ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.25:
ನಮ್ಮ ಸ್ವಯಂಕೃತ ಅಪರಾಧದಿಂದ ವಿಪಕ್ಷದಲ್ಲಿದ್ದೇವೆ. 2028ರಲ್ಲಿ ಅಥವಾ ನಾಳೆ ಚುನಾವಣೆ ನಡೆದರೂ ಕರ್ನಾಟಕದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆೆ ಬರುತ್ತದೆ ಎಂದು ಬಿಜೆಪಿ ರಾಜ್ಯಾಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಮಾಜಿ ಪ್ರಧಾನಮಂತ್ರಿಿ, ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ ಅಂಗವಾಗಿ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಜನವಿರೋಧಿ, ಬಡವರ ವಿರೋಧಿ ಕಾಂಗ್ರೆೆಸ್ ಸರಕಾರದ ವಿರುದ್ಧ ಜನಾಕ್ರೋೋಶ ಹೆಚ್ಚಾಾಗಿದೆ. ಜನರು ಆಕ್ರೋೋಶ ಹೊರಹಾಕುತ್ತಿಿದ್ದಾರೆ ಎಂದರು.
ನಾವ್ಯಾಾರೂ ಆತಂಕ ಪಡಬೇಕಿಲ್ಲ. 2028ರಲ್ಲಿ ಅಥವಾ ನಾಳೆ ಚುನಾವಣೆ ನಡೆದರೂ ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಶಕ್ತಿಿಯ ಮೇಲೆ 130-140 ಶಾಸಕರೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆೆ ಬರಲಿದೆ. ನಾವೆಲ್ಲರೂ ಇದಕ್ಕಾಾಗಿ ಪಕ್ಷವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.
ಅಸ್ತಿಿತ್ವ ಕಳಕೊಳ್ಳುತ್ತಿಿರುವ ಕಾಂಗ್ರೆೆಸ್ಸಿಿನ ಸ್ಥಿಿತಿಯನ್ನು ರಾಜ್ಯದ ಪಟ್ಟಣ ಪಂಚಾಯಿತಿ ಚುನಾವಣೆ ತೋರಿಸಿಕೊಟ್ಟಿಿದೆ ಎಂದರು. ಇವಿಎಂ ಇರಲಿ ಅಥವಾ ಬ್ಯಾಾಲೆಟ್ ಇರಲಿ ಕಾಂಗ್ರೆೆಸ್ಸಿಿನ ಹಣೆಬರಹ ಬದಲಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಅಟಲ್ಜೀ ಹೆಸರಿನ ಉಚ್ಚಾಾರಣೆಯೇ ನಮಗೆ ರೋಮಾಂಚನವನ್ನುಂಟು ಮಾಡುತ್ತದೆ. ಆ ಹೆಸರು ಪ್ರೇೇರಣೆ, ಉತ್ಸಾಾಹ ತುಂಬುತ್ತದೆ. ಅಂಥ ಶ್ರೇೇಷ್ಠ ವ್ಯಕ್ತಿಿತ್ವ ಅವರದು. ಕಾಂಗ್ರೆೆಸ್ಸಿಿನವರು ಬಿಜೆಪಿ ಅಲ್ಪಸಂಖ್ಯಾಾತರ ವಿರೋಧಿ ಎನ್ನುತ್ತಾಾರೆ. ವಾಜಪೇಯಿ, ಮೋದಿ ಅಥವಾ ಬಿಜೆಪಿ ಅಲ್ಪಸಂಖ್ಯಾಾತರ ವಿರೋಧಿಯಲ್ಲ. ಯಾರು ಪಾಕಿಸ್ತಾಾನ್ ಜಿಂದಾಬಾದ್ ಎನ್ನುತ್ತಾಾರೋ ಅಂಥ ದೇಶದ್ರೋಹಿಗಳನ್ನು ಬಿಜೆಪಿ ವಿರೋಧಿಸುತ್ತದೆ ಎಂದು ತಿಳಿಸಿದರು.
ವಾಜಪೇಯಿ ಅವರು ಹಲವಾರು ಬಾರಿ ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಯಡಿಯೂರಪ್ಪ, ಶಂಕರಮೂರ್ತಿ, ರಾಮಚಂದ್ರೇೇಗೌಡ, ಜಗದೀಶ ಶೆಟ್ಟರ್, ಪಕ್ಷದ ಹಿರಿಯರಿಗೆ ಪ್ರೇೇರಣೆ ನೀಡಿದ ಮಹಾನ್ ನಾಯಕರು. ಕರ್ನಾಟಕವು ಮುಂದೊಂದು ದಿನ ದಕ್ಷಿಣ ಭಾರತದಲ್ಲಿ ಬಿಜೆಪಿಯ ಭದ್ರ ಕೋಟೆ ಆಗಲಿದೆ ಎಂಬ ದೂರದೃಷ್ಟಿಿತ್ವ ಅವರಲ್ಲಿತ್ತು. ಕಾರ್ಯಕರ್ತರ ಕುರಿತು ಅದಮ್ಯ ವಿಶ್ವಾಾಸ ಅವರದಾಗಿತ್ತು ಎಂದು ವಿವರಿಸಿದರು.
ಅಟಲ್ ಜೀ ಅವರ ಕುರಿತಾದ ಸಾಹಿತ್ಯ ಕಿರು ಹೊತ್ತಗೆಯನ್ನು ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಿ ಮತ್ತು ಸಂಸದ ಜಗದೀಶ್ ಶೆಟ್ಟರ್ ಅವರು ಬಿಡುಗಡೆ ಮಾಡಿ ಮಾತನಾಡಿದರು.
ಈ ವೇಳೆ ಅವರು, ಅಟಲ್ ಜೀ ಅವರ ಜೊತೆಗಿನ ಒಡನಾಟ ನೆನಪಿಸಿದರು. ಪೋಖ್ರಾಾನ್ ಅಣು ಪರೀಕ್ಷೆ ದೇಶಕ್ಕೆೆ ಹೆಮ್ಮೆೆ. ಇದಕ್ಕೆೆ ಅಟಲ್ ಬಿಹಾರಿ ವಾಜಪೇಯಿ ಅವರು ಕಾರಣ. ವಾಜಪೇಯಿ ಅವರು ಇವತ್ತಿಿಗೂ ನಮ್ಮ ಮನಸ್ಸಿಿನಲ್ಲಿ ಇದ್ದಾರೆ ಎಂದು ತಿಳಿಸಿದರು. ಹಿಂದುಳಿದ ವರ್ಗ, ದಲಿತರ ಒಳಿತಿಗೆ ಹೆಚ್ಚಿಿನ ಒತ್ತು ಕೊಡುವಂಥ ಕೆಲಸ ಮಾಡಿದ್ದಾರೆ ಎಂದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಾಮಿ ಮಾತನಾಡಿ, ಅಟಲ್ ಜೀ ಅವರದು ನಿಷ್ಕಳಂಕ ನಾಯಕತ್ವ. ಅದರ ಮೂಲಕ ಅವರು ಉತ್ತಮ ನಾಯಕರಾಗಿ ಹೊರಹೊಮ್ಮಿಿದ್ದಾರೆ ಎಂದು ವಿವರಿಸಿದರು. ಬ್ಯಾಾಲೆಟ್ ಪೇಪರ್ನಲ್ಲಿ ನಮ್ಮ ಪರವಾಗಿ ನಿನ್ನೆೆ ಲಿತಾಂಶ ಬಂದಿದೆ. ಇದಕ್ಕಾಾಗಿ ರಾಜ್ಯಾಾಧ್ಯಕ್ಷ ವಿಜಯೇಂದ್ರರಿಗೆ ಸಿಹಿ ತಿನ್ನಿಿಸಲು ಮನವಿ ಮಾಡಿದರು. ಹಾಗಿದ್ದರೆ ಮತಗಳ್ಳತನ ಮಾಡಿದ್ದು ಯಾರು ಎಂದೂ ಅವರು ಪ್ರಶ್ನಿಿಸಿದರು. ಕಾಂಗ್ರೆೆಸ್ ಮತಗಳ್ಳರ ಪಕ್ಷ; ನಮ್ಮದು ದಿಲ್ ಚೋರಿ ಪಕ್ಷ ಎಂದು ವಿಶ್ಲೇಷಣೆ ಮಾಡಿದರು. ಬಿಜೆಪಿ ರಾಜ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ರಾಜ್ಯ ಮುಖ್ಯ ವಕ್ತಾಾರ ಅಶ್ವತ್ಥನಾರಾಯಣ್, ರಾಜ್ಯ ಕಾರ್ಯಕಾರಿಣಿ ವಿಶೇಷ ಆಹ್ವಾಾನಿತರಾದ ಪೂರ್ಣಿಮಾ ಶ್ರೀನಿವಾಸ್, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಾಮಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಅಟಲ್ ಶತಮಾನೋತ್ಸವ ಕಾರ್ಯಕ್ರಮದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಮತ್ತು ಪಕ್ಷದ ಮುಖಂಡರು ಉಪಸ್ಥಿಿತರಿದ್ದರು.
ನಮ್ಮ ಸ್ವಯಂಕೃತ ಅಪರಾಧದಿಂದ ವಿಪಕ್ಷದಲ್ಲಿದ್ದೇವೆ ನಾಳೆಯೇ ಚುನಾವಣೆ ನಡೆದರೂ ಬಿಜೆಪಿ ಅಧಿಕಾರಕ್ಕೆೆ: ವಿಜಯೇಂದ್ರ

