ಸುದ್ದಿಮೂಲ ವಾರ್ತೆ ಮಸ್ಕಿ, ಡಿ.25:
ರಾಜ್ಯ ಸರ್ಕಾರ ಅನುಷ್ಠಾಾನಕ್ಕೆೆ ತರುತ್ತಿಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ-2026ನ್ನು ವಿರೋಧಿಸಿ ಮಸ್ಕಿಿ ಮಂಡಲದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂದೆ ಮಸ್ಕಿಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆೆಸ್ ಸರ್ಕಾರ ಸಂವಿಧಾನ ಪ್ರದತ್ತವಾದ ವಾಕ್ ಸ್ವಾಾತಂತ್ರ್ಯವನ್ನು ಹರಣ ಮಾಡಲು, ಹಿಂದೂಪರ ಹೋರಾಟಗಾರರ ಧ್ವನಿಯನ್ನು ಅಡಗಿಸಲು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಕಾಯ್ದೆೆ -2026ನ್ನು ಜಾರಿಗೆ ತರುತ್ತಿಿದೆ ಎಂದು ಆರೋಪಿಸಿದರು.
ಬಿಜೆಪಿ ಕಾರ್ಯಾಲಯದಿಂದ ಬೈಕ್ ರ್ಯಾಾಲಿ ಮುಖಾಂತರ ತೆರಳಿ, ಹಳೆ ಬಸ್ ನಿಲ್ದಾಾಣದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಕಾಂಗ್ರೆೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವದಡಿ ಸಾಂವಿಧಾನಿಕವಾಗಿ ನೀಡಿರುವ ಸಂವಹನದ ಹಕ್ಕನ್ನು ಕಸಿದುಕೊಳ್ಳಲು ಜನವಿರೋಧಿ ಕಾಯ್ದೆೆಯನ್ನು ಜಾರಿಗೆ ತರಲಾಗುತ್ತಿಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಎರಡೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿಿರುವ ಕಾಂಗ್ರೆೆಸ್ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಕಾಯ್ದೆೆಯ ಮೂಲಕ ಸಂವಿಧಾನದ ಮೂಲ ಆಶಯಕ್ಕೆೆ ಧಕ್ಕೆೆ ತಂದಿದೆ. ಈ ಕಾಯ್ದೆೆಯಿಂದ ಮಾಧ್ಯಮಗಳ ಮೇಲೂ ನಿಯಂತ್ರಣ ಹೇರುವ ಷಡ್ಯಂತ್ರ ಅಡಗಿದೆ. ಇಂತಹ ವಿರೋಧಿ ಕಾಯ್ದೆೆಗೆ ರಾಜ್ಯಪಾಲರು ಅಂಕಿತ ಹಾಕಬಾರದು. ಆರ್ಥಿಕ ದಿವಾಳಿತನ ಮತ್ತು ಆಡಳಿತ ವೈಲ್ಯವನ್ನು ಮುಚ್ಚಿಿಕೊಳ್ಳಲು ಕಾಂಗ್ರೆೆಸ್ ದ್ವೇಷ ಭಾಷಣ ನೆಪದಲ್ಲಿ ಕಾಯ್ದೆೆಯನ್ನು ಜಾರಿಗೊಳಿಸಿದೆ ಎಂದು ಆರೋಪಿಸಿದರು.
ನಂತರ ಕಾಯ್ದೆೆಯನ್ನು ತಡೆ ಹಿಡಿಯುವಂತೆ ರಾಜ್ಯಪಾಲರಿಗೆ ರವಾನಿಸಬೇಕಾದ ಮನವಿ ಪತ್ರವನ್ನು ಕಂದಾಯ ಇಲಾಖೆ ಅಧಿಕಾರಿ ಪ್ರಕಾಶ್ ಸೌದ್ರಿಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿ.ವೆಂಕಟೇಶ್ ನಾಯಕ, ಸುರೇಶ್ ಹರಸೂರು, ಮಲ್ಲಪ್ಪ ಅಂಕಸದೊಡ್ಡಿಿ, ಶರಣು ಬಸವ ಸೋಪಿಮಠ,ಬಸವರಾಜ ವಕೀಲರು, ಮೌನೇಶ ಮುರಾರಿ, ಚೇತನ್ ಪಾಟೀಲ್, ರಮೇಶ ಉದ್ಬಾಾಳ, ಬಸವರಾಜ್ ಗುಡಿಯಾಳ, ಅಮರೇಶ ವಕೀಲ, ಸಿದ್ದೇಶ ಗುರಿಕಾರ ಹಾಗೂ ಬಿಜೆಪಿ ಕಾರ್ಯಕರ್ತರು ಮುಖಂಡರು ಉಪಸ್ಥಿಿತರಿದ್ದರು
ದ್ವೇಷ ಭಾಷಣ ಮಸೂದೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

