ಸುದ್ದಿಮೂಲ ವಾರ್ತೆ ಮಾನ್ವಿ, ಡಿ.24:
ಮಾನ್ವಿಿ ಪಟ್ಟಣದ ಬಿ.ವಿ.ಆರ್ ಇ-ಟೆಕ್ನೋೋ ಶಾಲೆಯಲ್ಲಿ ಬುಧವಾರ ಮಕ್ಕಳಿಂದ ಕ್ರಿಿಸ್ ಮಸ್ ಹಬ್ಬ ಆಚರಿಸಲಾಯಿತು.
ಶಾಲಾ ಮಕ್ಕಳು ಕ್ರಿಿಸ್ಮಸ್ಗೆ ಸಂಬಂಧಿಸಿದ ಛದ್ಮವೇಷವನ್ನು ಧರಿಸಿ ಎಲ್ಲರ ಗಮನ ಸೆಳೆದರು. ಶಾಲೆಯ ದೈಹಿಕ ಶಿಕ್ಷಕರಾದ ಇಸಾಕ್ ಹಾಗೂ ಅಲ್ಬರ್ಟ್ ಕ್ರಿಿಸ್ ಮಸ್ ಸಂದೇಶ ನೀಡಿದರು.
ಬೈಬಲ್ ಗ್ರಂಥ ವಾಚನವನ್ನು 9 ನೇ ತರಗತಿ ವಿದ್ಯಾಾರ್ಥಿನಿ ಕು.ಪ್ರವಲ್ಲಿಕಾ ಮಾಡಿದರು. ಶಾಲಾ ಶಿಕ್ಷಕಿಯರಾದ ಕು.ಸುನಿತಾ ಹಾಗೂ ತ್ರಿಿವೇಣಿಯವರ ನೃತ್ಯ ಸಂಯೋಜನೆಯಲ್ಲಿ ಶಾಲಾ ವಿದ್ಯಾಾರ್ಥಿನಿಯರಾದ ಆರಾಧ್ಯ ಮತ್ತು ಸಂಗಡಿಗರು, ಸಾಕ್ಷಿ ಮತ್ತು ಸಂಗಡಿಗರು ನೃತ್ಯ ಪ್ರದರ್ಶಿಸಿದರು.
ಕಾರ್ಯಕ್ರಮದ ನಿರೂಪಣೆ ಶಾಲೆಯ ಶಿಕ್ಷಕ ಶ್ರೀಕಾಂತ ತಡಕಲ್ ನಡೆಸಿಕೊಟ್ಟರು. ಪ್ರಾಾರ್ಥನಾ ಗೀತೆಯನ್ನು ವಿದ್ಯಾಾರ್ಥಿನಿ ಕು.ಪ್ರವಲ್ಲಿಕಾ ಹಾಗೂ ಸಂಗಡಿಗರು ಹಾಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆೆಯ ಅಧ್ಯಕ್ಷ ಬಿ.ವಿ.ರೆಡ್ಡಿಿ, ಕಾರ್ಯದರ್ಶಿ ಬಿ.ಪದ್ಮಾಾವತಿ, ಮುಖ್ಯೋೋಪಾಧ್ಯಾಾಯ ಸರಮತ್ ಖಾನ್, ಶಾಲಾ ಶಿಕ್ಷಕರು, ಪಾಲಕರು, ಮಕ್ಕಳು ಭಾಗವಹಿಸಿದ್ದರು.
ಮಾನ್ವಿ : ಬಿವಿಆರ್ ಶಾಲಾ ಮಕ್ಕಳಿಂದ ಕ್ರಿಸ್ಮಸ್ ರೂಪಕ ಪ್ರದರ್ಶನ

