ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ಕನ್ನಡ ಚಿತ್ರರಂಗದಲ್ಲಿ ಉತ್ತಮ, ಹೊಸಬರ ಚಿತ್ರಗಳಿಗೆ ಪ್ರೋೋತ್ಸಾಾಹ ಸಿಗುತ್ತಿಿಲ್ಲ ಜೊತೆಗೆ ಜನರ ನಂಬಿಕೆಯೂ ಕಳೆದುಕೊಳ್ಳುತ್ತಿಿದೆ ಎಂಬುದು ಭಾಸವಾಗುತ್ತಿಿದೆ ಎಂದು ಕಲ್ಟ್ ಸಿನಿಮಾ ನಾಯಕ ನಟ ಝೈದ್ ಖಾನ್ ಹೇಳಿದರು.
ಸಿನಿಮಾ ಪ್ರಚಾರಕ್ಕಾಾಗಿ ರಾಯಚೂರಿಗೆ ಆಗಮಿಸಿದ್ದ ಅವರ ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದರು. ಚಿತ್ರರಂಗದಲ್ಲಿ ಯಾವುದೇ ಸ್ಟಾಾರ್ವಾರ್ ಇಲ್ಲ ಸಿನಿಮಾದಲ್ಲಿರುವ ಎಲ್ಲರೂ ಒಂದೇ ಕುಟುಂಬ ಆ ಹೆಸರಿನಲ್ಲಿ ಸ್ಟಾಾರ್ ಸಿನಿಮಾಗಳಿಗೆ ಜನ ಮರಳಾಗಬಾರದು ಎಂದ ಅವರು, ನಾವು ಕಷ್ಟಪಟ್ಟು ಸಿನಿಮಾ ಮಾಡುತ್ತೇವೆ ಕೆಲವರು ಪೈರಸಿ ಮಾಡಿ ಹಣ ಗಳಿಸುತ್ತಿಿದ್ದಾಾರೆ. ಪೈರಸಿ ತಡೆಯಲು ಎಷ್ಟೆೆ ಪ್ರಯತ್ನ ಮಾಡಿದರೂ ನಿಲ್ಲುತ್ತಿಿಲ್ಲಘಿ. ಜನ ಚಿತ್ರಮಂದಿರಕ್ಕೆೆ ಬಂದು ಸಿನಿಮಾ ನೋಡಿ ಪ್ರೋೋತ್ಸಾಾಹಿಸಿದರೆ ಇನ್ನಷ್ಟು ಒಳ್ಳೆೆ ಸಿನಿಮಾ ಮಾಡಲು ಅನುಕೂಲ ಆಗಲಿದೆ ಎಂದ ಅವರು ಕಲ್ಟ್ ಸಿನಿಮಾದಲ್ಲಿ ಮಲೈಕಾ ಹಾಗೂ ರಚಿತಾರಾಮ್ ಅವರು ನಟಿಸಿದ್ದು ಸಾಮಾಜಿಕ ಜವಾಬ್ದಾಾರಿ, ಯುವಕರು ದಾರಿ ತಪ್ಪುುತ್ತಿಿರುವುದು ಎಲ್ಲಿ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದಲ್ಲದೆ, ಕುಟುಂಬ ಸಮೇತ ನೋಡುವ ಚಿತ್ರ ಇದಾಗಿದೆ. ಜನವರಿ 23ಕ್ಕೆೆ ರಾಜ್ಯದಾದ್ಯಂತ ಬಿಡುಗಡೆಯಾಗಲಿದ್ದು ಎಲ್ಲರೂ ನೋಡಿ ಹೊಸಬರ ಪ್ರೋೋತ್ಸಾಾಹಿಸಿ ಬೆನ್ನು ತಟ್ಟಲು ಮನವಿ ಮಾಡಿದರು.
ಕನ್ನಡ ಚಿತ್ರ ರಂಗದಲ್ಲಿ ಯಾರೂ ಅವರವರ ಕೆಲಸ ಮಾಡುತ್ತಿಿಲ್ಲ ಸಂಗೀತ ಮಾಡುವವರು ನಿರ್ದೇಶಕರಾಗುತ್ತಿಿದ್ದಾಾರೆ. ನಟಿಸುವವರಿಗೆ ಉತ್ತಮ ಎನ್ನಿಿಸಿಕೊಳ್ಳಲು ಅವಕಾಶ ಬೇಕು ತಾಳ್ಮೆೆಯೂ ಅಗತ್ಯವಾಗಿದೆ. ನಮ್ಮ ಚಿತ್ರರಂಗದಲ್ಲಿ ಹೊಟ್ಟೆೆ ತುಂಬಿದವರೇ ಹೆಚ್ಚಾಾಗಿದ್ದಾಾರೆ. ದುಡ್ಡು ಮಾಡಲು ನಿಂತಿದ್ದಾಾರೆ ಆದರೆ, ಕನ್ನಡ ಸಿನಿಮಾ ಮಾಡುತ್ತಿಿದ್ದೇವೆ ಎಂಬ ನಿಯತ್ತು ನಮ್ಮಲ್ಲಿರಬೇಕಿತ್ತುಘಿ. ಅದಿಲ್ಲದ ಕಾರಣ ನಮ್ಮ ಮೇಲೆ ಜನರಿಗೆ ನಂಬಿಕೆಯೂ ಇಲ್ಲವಾಗಿದೆ ಎಂದರು.
ಪ್ರಯೋಗಶೀಲ ಸಿನಿಮಾಗಳಿಗೆ ಬೆಂಬಲ ಸಿಗುತ್ತಿಿಲ್ಲಘಿ. ಎಂದ ಅವರು ರಾಜಕೀಯಕ್ಕೆೆ ಬರುವ ಇಚ್ಚೆೆ ತಮಗಿಲ್ಲ ಇದನ್ನೇ ತಂದೆಯವರೂ ಹೇಳಿದ್ದಾಾಗಿ ತಿಳಿಸಿ ಅವದರು ರಾಜಕೀಯ ಎಂಭುದು ಭರವಸೆ, ಭಾಷಣ ಮಾಡುವುದಕ್ಕಷ್ಟೆೆ ಸಂಕುಚಿತಗೊಂಡಿದ್ದು ಸಮಾಜ ಸೇವೆಯೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜ.23ಕ್ಕೆಕಲ್ಟ್ ಚಿತ್ರ ಬಿಡುಗಡೆ ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ಜನರಿಂದಲೇ ಸಿಗಬೇಕು – ಝೈದ್ ಖಾನ್

