ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.25:
ತೀವ್ರ ಕುತೂಹಲ ಮೂಡಿಸಿರುವ ಕಾಂಗ್ರೆೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಗೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರನ್ನು ಆಹ್ವಾಾನಿಸಲಾಗಿದ್ದು, ಸಿಎಂ ಶುಕ್ರವಾರ ನವದೆಹಲಿಗೆ ತೆರಳಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾಾನ ಬಂದಿಲ್ಲ.
ದೆಹಲಿಯ ಇಂದಿರಾ ಭವನದಲ್ಲಿ ಡಿ.27 ರಂದು ಸಿಡಬ್ಲ್ಯೂಸಿ ಸಭೆ ಅಯೋಜನೆಗೊಂಡಿದೆ. ಈ ಸಭೆಯಲ್ಲಿ ಭಾಗಿಯಾಗುವಂತೆ ಕಾಂಗ್ರೆೆಸ್ ಅಧಿಕಾರದಲ್ಲಿರುವ ಕರ್ನಾಟಕ ಸೇರಿ ಮೂರು ರಾಜ್ಯಗಳ ಮುಖ್ಯಮಂತ್ರಿಿಗಳಿಗೆ ಆಹ್ವಾಾನ ನೀಡಲಾಗಿದೆ.
ಮುಖ್ಯಮಂತ್ರಿಿ ಸಿದ್ದರಾಮಯ್ಯ ಜೊತೆ ತೆಲಂಗಾಣದ ರೇವಂತ್ ರೆಡ್ಡಿಿ, ಹಿಮಾಚಲ ಪ್ರದೇಶದ ಸುಖ್ವಿಿಂದರ್ ಸಿಂಗ್ ಸುಖು ಭಾಗಿಯಾಗಲಿದ್ದಾರೆ. ಇದರ ಜೊತೆಗೆ ಕರ್ನಾಟಕದ ಸಿಡಬ್ಲ್ಯುಸಿ ಸದಸ್ಯರಾದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹಾಗೂ ಮಾಜಿ ಮುಖ್ಯಮಂತ್ರಿಿ ವೀರಪ್ಪ ಮೊಯ್ಲಿಿ ಪಾಲ್ಗೊೊಳ್ಳಲಿದ್ದಾರೆ.
ಈ ಮೊದಲು ಸಿಡಬ್ಲ್ಯೂಸಿ ಸಭೆಗೆ ನನಗೆ ಆಹ್ವಾಾನವಿಲ್ಲ ಎಂದು ಸಿಎಂ ಹೇಳಿದ್ದರು. ಈಗ ನಾಳೆ ಸಿಎಂ ದೆಹಲಿಗೆ ಹೋಗುವುದು ಅಧಿಕೃತವಾಗಿದೆ. ಶುಕ್ರವಾರ ಸಂಜೆ ವಿಶೇಷ ವಿಮಾನದಲ್ಲಿ ತೆರಳಲಿರುವ ಸಿಎಂ ರಾತ್ರಿಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಬೆಳಗ್ಗೆೆ 10.30ಕ್ಕೆೆ ಸಿಡಬ್ಲ್ಯೂಸಿ ಸಭೆ ನಿಗದಿಯಾಗಿದ್ದು, ಸಭೆ ಬಳಿಕ ಸಂಜೆ 4ಕ್ಕೆೆ ನವದೆಹಲಿಯಿಂದ ಹೊರಟು ಸಂಜೆ 6ಕ್ಕೆೆ ಬೆಂಗಳೂರಿಗೆ ಮರಳಲಿದ್ದಾರೆ.
ಸಿಡಬ್ಲ್ಯೂಸಿ ಸಭೆ ನೆಪದಲ್ಲಿ ನವದೆಹಲಿಗೆ ತೆರಳುತ್ತಿಿರುವ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನಡೆಯುತ್ತಿಿರುವ ಅಧಿಕಾರ ಹಂಚಿಕೆಯ ಗೊಂದಲ ಬಗ್ಗೆೆ ಹೈಕಮಾಂಡ್ ನಾಯಕರ ಗಮನಕ್ಕೆೆ ತರುವ ಸಾಧ್ಯತೆಗಳಿವೆ. ಮುಖ್ಯಮಂತ್ರಿಿ ಕುರ್ಚಿ ಬದಲಾಗಬೇಕು ಎಂದು ಕೆಲವರು ಅನಗತ್ಯ ಗೊಂದಲ ಎಬ್ಬಿಿಸುತ್ತಿಿದ್ದು, ಇದು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಪ್ರತಿಪಕ್ಷಗಳಿಗೂ ಅನಗತ್ಯ ಅಸವಾಗಿದೆ. ಇದಕ್ಕೆೆ ಕಡಿವಾಣ ಹಾಕುವಂತೆ ನೇರವಾಗಿ ಹೈಕಮಾಂಡ್ ನಾಯಕರಿಗೆ ಮನದಟ್ಟು ಮಾಡುವ ಸಾಧ್ಯತೆಗಳನ್ನೂ ತಳ್ಳಿಿಹಾಕುವಂತಿಲ್ಲ.
ಸಿಡಬ್ಲ್ಯೂಸಿ ಸಭೆ ಅಜೆಂಡಾ:
ಐದು ರಾಜ್ಯಗಳ ಚುನಾವಣೆ, ಮತಗಳ್ಳತನದ ಹೋರಾಟ ಮುಂದುವರಿಸುವುದು, ನ್ಯಾಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರ ಮೂಲಕ ಅನಗತ್ಯ ಕಿರುಕುಳ ನೀಡುವುದಕ್ಕೆೆ ಮುಂದಾದ ಕೇಂದ್ರ ಸರ್ಕಾರದ ಕ್ರಮ ಖಂಡಿಸುವುದು ಮತ್ತು ಮುಖ್ಯವಾಗಿ ಮಹಾತ್ಮಾಾಗಾಂಧಿ ಗ್ರಾಾಮೀಣ ಉದ್ಯೋೋಗ ಖಾತ್ರಿಿ ಯೋಜನೆಯಿಂದ ಮಹಾತ್ಮಾಾಗಾಂಧಿ ಹೆಸರನ್ನು ಕೈಬಿಟ್ಟಿಿರುವುದಲ್ಲದೆ ಕೇಂದ್ರದ ಅನುದಾನ ಶೇ.60ಕ್ಕೆೆ ಇಳಿಕೆ ಮಾಡಿರುವುದು ಮುಂತಾದ ವಿಚಾರಗಳ ಬಗ್ಗೆೆ ಹೋರಾಟ ರೂಪಿಸಲು ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿಿದೆ.

