ಸುದ್ದಿಮೂಲ ವಾರ್ತೆ ಚಿತ್ರದುರ್ಗ, ಡಿ.25:
ಬೆಂಗಳೂರಿನಿಂದ ಗೋಕರ್ಣಕ್ಕೆೆ ತೆರಳುತ್ತಿಿದ್ದ ಖಾಸಗಿ ಬಸ್ಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಬಳಿ ಕಂಟೇನರ್ ಲಾರಿ ಡಿಕ್ಕಿಿ ಹೊಡೆದ ಪರಿಣಾಮ ಆರು ಮಂದಿ ಸಜೀವ ದಹನಗೊಂಡು, 21 ಮಂದಿ ಗಾಯಗೊಂಡ ಘಟನೆ ಗುರುವಾರ ನಸುಕಿನ ಜಾವ ಸಂಭವಿಸಿದೆ.
ಮೃತರನ್ನು ಬಿಂದು ಹಾಗೂ ಅವರ ಪುತ್ರಿಿ ಗ್ರೇೇಯಾ, ನವ್ಯಾಾ, ರಶ್ಮಿಿ, ಮಾನಸ ಹೀಗೆ ಒಟ್ಟು ಐವರು ಮೃತಪಟ್ಟಿಿದ್ದಾರೆ. ಈ ಬಸ್ಗೆ ಡಿಕ್ಕಿಿ ಹೊಡೆದ ಹರಿಯಾಣ ಮೂಲದ ಲಾರಿ ಚಾಲಕ ಸಹ ಮೃತಪಟ್ಟಿಿದ್ದು, ಘಟನೆಯಲ್ಲಿ ಒಟ್ಟಾಾರೆ ಆರು ಮಂದಿ ಮೃತಪಟ್ಟಿಿದ್ದಾರೆ ಎಂದು ಚಿತ್ರದುರ್ಗ ಪೊಲೀಸ್ ವರಿಷ್ಠಾಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದ್ದಾರೆ.
ಸೀ ಬರ್ಡ್ ಹೆಸರಿನ ನಾನ್ ಎಸಿ ಸ್ಲೀಪರ್ ಬಸ್ ಬೆಂಗಳೂರಿನಿಂದ ಗೋಕರ್ಣಕ್ಕೆೆ ತೆರಳುತ್ತಿಿತ್ತು. ಬೆಂಗಳೂರನ್ನು ರಾತ್ರಿಿ 12 ಗಂಟೆಗೆ ಬಿಟ್ಟಿಿತ್ತು. ಬಸ್ನಲ್ಲಿ ಚಾಲಕ ಹಾಗೂ ನಿರ್ವಾಹಕ ಸೇರಿ 32 ಮಂದಿ ಇದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಬಸ್ ಚಲಿಸುತ್ತಿಿತ್ತು. ಆದರೆ, ಎದುರಿಗಡೆಯಿಂದ ಬರುತ್ತಿಿದ್ದ ಕಂಟೇನರ್ ಲಾರಿ ವೇಗವಾಗಿ ಬಂದು ಡಿವೈಡರ್ಗೆ ಡಿಕ್ಕಿಿ ಹೊಡೆದು ಅದರ ರಭಸಕ್ಕೆೆ ಡಿವೈಡರ್ ದಾಟಿ ರಸ್ತೆೆಯ ಈ ಬದಿಗೆ ಬಂದು ಬಸ್ಗೆ ಡಿಕ್ಕಿಿ ಹೊಡೆದಿದೆ. ನೇರವಾಗಿ ಡೀಸೆಲ್ ಟ್ಯಾಾಂಕ್ ಬಳಿಯೇ ಡಿಕ್ಕಿಿ ಹೊಡೆದಿದ್ದರಿಂದ ಇದ್ದಕ್ಕಿಿದ್ದಂತೆ ಬೆಂಕಿಯೂ ಹೊತ್ತಿಿಕೊಂಡಿದೆ.
ಬಸ್ಗೆ ಬೆಂಕಿ ಹೊತ್ತಿಿಕೊಳ್ಳುತ್ತಿಿದ್ದಂತೆ ಗಾಢ ನಿದ್ರೆೆಯಲ್ಲಿದ್ದವರು ಗಾಬರಿಯಿಂದ ಬಸ್ನಿಂದ ಕೆಳೆಗೆ ಇಳಿಯಲು ಪ್ರಯತ್ನಿಿಸಿದ್ದಾರೆ. ಕೆಲವರು ಬಸ್ ಇಳಿದು ದೂರ ಓಡಿದ್ದಾರೆ. ಬಸ್ ಇಳಿಯಲು ಸಾಧ್ಯವಾಗದವರು ಒಳಗೇ ಸಜೀವವಾಗಿ ಸುಟ್ಟು ಕರಕಲಾಗಿದ್ದಾರೆ. ಗಾಯಗೊಂಡವರಲ್ಲಿ 11 ಮಂದಿ, ಹಿರಿಯೂರು ತಾಲೂಕು ಆಸ್ಪತ್ರೆೆಯಲ್ಲಿ ಶಿರಾ ತಾಲೂಕು ಆಸ್ಪತ್ರೆೆಯಲ್ಲಿ 8 ಹಾಗೂ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆೆಯಲ್ಲಿ ಓರ್ವ ಗಾಯಾಳು ಚಿಕಿತ್ಸೆೆ ಪಡೆಯುತ್ತಿಿದ್ದಾರೆ.
ಬಸ್ನಲ್ಲಿ ಒಟ್ಟು 30 ಮಂದಿ ಪ್ರಯಾಣಿಕರು ಇದ್ದರು. ಇವರಲ್ಲಿ 25 ಮಂದಿ ಗೋಕರ್ಣಕ್ಕೆೆ ತೆರಳುತ್ತಿಿದ್ದರು. ಕೆಲವರು ತುರ್ತು ಬಾಗಿಲು ಮುರಿದು ಬಸ್ನಿಂದ ಹೊರ ಜಿಗಿದು ಪ್ರಾಾಣ ಉಳಿಸಿಕೊಂಡರು. ಇನ್ನು ಕೆಲವರು ಬಸ್ನ ಬಾಗಿಲಿನಿಂದ ತೆರಳಿ ಅಪಾಯದಿಂದ ಪಾರಾದರು. ನಿದ್ದೆಯಲ್ಲಿದ್ದ ಐದು ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ.
ಗುರುತು ಪತ್ತೆೆ ಕಷ್ಟ
ಮೃತಪಟ್ಟವರ ದೇಹ ಗುರುತು ಹಚ್ಚುವುದು ಕಷ್ಟವಾಗಿದೆ. ಹೀಗಾಗಿ ಡಿಎನ್ಎ ಪರೀಕ್ಷೆ ನಡೆಸಿ ಮೃತ ದೇಹವನ್ನು ಸಂಬಂಧಿಕರಿಗೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಬಸ್ಗೆ ಬೆಂಕಿ ಹೊತ್ತಿಿಕೊಂಡ ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಮುಂದಾದರು. ಆದರೆ ಬೆಂಕಿ ಬಸ್ ಹಾಗೂ ಲಾರಿಗೆ ವ್ಯಾಾಪಿಸಿದ್ದರಿಂದ ನಂದಿಸಲು ಸಾಧ್ಯವಾಗಲಿಲ್ಲ. 20 ನಿಮಿಷದ ಬಳಿಕ ಪೊಲೀಸರು ಹಾಗೂ ಅಗ್ನಿಿಶಾಮಕ ಸಿಬ್ಬಂದಿ ಸ್ಥಳಕ್ಕೆೆ ಆಗಮಿಸಿ ಬೆಂಕಿ ನಂದಿಸಿ ಮೃತ ದೇಹಗಳನ್ನು ಹೊರ ತೆಗೆದರು.
ಅಲ್ಲದೆ, ಬಸ್ನಲ್ಲಿದ್ದ ಆರು ಮಂದಿ ಪ್ರಯಾಣಿಕರು ನಾಪತ್ತೆೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರು ಅಪಘಾತದ ಬಳಿಕ ಬಸ್ನಿಂದ ಜಿಗಿದು ತೆರಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಬಳಿಕ ನಾಪತ್ತೆೆಯಾದವರ ಬಗ್ಗೆೆ ಮಾಹಿತಿ ಲಭ್ಯವಾಗಲಿದೆ.
ಮೃತಪಟ್ಟವರ ಸಂಬಂಧಿಕರನ್ನು ಕರೆಸಿ ಈಗಾಗಲೇ ಮಾದರಿಯನ್ನು ಪಡೆಯಲಾಗಿದ್ದು ಮೃತ ದೇಹದ ಡಿಎನ್ಎ ಹೋಲಿಕೆಯಾದಲ್ಲಿ ಸಂಬಂಧಿಕರಿಗೆ ಮೃತ ದೇಹ ಹಸ್ತಾಾಂತರಿಸಲಾಗುವುದು.
– ರವಿಕಾಂತೇಗೌಡ, ಪೂರ್ವ ವಲಯ ಐಜಿಪಿ
ಮೃತ ಕುಟುಂಬಗಳಿಗೆ ಸಿಎಂರಿಂದ 5 ಲಕ್ಷ ರೂ. ಪರಿಹಾರ
ಹಿರಿಯೂರು ಬಳಿ ಬಸ್ ಹಾಗೂ ಕಂಟೈನರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಕ್ರಿಿಸ್ಮಸ್ ರಜೆಗಾಗಿ ತೆರಳುತ್ತಿಿದ್ದವರು ಅಪಘಾತದಲ್ಲಿ ಸಜೀವ ದಹನವಾಗಿರುವುದು ತುಂಬಾ ನೋವು ತಂದಿದೆ. ಮೃತರ ಕುಟುಂಬದವರ ಜೊತೆ ಸರ್ಕಾರ ನಿಲ್ಲಲಿದೆ ಎಂದು ಇದೇ ವೇಳೆ ಸಿಎಂ ಸಂತಾಪ ಸೂಚಿಸಿದ್ದಾರೆ.
ಅಲ್ಲದೆ ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.
2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ
ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿಿ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆೆ ಪ್ರಧಾನಿ ಮೋದಿ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಈ ಕುರಿತು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿ ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ.
ಬಸ್ ಹಾಗೂ ಲಾರಿ ಅಪಘಾತ ನನಗೆ ಅತೀವ ನೋವು ತರಿಸಿದೆ. ಮೃತಪಟ್ಟವರ ಕುಟುಂಬಕ್ಕೆೆ ಸಂತಾಪ ಸೂಚಿಸಿ ಗಾಯಗೊಂಡವರು ಶೀಘ್ರ ಗುಣಮುಖವಾಗಲಿ ಎಂದು ರಾಷ್ಟ್ರಪತಿ ದ್ರೌೌಪದಿ ಮುರ್ಮು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ತುರ್ತು ನಿರ್ಗಮನ ಇಲ್ಲದ ಬಸ್ಗಳಿಗೆ ಎ್ಸಿ ನಿರಾಕರಣೆ: ರಾಮಲಿಂಗಾರೆಡ್ಡಿಿ
ಸುದ್ದಿಮೂಲ ವಾರ್ತೆ
ಬೆಂಗಳೂರು, ಡಿ.25: ಸಾರ್ವಜನಿಕ ಸಾರಿಗೆಗೆ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ (ಎ್ ಸಿ) ನೀಡದಂತೆ ಕಟ್ಟುನಿಟ್ಟಿಿನ ಆದೇಶ ಹೊರಡಿಸಲಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಖಾಸಗಿ ಬಸ್ ದುರಂತಕ್ಕೆೆ ಅವರು ತೀವ್ರ ವಿಷಾದ ವ್ಯಕ್ತಪಡಿಸಿದರು. ಸಾರಿಗೆ ಇಲಾಖೆ ಆಯುಕ್ತ ಯೋಗೇಶ್ ಮತ್ತು ಹೆಚ್ಚುವರಿ ಆಯುಕ್ತ ಓಂಕಾರೇಶ್ವರ ಅವರು ಸ್ಥಳಕ್ಕೆೆ ಧಾವಿಸಿ ಪರಿಶೀಲನೆ ನಡೆಸಿ ನಿಖರ ಕಾರಣ ಪತ್ತೆೆ ಹಚ್ಚಲಿದ್ದಾರೆ ಎಂದರು.
ಆಂಧ್ರಪ್ರದೇಶದಲ್ಲಿ ಬಸ್ ದುರಂತ ಸಂಭವಿಸಿದ ಬಳಿಕ ಸಾರಿಗೆ ಬಸ್ಗಳಲ್ಲಿ ಯಾವುದೇ ರೀತಿಯ ಸ್ಫೊಟಕಗಳನ್ನು ಸಾಗಿಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದೇವೆ. ಪ್ರಯಾಣಿಕರನ್ನು ಹೊರತು ಪಡಿಸಿ ಅನಗತ್ಯವಾದ ಲಗೇಜ್ಗಳನ್ನು ಸಾಗಿಸದಂತೆ ಕಟ್ಟು ನಿಟ್ಟಿಿನ ಕ್ರಮ ಕೈಗೊಳ್ಳುತ್ತಿಿದ್ದೇವೆ ಎಂದು ಹೇಳಿದರು.
ಹೊಸದಾಗಿ ಬೇರೆ ವಾಹನಗಳನ್ನು ಖರೀದಿಸಿದರೆ ಅದರಲ್ಲಿ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಎ್ ಸಿ ಮಾಡದಂತೆ ಕಟ್ಟುನಿಟ್ಟಿಿನ ಸೂಚನೆ ನೀಡಲಾಗಿದೆ ಎಂದ ಅವರು, ಆಂಧ್ರ ಪ್ರದೇಶದಲ್ಲಿನ ಬಸ್ ದುರಂತಕ್ಕೂ ಚಿತ್ರದುರ್ಗದ ಘಟನೆಗೂ ವ್ಯತ್ಯಾಾಸಗಳಿವೆ. ಇಲ್ಲಿ ಎದುರಿನಿಂದ ಲಾರಿ ಬಂದು ಬಸ್ಗೆ ಡಿಕ್ಕಿಿ ಹೊಡೆದಿದೆ ಎಂದರು.
ಅಪಘಾತದ ಸ್ಥಳದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆೆ, ಮೃತಪಟ್ಟವರ ಶವ ಪರೀಕ್ಷೆ, ಉಳಿದವರನ್ನು ಊರಿಗೆ ಕಳುಹಿಸುವ ಜವಾಬ್ದಾಾರಿಗಳನ್ನು ಜಿಲ್ಲಾಡಳಿತ ನಿರ್ವಹಣೆ ಮಾಡುತ್ತಿಿದೆ ಎಂದರು.
ಗೋಕರ್ಣಕ್ಕೆೆ ತೆರಳುತ್ತಿಿದ್ದ ಖಾಸಗಿ ಸ್ಲೀಪರ್ ಬಸ್ಗೆ ಹಿರಿಯೂರು ಬಳಿ ಕಂಟೇನರ್ ಡಿಕ್ಕಿಿ ಸ್ಲೀಪರ್ ಬಸ್ಗೆ ಲಾರಿ ಡಿಕ್ಕಿಿ: 6 ಮಂದಿ ಸಜೀವ ದಹನ

