ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ಮನೆಗಳಲ್ಲಿ ಸ್ಥಾಾಪನೆಯಾದ ಗ್ರಂಥಾಲಯಗಳ ಬೆಳವಣಿಗೆ ಹಾಗೂ ಅದರ ವಾರಸುದಾರರನ್ನು ಗೌರವಿಸುವ ಉತ್ತೇಜಿಸುವ ಸಲುವಾಗಿ ವಾರಸುದಾರರ ಗೌರವಿಸುವ ಉದ್ದೇಶ ಇದೆ ಎಂದು ಕನ್ನಡ ಪುಸ್ತಕ ಪ್ರಾಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಹೇಳಿದರು.
ನಗರದ ಕನ್ನಡ ಭವನದಲ್ಲಿ ಮನೆಗೊಂದು ಗ್ರಂಥಾಲಯ ಕರಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಪ್ರಾಾಧಿಕಾರವು ಅಂಗಳದಲ್ಲೇ ತಿಂಗಳ ಪುಸ್ತಕ ಎಂಬ ಕಾರ್ಯಕ್ರಮ ನಡೆಸುತ್ತಿಿದ್ದು ಮುಂದಿನ ದಿನಗಳಲ್ಲಿ ಅದು ಮನೆ ಗ್ರಂಥಾಲಯಗಳಿಗೂ ವಿಸ್ತಾಾರಗೊಳ್ಳುತ್ತದೆ ಅದರ ಲವಾಗಿ ಪ್ರತಿ ತಿಂಗಳು ಕನಿಷ್ಠ ನೂರು ಮನೆಗಳಲ್ಲಿ 100 ಪುಸ್ತಕಗಳ ಪರಿಚಯ ಸಂವಾದ ನಡೆಸುವುದು ಇದರ ಮುಖ್ಯ ಉದ್ದೇಶ ಹೀಗೆ ರಾಜ್ಯದ ಮನೆ ಮನೆಗಳಲ್ಲೂ ಪುಸ್ತಕ ಸಂಸ್ಕೃತಿ ಪ್ರಸರಣದ ಈ ಮಹತ್ವಾಾಕಾಂಕ್ಷೆ ಯೋಜನೆಯ ಅನುಷ್ಠಾಾನಕ್ಕೆೆ ಸರ್ವರ ಸಹಕಾರವು ಅಗತ್ಯ ಇದೊಂದು ವೈಜ್ಞಾನಿಕ ತಳಹದಿಯ ಗ್ರಂಥಾಲಯ ಚಳುವಳಿ ಮನ ಮನೆಗಳಿಗೆ ಜ್ಞಾನದ ಬಳುವಳಿಯಾಗಿದೆ ಎಂದರು.
ಮನೆಗಳಲ್ಲಿ ಸ್ಥಾಾಪನೆಯಾದ ಗ್ರಂಥಾಲಯಗಳ ಬೆಳವಣಿಗೆ ಹಾಗೂ ಅದರ ವಾರಸುದಾರರನ್ನು ಗೌರವಿಸುವ ಉತ್ತೇಜಿಸುವ ಸಲುವಾಗಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಂಜನಗೂಡು ತಿರುಮಲಾಂಬ, ಹಾ.ಮಾ. ನಾಯಕ , ಪಿ. ಆರ್. ತಿಪ್ಪೇಸ್ವಾಾಮಿ ಹಾಗೂ ಗಳಗನಾಥ ಅವರುಗಳ ಹೆಸರಲ್ಲಿ ಪ್ರಶಸ್ತಿಿ ನೀಡಲಾಗುವುದು ಈ ವಾರ್ಷಿಕ ಪ್ರಶಸ್ತಿಿಗಳನ್ನು ಪುಸ್ತಕ ದಿನಾಚರಣೆಯ ದಿನದಂದು ಸನ್ಮಾಾನ್ಯ ಮುಖ್ಯಮಂತ್ರಿಿಗಳಿಂದ ಪ್ರದಾನ ಮಾಡಿಸುವ ಯೋಜನೆ ಇದೆ ಎಂದು ವಿವರಿಸಿದರು.
ಈ ಪ್ರಶಸ್ತಿಿಗಳನ್ನು ಸ್ಥಾಾಪನೆಗೊಂಡ ಗ್ರಂಥಾಲಯಗಳ ನಿರಂತರ ಬೆಳವಣಿಗೆ ಹಾಗೂ ಕ್ರಿಿಯಾಶೀಲತೆಗೆ ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಜಾಗೃತಿ ಸದಸ್ಯರ ನೇಮಿಸುತ್ತದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ವಹಿಸಿದ್ದರು. ಗಡಿ ಅಭಿವೃದ್ದಿ ಪ್ರಾಾಧಿಕಾರದ ಸದಸ್ಯ ಭಗತರಾಜ ನಿಜಾಮಕಾರಿ, ಸಾಹಿತಿಗಳಾದ ವೀರಹನುಮಾನ, ಕಸಾಪ ತಾಲೂಕಾಧ್ಯಕ್ಷ ಡಾ. ಬಿ. ವಿಜಯ ರಾಜೇಂದ್ರ, ಗೌರವ ಕಾರ್ಯದರ್ಶಿ, ತಾಯಪ್ಪ ಬಿ. ಹೊಸೂರು ಮತ್ತಿಿತರರು ಇದ್ದರು.
ಮನೆಗೊಂದು ಗ್ರಂಥಾಲಯ ಕರಪತ್ರ ಬಿಡುಗಡೆ , ನೇಮಕ ಗ್ರಂಥಾಲಯ ವಾರಸುದಾರರಿಗೆ ಪ್ರಶಸ್ತಿಿಗೆ ಯೋಜನೆ – ಡಾ.ಮಾನಸ

