ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.25:
ನ್ಯಾಾಯಾಲಯದ ಕಟ್ಟಡ, ನ್ಯಾಾಯಾಧೀಶರ ವಸತಿ ಗೃಹ ಹಾಗೂ ವಾಹನ ಪಾಕಿರ್ಂಗ್ ಅನುಕೂಲಕ್ಕಾಾಗಿ ಒದಗಿಸಬೇಕು ಮತ್ತು ವಕೀಲರ ಭವನ ನಿರ್ಮಾಣಕ್ಕೆೆ ನಗರದ ಹಳೆ ಪ್ರವಾಸಿ ಮಂದಿರದ ಜಾಗ ಹಾಗೂ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಾಯಿಸಿ ವಕೀಲರ ಸಂಘದ ತಾಲ್ಲೂಕು ಘಟಕದಿಂದ ಬುಧವಾರ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಮನವಿ ಸಲ್ಲಿಸಲಾಯಿತು.
ನ್ಯಾಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ ವಕೀಲ ಸ್ಥಳೀಯವಾಗಿ 5 ಕೋರ್ಟ್ಗಳು ಕಾರ್ಯನಿರ್ವಹಿಸುತ್ತಿಿದ್ದು, ವಕೀಲರ ಸಂಘದಲ್ಲಿ 500 ವಕೀಲರು ಇದ್ದು, ವಕೀಲರಿಗೆ ಸುಸಜ್ಜಿಿತವಾದ ವಕೀಲರ ಭವನ ಇಲ್ಲ. ಈಗಿರುವ ಕೋರ್ಟ್ಗಳಲ್ಲಿ ಸುಮಾರು 7 ರಿಂದ 8 ಸಾವಿರ ಪ್ರಕರಣಗಳು ಬಾಕಿ ಇರುತ್ತವೆ. ಎಲ್ಲಾಾ ವಕೀಲರು ಮತ್ತು ಕಕ್ಷಿದಾರರು ತಮ್ಮ ವಾಹನಗಳನ್ನು ಕೋರ್ಟ್ಗೆ ತೆಗೆದುಕೊಂಡು ಬರುತ್ತಾಾರೆ. ಇದರಿಂದಾಗಿ ವಾಹನ ನಿಲ್ಲಿಸಲು, ಕಕ್ಷಿದಾರರಿಗೆ ವಿಶ್ರಾಾಂತಿ ತೆಗೆದುಕೊಳ್ಳಲು ನ್ಯಾಾಯಾಲಯದ ಆವರಣದಲ್ಲಿ ಜಾಗದ ಕೊರತೆ ಇರುತ್ತದೆ ಎಂದು ಗಮನ ಸೆಳೆದರು.
ನ್ಯಾಾಯಾಲಯದ ಆವರಣದ ದಕ್ಷಿಣ ದಿಕ್ಕಿಿಗೆ ಸರ್ವೆ ನಂ.767 ರಲ್ಲಿ ಹಳೆ ಪ್ರವಾಸಿ ಮಂದಿರ ಜಾಗವಿದ್ದು, ಈ ಜಾಗವು ನ್ಯಾಾಯಾಲಯಕ್ಕೆೆ ಹೊಂದಿಕೊಂಡಿರುವುದರಿಂದ ವಿವಿಧ ಉದ್ದೇಶದ ಸಲುವಾಗಿ ಬಿಟ್ಟುಕೊಟ್ಟರೆ ಅನುಕೂಲವಾಗುತ್ತದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 2 ಎಕರೆ 22 ಗುಂಟೆ ಪೈಕಿ 1 ಎಕರೆ 10 ಗುಂಟೆ ನ್ಯಾಾಯಾಲಯದ ಸಲುವಾಗಿ ಬಿಟ್ಟುಕೊಟ್ಟರೆ ಜಿಲ್ಲಾಾ ನ್ಯಾಾಯಾಲಯದ ಕಟ್ಟಡ ಕಟ್ಟಲು, ವಾಹನ ನಿಲ್ಲಿಸಲು ಹಾಗೂ ನ್ಯಾಾಯಾಧೀಶರ ವಸತಿ ಗೃಹ ಕಟ್ಟಡ ನಿರ್ಮಿಸಲು ಅನುಕೂಲವಾಗುತ್ತದೆ. ಆದ್ದರಿಂದ ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಆದೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ವಕೀಲರ ಭವನದ ಹೊಸ ಕಟ್ಟಡಕ್ಕೆೆ ಅನುದಾನ ಬಿಡುಗಡೆ ಮಾಡಲು ಈಗಾಗಲೇ ರಾಜ್ಯ ಸರ್ಕಾರಕ್ಕೆೆ ಹೈಕೋರ್ಟ್ ಪತ್ರಗಳನ್ನು ಕಳುಹಿಸಿದ್ದು, ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಹಾಗಾಗಿ ಕೂಡಲೇ ಅನುದಾನ ಬಿಡುಗಡೆ ಮಾಡಿಸಿ ವಕೀಲರ ಭವನ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಹಿರಿಯ ವಕೀಲರಾದ ಎಂ.ಕಾಳಿಂಗಪ್ಪ, ಕೆ.ಅಮರೇಗೌಡ, ಅಬ್ದುಲ್ ಗನಿಸಾಬ್, ವಕೀಲರಾದ ನಿರುಪಾದೆಪ್ಪ ಗುಡಿಹಾಳ, ಖಾಜಿಮಲಿಕ್, ಭೀಮರಾಯ, ಬಸವರಾಜ ಸಾಹುಕಾರ, ಬಾಬರ್ಪಾಷಾ, ಬಸವರಾಜ ಅಮರಾಪುರ, ಆರ್.ಕೆ.ನಾಗರಾಜ, ಜಗದೀಶ, ಹನುಮಂತಪ್ಪ ಬೂದಿವಾಳ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಭಾಗವಹಿಸಿದ್ದರು.
ಪ್ರವಾಸಿ ಮಂದಿರದ ಜಾಗ ಕೋರ್ಟ್ಗೆ ಬಿಟ್ಟುಕೊಡಲು ಮನವಿ

