ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ರಾಷ್ಟ್ರೀಯ ಪತ್ರಿಿಕಾ ದಿನಾಚರಣೆ ಅಂಗವಾಗಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಸಹಯೋಗದಲ್ಲಿ ಜಿಲ್ಲಾಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರಿಿಕೆಟ್ ಪಂದ್ಯಾಾವಳಿಯಲ್ಲಿ ಗ್ರಾಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ನೌಕರರ ತಂಡ ಗೆಲುವು ಸಾಧಿಸಿತು.
ಬೆಳಿಗ್ಗೆೆಯಿಂದ ಆರಂಭಗೊಂಡ ಕ್ರಿಿಕೆಟ್ ಪಂದ್ಯದಲ್ಲಿ ಜಿಲ್ಲಾ ಪೊಲೀಸ್ ತಂಡ , ಜಿಲ್ಲಾ ಸರ್ಕಾರಿ ನೌಕರರ ತಂಡ, ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತರಾಜ್ ಇಲಾಖೆ ತಂಡ, ಅರಣ್ಯ ಇಲಾಖೆ ತಂಡ , ನ್ಯಾಾಯವಾದಿಗಳ ತಂಡ, ಕೆಎಸ್ಆರ್ಟಿಸಿ ಅಧಿಕಾರಿಗಳ ತಂಡ, ಎಲೆಕ್ಟ್ರಾಾನಿಕ್ ಮೀಡಿಯಾ ಪತ್ರಕರ್ತರ ತಂಡ ಮತ್ತು ಮುದ್ರಣ ಮಾಧ್ಯಮ ಪತ್ರಕರ್ತರ ತಂಡದ ಕ್ರೀಡಾಪಟುಗಳು ಸಂಜೆಯವರೆಗೂ ಕ್ರಿಿಕೆಟ್ ಪಂದ್ಯಾಾವಳಿಗಳಲ್ಲಿ ಉತ್ಸಾಾಹದಿಂದ ಪಾಲ್ಗೊೊಂಡಿದ್ದರು.
ಕ್ರೀಡಾಕೂಟದಲ್ಲಿ ಪಾಲ್ಗೊೊಂಡಿದ್ದ ವಿವಿಧ ಇಲಾಖೆಯ ತಂಡಗಳು ಉತ್ಸಾಾಹದಿಂದ ಪಾಲ್ಗೊೊಂಡಿದ್ದವು. ಅಂತಿಮವಾಗಿ ನಡೆದ ಕ್ರಿಿಕೆಟ್ ಪಂದ್ಯದಲ್ಲಿ ಪಂಚಾಯತ್ ರಾಜ್ ಇಲಾಖೆಯ ನೌಕರರ ತಂಡ ಪ್ರಥಮ, ಅರಣ್ಯ ಇಲಾಖೆ ತಂಡ ರನ್ನರ್ ಅಪ್ ಆಯಿತು. 3ನೇ ಸ್ಥಾಾನ ಜಿಲ್ಲಾಾ ಪೊಲೀಸ್ ತಂಡ, 4ನೇ ಸ್ಥಾಾನ ವಿದ್ಯುನ್ಮಾಾನ ಪತ್ರಕರ್ತರ ತಂಡ ಪಡೆದವು.
ಅರಣ್ಯ ಇಲಾಖೆಯ ವೀರೇಶ ಅವರು ಎರಡು ಇನ್ನಿಿಂಗ್ಸ್ನಲ್ಲಿ 4 ವಿಕೆಟ್, 26 ರನ್ ಗಳಿಸಿ ಸರಣಿ ಪುರುಷೊತ್ತಮರಾದರೆ, ಉತ್ತಮ ಬಾಲರ್ ಆಗಿ ಪೊಲೀಸ್ ತಂಡದ ಹನುನಾಯಕ್, ಉತ್ತಮ ಬ್ಯಾಾಟ್ಸಮಾನ್ ಆಗಿ ಪೊಲೀಸ್ ತಂಡದ ಸಿದ್ದು ಅವರು ಹೊರಹೊಮ್ಮಿಿ ಪ್ರಶಸ್ತಿಿಗೆ ಭಾಜನರಾದರು.
ಚಾಲನೆ :
ಬೆಳಿಗ್ಗೆೆ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಹಾಗೂ ಜಿಲ್ಲಾ ಮತ್ತು ಪ್ರಾಾದೇಶಿಕ ದಿನಪತ್ರಿಿಕೆಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಸಂಯುಕ್ತಾಾಶ್ರಯದಲ್ಲಿ ರಾಷ್ಟ್ರೀಯ ಪತ್ರಿಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ ಕ್ರಿಿಕೆಟ್ ಪಂದ್ಯಾಾವಳಿಗೆ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಬಿ.ವೆಂಕಟಸಿಂಗ್ ಟಾಸ್ ಹಾಕುವ ಮೂಲಕ ಪ್ರೊೊಬೇಷನರಿ ಐಎಎಸ್ ಅಧಿಕಾರಿ ಪುರುರಾಜ್ಸಿಂಗ್ ಬ್ಯಾಾಟ್ ಮಾಡುವ ಮೂಲಕ ಚಾಲನೆ ನೀಡಿ ದರು.
ಪ್ರೊೊಬೇಷನರಿ ಐಎಎಸ್ ಅಧಿಕಾರಿ ಪುರುರಾಜ್ಸಿಂಗ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ದಿನ ನಿತ್ಯದ ಯಾಂತ್ರಿಿಕ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಸದೃಢತೆ ಸಾಧಿಸಲು ಕ್ರೀೆಡೆ ಅತ್ಯಂತ ಸಹಕಾರಿಯಾಗಿದ್ದು ನಾವೆಲ್ಲರೂ ನಮ್ಮ ಬಿಡುವಿನ ಸಮಯದಲ್ಲಿ ಕ್ರೀೆಡೆಗಳಲ್ಲಿ ತೊಡಗಬೇಕೆಂದರು.
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರ್ಗಿ ಪೀಠದ ಆಯುಕ್ತ ಬಿ.ವೆಂಕಟಸಿಂಗ್ ಮಾತನಾಡಿ ಪತ್ರಕರ್ತರು ತಮ್ಮ ದಿನ ನಿತ್ಯದ ಸುದ್ದಿ ಸಂಗ್ರಹ ಜಂಜಾಟದಲ್ಲಿ ತೊಡಗಿರುತ್ತಾಾರೆ ಅವರು ಒತ್ತಡ ಜೀವನದಿಂದ ಹೊರಬರಲು ಕ್ರೀಡೆ ಅತಿಮುಖ್ಯವೆಂದು ಅಭಿಪ್ರಾಾಯಪಟ್ಟ ರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಕುಮಾರ ಸ್ವಾಾಮಿ ಮಾತನಾಡಿ ಕ್ರೀಡೆಯಿಂದ ಒತ್ತಡದ ಜೀವನದಿಂದ ಮುಕ್ತಿಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ರಾಯಚೂರು ಜಿ.ಪಂ ಸಿಇಓ ಈಶ್ವರ ಕುಮಾರ ಕಾಂದೂ ಮಾತನಾಡಿ, ಸದಾ ಸುದ್ದಿಯ ಸಂಗ್ರಹ, ಪ್ರಸಾರದ ಒತ್ತಡದಲ್ಲಿರುವ ಪತ್ರಕರ್ತರು ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಅನೇಕ ವಿಷಯಗಳನ್ನು ಹೊರತೆಗೆಯುವ ಸಾಮರ್ಥ್ಯ ಪತ್ರಕರ್ತರಿಗಿದ್ದು ನಮಗೇ ತಿಳಿಯದ ಎಷ್ಟೋೋ ವಿಷಯಗಳು ನಿಮ್ಮಿಿಂದ ತಿಳಿಯುತ್ತವೆ. ವೃತ್ತಿಿಯ ಜೊತೆ ಕ್ರೀೆಡಾ ಚಟುವಟಿಯಲ್ಲಿ ತೊಡಗಿರುವುದು ಸಂತಸದ ವಿಷಯ ಎಂದು ಹೇಳಿದರು.
ರಾಯಚೂರು ರಿಪೋರ್ಟ್ರರ್ಸ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ಮಾತನಾಡಿದರು.
ಕ್ರೀಡಾಕೂಟದಲ್ಲಿ ಜಿಲ್ಲಾ ಮತ್ತು ಪ್ರಾಾದೇಶಿಕ ದಿನಪತ್ರಿಿಕೆಗಳ ಸಂಘದ ಅಧ್ಯಕ್ಷ ಚೆನ್ನಬಸವ ಬಾಗಲವಾಡ , ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೂಗಾರ, ಖಜಾಂಚಿ ಸಣ್ಣ ಈರಣ್ಣ, ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಖಾನ್ ಸಾಬ್ ಮೋಮಿನ್, ಕ್ರೀೆಡಾ ಉಸ್ತುವಾರಿ ಶ್ರೀಕಾಂತ ಸಾವೂರು, ಗಿಲ್ಡ್ ನಿಕಟಪೂರ್ವ ಅಧ್ಯಕ್ಷ ಚೆನ್ನಬಸವಣ್ಣ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣಾಾ ಶಾವಂತಗೇರಿ ಸೇರಿದಂತೆ ಹಿರಿಯ ಕಿರಿಯ ಪತ್ರಕರ್ತರು, ಅನೇಕರಿದ್ದರು.
ರಾಷ್ಟ್ರೀಯ ಪತ್ರಿಕಾ ದಿನದ ಕ್ರಿಕೆಟ್ ಪಂದ್ಯಾವಳಿ ಆರ್ಡಿಪಿಆರ್ ತಂಡಕ್ಕೆ ಗೆಲುವು, ಅರಣ್ಯ ನೌಕರರ ತಂಡ ರನ್ನರ್ಅಪ್

