ಸುದ್ದಿಮೂಲ ವಾರ್ತೆ ಬೀದರ, ಡಿ.25:
ನಗರ ಸೇರಿ ಜಿಲ್ಲಾದ್ಯಂತ ಗುರುವಾರ ಕ್ರಿಿಸ್ಮಸ್ ಹಬ್ಬವನ್ನು ಭಕ್ತಿಿ, ಭಾವದೊಂದಿಗೆ ಆಚರಿಸಲಾಯಿತು.
ಕ್ರೈಸ್ತರು ದಿನವಿಡೀ ವಿವಿಧ ಧಾರ್ಮಿಕ ಆಧ್ಯಾಾತ್ಮಿಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ನಗರದ ವಿವಿಧ ಬಡಾವಣೆ ಚರ್ಚ್ ಗಳಲ್ಲಿ ಬೆಳಗ್ಗೆೆಯಿಂದ ತಡರಾತ್ರಿಿವರೆಗೂ ವೈವಿಧ್ಯಮಯ ಕಾರ್ಯಕ್ರಮ ಜರುಗಿದವು. ಭಾಲ್ಕಿಿ, ಬಸವಕಲ್ಯಾಾಣ, ಔರಾದ್, ಹುಮನಾಬಾದ್, ಚಿಟಗುಪ್ಪ, ಹುಲಸೂರು, ಕಮಲನಗರ ಪಟ್ಟಣಗಳಲ್ಲದೆ ದುಬಲಗುಂಡಿ, ಮನ್ನಾಾಎಖೇಳ್ಳಿಿ, ಜನವಾಡ, ಸಂತಪುರ, ಮುಡಬಿ, ಮಂಠಾಳ, ಹಲಬರ್ಗಾ, ಚಿಂತಾಕಿ, ಮನ್ನಳ್ಳಿಿ ಮತ್ತಿಿತರ ಹೋಬಳಿ ಕೇಂದ್ರಗಳಲ್ಲೂ ಹಬ್ಬ ಅದ್ದೂರಿ ಆಚರಿಸಲಾಯಿತು.
ಎಲ್ಲಾಾ ಚರ್ಚಗಳಲ್ಲಿ ಯೇಸುಕ್ರಿಿಸ್ತನಿಗೆ ವಿಶೇಷ ಸಾಮೂಹಿಕ ಪ್ರಾಾರ್ಥನೆ ಸಲ್ಲಿಸಲಾಯಿತು. ಮೇಣದ ಬತ್ತಿಿ ಪ್ರಜ್ವಲಿಸಿ ನಮಿಸಲಾಯಿತು. ಧರ್ಮ ಗುರುಗಳಿಂದ ಬೈಬಲ್ ಪಠಣ ಜತೆಗೆ ಕ್ರಿಿಸ್ತನ ಬಾಲ್ಯ, ಜೀವನದ ಕುರಿತು ದೈವ ಸಂದೇಶಗಳು ನೀಡಲಾಯಿತು. ಭಜನೆ, ವಿಶೇಷ ಆರಾಧನೆಗಳು ನಡೆದವು. ಅಲ್ಲಲ್ಲಿ ಯೇಸುಕ್ರಿಿಸ್ತನ ಜೀವನ, ಸಾಧನೆ ಮತ್ತು ತತ್ವಗಳನ್ನು ಬಿಂಬಿಸುವ ನಾಟಕ ಪ್ರದರ್ಶನಗೊಂಡವು.
ಬೀದರ್ ನಗರದ ಮಂಗಲಪೇಟನಲ್ಲಿರುವ ಜಿಲ್ಲಾ ಮೆಥೋಡಿಸ್ಟ್ ಚರ್ಚ್ನಲ್ಲಿ ಜಿಲ್ಲಾ ಮೇಲ್ವಿಿಚಾರಕ ರೆವರೆಂಡ್ ಡಿಸೋಜಾ ಥಾಮಸ್ ನೇತೃತ್ವದಲ್ಲಿ ದಿನವಿಡೀ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಜನಜಾತ್ರೆೆ ಸೇರಿತ್ತು. ಧರ್ಮ ಗುರುಗಳಿಂದ ಬೈಬಲ್ ಪಠಣ ಜರುಗಿತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಸಹಸ್ರಾಾರು ಕ್ರೈಸ್ತರು ಶ್ರದ್ಧೆೆ, ಭಕ್ತಿಿಯಿಂದ ಆಗಮಿಸಿ ಪ್ರಾಾರ್ಥನೆ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಪೌರಾಡಳಿತ ಸಚಿವ ರಹೀಮ್ ಖಾನ್, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಮಹಾನಗರ ಪಾಲಿಕೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್, ಮುಖಂಡ ರಮೇಶ ಪಾಟೀಲ್ ಸೋಲಾಪುರ ಸೇರಿದಂತೆ ಜನಪ್ರತಿನಿಧಿಗಳು, ಸಮಾಜದ ಪ್ರಮುಖರು, ಗಣ್ಯರು ಕ್ರಿಿಸ್ಮಸ್ ಶುಭ ಕೋರಿದರು.
ಜಿಲ್ಲಾದ್ಯಂತ ಕ್ರಿಸ್ಮಸ್ ಸಂಭ್ರಮ :ಭಕ್ತಿಭಾವದಲ್ಲಿ ಏಸು ಸ್ಮರಣೆ

