ಔರಾದ . 25:
ಕರ್ನಾಟಕ ಸರ್ಕಾರವು ಅನುಷ್ಠಾಾನಕ್ಕೆೆ ತರುತ್ತಿಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಭಾರತದ ಸಂವಿಧಾನಕ್ಕೆೆ ವಿರುದ್ಧವಿದ್ದು, ಇದನ್ನು ಜಾರಿಗೊಳಿಸಬಾರದೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಾಣ ಅವರು ಆಗ್ರಹಿಸಿದರು.
ಶಾಸಕರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಬುಧವಾರ ಗ್ರಾಾಮ ಸಂಚಾರದ ನಂತರ ಮನವಿ ಪತ್ರವನ್ನು ಔರಾದ(ಬಿ) ತಹಸೀಲ್ದಾಾರರಿಗೆ ಸಲ್ಲಿಸಲಾಯಿತು.
ನಂತರ ಶಾಸಕರು ಮಾತನಾಡಿ, ದ್ವೇಷ ಭಾಷಣ ತಡೆ ಕಾಯ್ದೆೆ ಮುಖಾಂತರ ರಾಜ್ಯ ಸರ್ಕಾರ ನಾಗರೀಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದೆ. ಡಾ.ಬಿ.ರ್ಆ.ಅಂಬೇರ್ಡ್ಕ ಅವರು ಸಂವಿಧಾನದಡಿ ನೀಡಿದ ಅಭಿವ್ಯಕ್ತಿಿ ಸ್ವಾಾತಂತ್ರ್ಯವನ್ನು ಕಾಂಗ್ರೆೆಸ್ ಸರಕಾರ ಕಿತ್ತುಕೊಳ್ಳುತ್ತಿಿದೆ. ಸರ್ಕಾರದ ಈ ನಿರ್ಧಾರವನ್ನು ಭಾರತೀಯ ಜನತಾ ಪಕ್ಷ ಖಂಡಿಸುತ್ತದೆ. ಈ ದಿಸೆಯಲ್ಲಿ ರಾಜ್ಯಾಾದ್ಯಂತ ಪ್ರತಿಭಟನೆಗಳನ್ನು ನಡೆಸಲಾಗುತ್ತಿಿದೆ ಎಂದರು.
ಈ ಕಾಯ್ದೆೆ ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಿಸುವ ಸಾಧನವಾಗಿದೆ. ಇದರಡಿ ದ್ವೇಷ ಭಾಷಣಕ್ಕೆೆ ನೀಡಿರುವ ವ್ಯಾಾಖ್ಯಾಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯವನ್ನು ಹೇಳುವುದನ್ನೂ ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದೆ ಇರುವುದು ಸರ್ಕಾರದ ಉದ್ದೇಶವೇ ಎಂಬ ಪ್ರಶ್ನೆೆ ಮೂಡುತ್ತಿಿದೆ ಎಂದು ಆಕ್ಷೇಪಿಸಿದರು.
ಇದು ಪ್ರಜಾಪ್ರಭುತ್ವದ ಮೂಲತತ್ವಕ್ಕೆೆ ಹಾನಿ ಮಾತ್ರವಲ್ಲ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನ. ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆೆ ನಿರಂಕುಶ ಅಧಿಕಾರ ನೀಡುತ್ತದೆ. ಕಾಯ್ದೆೆ ಹೇಳುವಂತೆ ಇಲ್ಲಿನ ಅಪರಾಧಗಳಿಗೆ ಜಾಮೀನು ಇಲ್ಲ. ಜನಸಾಮಾನ್ಯರನ್ನು ಅಪರಾಧಿಗಳಾಗಿ ಮಾಡುವ ಈ ಕೀಳು ಮಟ್ಟದ ಕಾಯಿದೆ ನಮಗೆ ಬೇಕೇ? ಎಂಬ ಪ್ರಶ್ನೆೆ ಮೂಡಿದೆ.
ಈ ವಿಧೇಯಕದ ಮೂಲಕ ಕಾಂಗ್ರೆೆಸ್ ಸರ್ಕಾರವು ಪ್ರತಿಪಕ್ಷಗಳು, ಮಾಧ್ಯಮದವರ ಮೇಲೆ ನಿಯಂತ್ರಣ ಹೇರುವುದು, ಹೆದರಿಸುವ ಕೆಲಸವನ್ನು ಕಾಂಗ್ರೆೆಸ್ ಸರ್ಕಾರ ಮಾಡುತ್ತಿಿದೆ. ನಮ್ಮನ್ನು, (ಬಿಜೆಪಿ), ನಮ್ಮ ಸಂಘ ಸಂಸ್ಥೆೆ, ಕನ್ನಡ ಸಂಘಟನೆಗಳನ್ನು ದಮನ ಮಾಡಲು ಸರಕಾರ ಹೊರಟಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿಿ ಪನ್ನಾಾಳೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಿವರಾಜ ಅಲ್ಮಾಾಜೆ, ಮಂಡಲ ಕಾರ್ಯದರ್ಶಿ ಖಂಡೋಬಾ ಕಂಗಟೆ ಮುಖಂಡರಾದ ವಸಂತ ಬಿರಾದಾರ, ಶಿವಾಜಿರಾವ ಪಾಟೀಲ ಮುಂಗನಾಳ, ಧೊಂಡಿಬಾ ನರೋಟೆ, ರಾಮರೆಡ್ಡಿಿ ಪಾಟೀಲ, ಶಿವಾಂಜಯ ಬಿರಾದಾರ, ರವೀಂದ್ರ ರೆಡ್ಡಿಿ ಉಜನಿ, ಈರಾರೆಡ್ಡಿಿ ನಾಗನಪಲ್ಲಿ, ರಾವಸಾಬ ಪಾಟೀಲ, ಶರಣು ಪಾಟೀಲ, ಯಾದುರಾವ ಸಗರ, ಪ್ರಕಾಶ ಮೇತ್ರೆೆ, ಮಾರುತಿರೆಡ್ಡಿಿ ಪಟ್ನೆೆ, ಗೋವಿಂದ ರೆಡ್ಡಿಿ, ಸಂಜು ಉಪ್ಪಾಾರ, ಸಂಜುರೆಡ್ಡಿಿ, ಶಿವಾರೆಡ್ಡಿಿ, ವಿಠಲರೆಡ್ಡಿಿ, ಪ್ರಕಾಶ ಬೇರಕೂರೆ, ದೀಪಕ ಸಜ್ಜನಶೆಟ್ಟಿಿ, ಉದಯ ಸೋಲಾಪೂರೆ, ಪ್ರಕಾಶ ಜೀರ್ಗೆ, ಪ್ರದೀಪ ಪವಾರ, ಧನಾಜಿ ರಾಠೋಡ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿಿತರಿದ್ದರು.
ದ್ವೇಷ ಭಾಷಣ ತಡೆ ಕಾಯ್ದೆ ಸಂವಿಧಾನ ವಿರೋಧಿ: ಶಾಸಕ ಪ್ರಭು ಚವ್ಹಾಣ

