ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ಬಾಂಗ್ಲಾಾದೇಶದಲ್ಲಿ ಕಳವಳಕಾರಿ ಬೆಳವಣಿಗೆಗಳ ಬಗ್ಗೆೆ ಅಲ್ಲಿನ ಮಧ್ಯಂತರ ಸರಕಾರ ಕೋಮುವಾದಿಗಳ ಮೇಲೆ ಲಗಾಮು ಹಾಕಲು ಸಿಪಿಐ(ಎಂ) ಜಿಲ್ಲಾಾ ಕಾರ್ಯದರ್ಶಿ ಕೆ.ಜಿ.ವೀರೇಶ ಆಗ್ರಹಿಸಿದ್ದಾಾರೆ.
ಮಾಧ್ಯಮ ಸಂಸ್ಥೆೆಗಳು ಮತ್ತು ಅಲ್ಪಸಂಖ್ಯಾಾತರ ಮೇಲಿನ ದಾಳಿಗಳ ವಿರುದ್ಧ ಮತ್ತು ಜನರ ಹಕ್ಕುಗಳನ್ನು ರಕ್ಷಿಸಲು ಬಾಂಗ್ಲಾಾದೇಶದ ಮಧ್ಯಂತರ ಸರ್ಕಾರ ಮುಂದಾಗಬೇಕು. ಎರಡು ಅತ್ಯಂತ ಗೌರವಾನ್ವಿಿತ ಸಾಂಸ್ಕೃತಿಕ ಸಂಸ್ಥೆೆಗಳಾದ ಛಾಯಾನೋಟ್ ಮತ್ತು ಉದಿಚಿಗಳು ಭೀಕರ ದಾಳಿಗೆ ಒಳಗಾಗಿರುವ ಮಾಹಿತಿ ಆತಂಕ ತಂದಿದೆ. ಧಾರ್ಮಿಕ ಮೂಲಭೂತವಾದಿ ಶಕ್ತಿಿಗಳು ಸಮಾಜವನ್ನು ಕೋಮು ಧ್ರುವೀಕರಣಗೊಳಿಸುವ ಮೂಲಕ ಮತ್ತು ಅಲ್ಪಸಂಖ್ಯಾಾತರು ಮತ್ತು ತಮಗೆ ಅನುಕೂಲಕರವಲ್ಲದ ಮಾಧ್ಯಮ ಸಂಸ್ಥೆೆಗಳ ಮೇಲೆ ದಾಳಿ ಮಾಡುವ ಮೂಲಕ ಬಾಂಗ್ಲಾಾದೇಶದಲ್ಲಿ ತಮ್ಮ ಪ್ರಭಾವ ವಿಸ್ತರಿಸಲು ಪ್ರಯತ್ನಿಿಸುತ್ತಿಿರುವಂತೆ ತೋರುತ್ತಿಿದೆ.
ಇಂತಹ ಪರೀಕ್ಷಾ ಸಮಯಗಳಲ್ಲಿ ಬಾಂಗ್ಲಾಾದೇಶದ ಜನ ಒಗ್ಗಟ್ಟಿಿನಿಂದ ಇರಬೇಕು ಮತ್ತು 1971 ರ ವಿಮೋಚನಾ ಹೋರಾಟದ ಮೌಲ್ಯಗಳನ್ನು ಎತ್ತಿಿಹಿಡಿಯುತ್ತಾಾರೆ ಎಂಬ ವಿಶ್ವಾಾಸ ಸಿಪಿಐಎಂ ಹೊಂದಿದೆ. ಕೋಮುವಾದಿ ಶಕ್ತಿಿಗಳ ಮೇಲೆ ಲಗಾಮು ಹಾಕಲು ಮತ್ತು ಹಿಂಸಾಚಾರದ ಅಪರಾಧಿಗಳನ್ನು ನ್ಯಾಾಯದ ಕಟಕಟೆಗೆ ತರುವುದನ್ನು ಖಚಿತಪಡಿಸಲು ಮಧ್ಯಂತರ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಚುನಾವಣೆಗಳು ಮುಕ್ತ ಮತ್ತು ನ್ಯಾಾಯಯುತ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು, ಜನರು ತಮ್ಮ ಇಚ್ಛೆೆಯನ್ನು ಭಯವಿಲ್ಲದೆ ವ್ಯಕ್ತಪಡಿಸಲು ಅನುವು ಮಾಡಿಕೊಡಬೇಕು ಎಂದು ಕೋರಿದ್ದಾಾರೆ.

