ಸುದ್ದಿಮೂಲ ವಾರ್ತೆ ಮುದಗಲ್ , ಡಿ.25:
ಪಟ್ಟಣದ ಐತಿಹಾಸಿಕ ಪವಿತ್ರ ಹೃದಯ ದೇವಾಲಯದಲ್ಲಿ ಕ್ರೈಸ್ತ ಸಮಾಜದವರು ಪವಿತ್ರ ಮತ್ತು ಮಹತ್ವವಾದ ಕ್ರಿಿಸ್ಮಸ್ ಹಬ್ಬವನ್ನು ಶ್ರದ್ಧಾಾ- ಭಕ್ತಿಿಯಿಂದ ಗುರುವಾರ ಆಚರಣೆ ಮಾಡಿದರು.
ಡಿಸೆಂಬರ್ 25 ಯೇಸುವಿನ ಜನುಮ ದಿನವಾಗಿದ್ದು, ಅವರ ನೆನಪಿಗಾಗಿ ಗೋದಲಿ ನಿರ್ಮಿಸಿ ಬಾಲ್ಯದ ಚಿತ್ರಣ ಬಿಡಿಸಿದ್ದರು. ಪವಿತ್ರ ಹೃದಯಾಲಯಕ್ಕೆೆ ಲೈಟಿಂಗ್ ನಿಂದ ಅಲಂಕಾರ ಮಾಡಿದ್ದರು. ಸಮುದಾಯದವರು ಸಾಮೂಹಿಕ ಪ್ರಾಾರ್ಥನೆ ಸಲ್ಲಿಸಿದರು. ಸ್ನೇಹಿತರಿಗೆ, ಹಿತೈಷಿಗಳಿಗೆ ಕೇಕ್, ಸಿಹಿ ಹಂಚಿ ಹಬ್ಬದ ಶುಭಾಶಯ ತಿಳಿಸಿದರು. ಬುಧವಾರ ರಾತ್ರಿಿ 12ರಿಂದ 1ಗಂಟೆವರಿಗೆ ವಿಶೇಷ ಪ್ರಾಾರ್ಥನೆ ಸಲ್ಲಿಸಲಾಯಿತು. ಾರ್ದ ಗಳಾದ ಪೊನ್ನುಸ್ವಾಾಮಿ, ವಿಜಯಕುಮಾರ ಬೈಬಲ್ ಪಠಣ ಮಾಡಿಸಿ, ಹಬ್ಬದ ವಿಶೇಷತೆಯ ಬಗ್ಗೆೆ ತಿಳಿಸಿದರು.
ಜೋಸ್ೆ ಇರ್ಲಾ, ಪೌಲ್ ರಾಜ್ ಎಮ್ಮಿಿ, ಪುರಸಭೆ ಮಾಜಿ ಸದಸ್ಯ ದುರಗಪ್ಪ ಕಟ್ಟಿಿಮನಿ, ಆರೋಗ್ಯಪ್ಪ ಕುರಿ, ಅಶೋಕ ಭಾಟಿ, ಅನಿಲಕುಮಾರ ಕೋನಪಲ್ಲಿ, ಆರೋಗ್ಯಪ್ಪ ಇರ್ಲಾ ಹಾಗೂ ಸಮುದಾಯದವರು ಇದ್ದರು.
ಮುದಗಲ್: ಶ್ರದ್ಧಾ- ಭಕ್ತಿಯಿಂದ ಕ್ರಿಸ್ಮಸ್ ಆಚರಣೆ

