ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ಮಾಜಿ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕೀಯ ವ್ಯಕ್ತಿಿಯಷ್ಟೆೆ ಅಲ್ಲ ಅವರ ಸರಳತೆಯ ಬದುಕಿನ ವೌಲ್ಯಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಬಿಜೆಪಿ ಗ್ರಾಾಮಾಂತರ ಘಟಕದ ಅಧ್ಯಕ್ಷ ಮಹಾಂತೇಶ ಮುಕ್ತಿಿ ಮಟಮಾರಿ ಹೇಳಿದರು.
ತಾಲೂಕಿನ ಮಟಮಾರಿಯ ಸುಜ್ಞಾನ ಪಥ ಗುರುಕುಲಂನ ಅನಾಥ ಮಕ್ಕಳೊಂದಿಗೆ ಭಾರತೀಯ ಜನತಾ ಪಕ್ಷ ರಾಯಚೂರು ಗ್ರಾಾಮೀಣ ಮಂಡಲದ ವತಿಯಿಂದ ಭಾರತದ ಮಾಜಿ ಪ್ರಧಾನಮಂತ್ರಿಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಜಪೇಯಿ ಅವರು ಕೇವಲ ರಾಜಕಾರಣಿ ಮಾತ್ರವಲ್ಲ, ಮೌಲ್ಯಾಾಧಾರಿತ ರಾಜಕಾರಣದ ಪ್ರತೀಕವಾಗಿದ್ದರು. ಅವರ ಜೀವನ, ಸರಳತೆ, ದೇಶಭಕ್ತಿಿ ಹಾಗೂ ಮಾನವೀಯತೆ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಅನಾಥ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಹಣ್ಣು ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ ಕುರ್ಡಿ, ವೀರಭದ್ರಪ್ಪ ಹಿರೇದೊಡ್ಡಿಿ, ಆಂಜನೇಯ ನಾಯಕ ತಂಬೂರಿ, ವೀರೇಶ್ ನಾಯಕ ಸಗಮಕುಂಟ, ಭೀಮಣ್ಣ ಕುಂಬಾರ, ಗುರುಕುಲದ ಶಿಕ್ಷಕರಾದ ಬಸವರಾಜ, ರಮೇಶ್ ಆರೋಲಿ, ಶಿವರಾಜ್ ಬೋವಿ, ಜಿ. ವೀರೇಶ್ ನಾಯಕ ಮಟಮಾರಿ, ಚಂದ್ರು ಹೂಗಾರ್, ತಿಕ್ಕಯ್ಯನಾಯಕ, ಚಂದ್ರಶೇಖರ ಅರೋಲಿ , ದೇವರಾಜ್ ಕುರ್ಡಿ ಅನೇಕರಿದ್ದರು.
ಅಟಲ್ ಬಿಹಾರಿ ವಾಜಪೇಯಿ ವೌಲ್ಯಯುತ ಬದುಕು ಸರ್ವಕಾಲಿಕ – ಮುಕ್ತಿ

