ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ಕವಿತೆ ಎನ್ನುವುದು ಗುಬ್ಬಚ್ಚಿಿ ಗೂಡು ಇದ್ದ ಹಾಗೆ ಅದನ್ನು ಹೆಣೆಯುವಂತ ನವಿರತೆ, ಕಟ್ಟುವ ಕಲೆ ಸಿದ್ಧಿಿಸಿರುವ ಕವಿಗೆ ಕಾವ್ಯ ಒಲಿಯುತ್ತದೆ ಎಂದು ದೆಹಲಿಯ ಸಹಪ್ರಾಾಧ್ಯಾಾಪಕ ಡಾ. ರಮೇಶ ಅರೋಲಿ ಹೇಳಿದರು.
ಆಕಾಶವಾಣಿಯಲ್ಲಿ ನಡೆದ ಬಾನುಲಿ ಕವಿಗೋಷ್ಠಿಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು . ಕವಿತೆ ಏಕಾಂತದ ಪಿಸುಮಾತು ಮತ್ತು ಸಮುದಾಯಿಕವಾಗಿ ಹುಟ್ಟುವ ಗಾನ ಕೂಡ ಹೌದು. ನಮ್ಮ ಎಲ್ಲ ಅಭಿವ್ಯಕ್ತಿಿಯ ತುತ್ತತುದಿ ಅದು ಕಾವ್ಯ ಪ್ರಕಾರವಾಗಿದೆ. ಬೇರೆ ಬೇರೆ ಅಭಿವ್ಯಕ್ತಿಿಯ ಪ್ರಕಾರಗಳು ಇದ್ದರೂ ಕೂಡ ಕವಿತೆ ಏಕಾಂತದ ಮಾತು ಆಗಿದ್ದರೂ, ಅದು ಇನ್ನೊೊಬ್ಬರ ಏಕಾಂತದ ಮಾತು ಕೂಡ ಆಗಿರುತ್ತದೆ ಎಂದು ಅಭಿಪ್ರಾಾಯ ಪಟ್ಟರು.
ಕವಿತೆ ನನ್ನ ಮಾತು ನನ್ನ ದ್ವನಿ ಅಂತ ಹೇಳಲು ಸಾಧ್ಯವಿಲ್ಲ, ಪ್ರಪಂಚದ ಶ್ರೇೇಷ್ಠ ಕೃತಿಕಾರರನ್ನು ನೋಡಿದಾಗ, ಶೇಕ್ಸ್ಪಿಯರನಂತಹ ಶ್ರೇಷ್ಠ ಕವಿಗಳು ಗಡಿ ಎಲ್ಲೆಗಳನ್ನು ಮೀರಿ ಬೆಳೆದು ನಮಗೆ ತಲುಪಿದ್ದು ಮತ್ತು ಮನುಷ್ಯನ ಮೂಲಭೂತ ಗುಣ, ಮನುಷ್ಯನ ಸ್ವಾಾಭಾವಿಕ ನಡೆಗಳು ಆತನ ಆಲೋಚನೆ ಮತ್ತು ಮಹತ್ವಾಾಕಾಂಕ್ಷೆೆಗಳ ಬಗ್ಗೆೆ ಬರೆದದ್ದೆೆ ಕಾರಣ ಎಂದರು.
ಮುಕ್ತ ಕವಿತೆಗಿಂತ ಹಾಡುಗವಿತೆ ಇರುವ ಸಂವಹನಶಕ್ತಿಿ ಬಹಳ ದೊಡ್ಡದು ಆ ಕೆಲಸವನ್ನು ಆಕಾಶವಾಣಿ ನಿರಂತರ ಮಾಡುತ್ತ ಬಂದಿದೆ ಎಂದರು.
ಧಾರವಾಡದ ಸಾಹಿತಿ ಟಿ ಎಸ್ ಗೊರವರ ಮಾತನಾಡಿ, ಕಾವ್ಯ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿಿದೆ, ಕನ್ನಡ ಕಾವ್ಯದಲ್ಲಿ ನೆನಪಿನಲ್ಲಿ ಉಳಿಯುವಂತ ಸಾಲುಗಳು ಬರುತ್ತಿಿಲ್ಲ ಎಂದರು.
ಹತ್ತು ಹನ್ನೆೆರಡು ವರ್ಷಗಳ ಹಿಂದಿನ ಕಾವ್ಯವು ಭಾಷೆ ದೃಷ್ಟಿಿಯಿಂದ, ರೂಪಕಗಳು ಸೃಷ್ಟಿಿಯಿಂದ ಅಥವಾ ವಸ್ತುವನ್ನು ನಿರ್ವಹಿಸುವ ರೀತಿಯಿಂದ ಇರಬಹುದು. ಕಾವ್ಯ ನಮ್ಮನ್ನು ಕಲಕುತ್ತಿಿತ್ತು ನಮ್ಮ ಒಳಗಿನ ಅಂತರಂಗವನ್ನು ತಲುಪುತ್ತಿಿತ್ತು. ಇತ್ತೀಚಿನ ವರ್ತಮಾನದಲ್ಲಿ ನಮ್ಮನ್ನು ಅಲುಗಾಡಿಸುವಂತಹ ಕಾವ್ಯ ಬರುತ್ತಿಿಲ್ಲ ಎಂದು ಅಭಿಪ್ರಾಾಯಪಟ್ಟರು.
ಈ ಸಂದರ್ಭದಲ್ಲಿ ಕಥೆಗಾರರಾದ ಅಮರೇಶ್ ಗಿಣಿವಾರ ಮಾತನಾಡಿದರು.
15 ಜನ ಕವಿಗಳು ಭಾಗವಹಿಸಿ ಉತ್ತಮ ಕವಿತೆಗಳ ವಾಚನ ಮಾಡಿದರು.
ಈ ಕವಿಗೋಷ್ಠಿಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ವಹಿಸಿದ್ದರು. ತಾಂತ್ರಿಿಕ ವಿಭಾಗದ ಮುಖ್ಯಸ್ಥ ಅರವಿಂದಾಕ್ಷಣ, ಸಿಬ್ಬಂದಿಗಳಾದ ನಾಗಮಣಿ, ಅರಸು, ಆಂಜನೇಯ ಸೇರಿ ಸಾಹಿತಿಗಳಿದ್ದರು.
ಬಾನುಲಿಯಲ್ಲಿ ಕವಿಗೋಷ್ಠಿಿ ಕಲೆ ಸಿದ್ಧಿಿಸಿದ ಕವಿಗೆ ಕಾವ್ಯ ಒಲಿಯುತ್ತದೆ-ಡಾ. ರಮೇಶ

