದೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿಿ ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ಬೀದರ್ ಜಿಲ್ಲೆಯ ರೈತರ ಹಿತದೃಷ್ಟಿಿಯಿಂದ ನಾರಂಜಾ ಕಾರಖಾನೆಗೆ ಎನ್ಸಿಿಡಿಸಿಯಿಂದ ಆರ್ಥಿಕ ನೆರವು ಕೊಡಿಸಿ, ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.
ನಾರಂಜಾ ಕಾರಖಾನೆ ಎನ್ಸಿಡಿಸಿ 550 ಕೋಟಿ ರೂ. ಆರ್ಥಿಕ ನೆರವಿಗೆ ರಾಜ್ಯ ಸರಕಾರದ ಖಾತರಿ : ನಾಗಮಾರಪಳ್ಳಿ ಮನವಿ

