ಸುದ್ದಿಮೂಲ ವಾರ್ತೆ ಹೊಸಪೇಟೆ , ಡಿ.25:
ರೈತರು ಬೆಳೆದ ಬೆಳೆಗಳಿಗೆ ಮೋಸ ವಂಚನೆ ಮಾಡದೆ ಇರುವಂ ತೆ ಆಗಬೇಕಾದರೆ ಸರ್ಕಾರ ಕೂಡಲೇ ಡಾ. ಸ್ವಾಾಮಿನಾಥನ್ ಆಯೋಗದ ಶಿಾರಸಿನಂತೆ ಸಿ 2 -50 ಆಧಾರದ ಮೇಲೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆ ಶಾಸನಬದ್ಧವಾಗಿ ನಿಗದಿ ಮಾಡಬೇಕು ಹಾಗೂ ರೈತರ ಬೆಂಬಲ ಬೆಲೆ ಗ್ಯಾಾರಂಟಿ ತರಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಾ ಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿಿ ಚಂದ್ರಶೇಖರ್ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು ಡಾ. ಸ್ವಾಾಮಿನಾಥನ್ ವರದಿ ಶಾಸನಬದ್ಧವಾಗಿ ಜಾರಿ ಮಾಡುವುದರಿಂದ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಗ್ಯಾಾರೆಂಟಿ ಶಾಶ್ವತವಾಗಿ ಸಿಗುತ್ತದೆ.ರಾಜ್ಯ ಸರ್ಕಾರ ತಮ್ಮ ವೋಟಿನ ಗ್ಯಾಾರಂಟಿಗೋಸ್ಕರ ಅನೇಕ ಗ್ಯಾಾರಂಟಿಗಳನ್ನು ಜಾರಿಗೆ ಮಾಡಿದೆ, ಆದರೆ ರೈತರ ಭವಿಷ್ಯ ಹಾಗೂ ಪರಿಶ್ರಮಕ್ಕೆೆ ತಕ್ಕಂತೆ ಗ್ಯಾಾರೆಂಟಿ ಘೋಷಣೆ ಮಾಡಬೇಕು ಎಂದು ಎಲ್ಲಾ ಸರ್ಕಾರಗಳಿಗೆ ಒತ್ತಾಾಯಿ ಸಿದರು.
ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಘೋಷಣೆ ಯಾಗುತ್ತಿಿದ್ದಂತೆ ಮುಕ್ತ ಮಾರುಕಟ್ಟೆೆಯಲ್ಲಿ ಪಾತಾಳಕ್ಕೆೆ ಕುಸಿದಿದ್ದ ಬೆಲೆಗಳು ಪುಟಿದೇಳುತ್ತವೆ. ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಕನಿಷ್ಠ ಬೆಂಬಲ ಬೆಲೆ ಹಾಗೂ ಕಬ್ಬು ಮತ್ತಿಿತರೆ ವಾಣಿಜ್ಯ ಬೆಳೆಗಳಿಗೆ ಘೋಷಿಸಲಾಗುವ ಎ್ಆರ್ಪಿಯನ್ನು ಕೇಂದ್ರ ಸರ್ಕಾರ ಪ್ರತೀ ವರ್ಷ ಪರಿಷ್ಕರಿಸಿ, ಹೆಚ್ಚಿಿಸಬೇಕು.ರಾಜ್ಯದಲ್ಲಿ ಎಪಿಎಂಸಿಗಳಲ್ಲಿ ವರ್ಷವಿಡೀ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಕೇಂದ್ರಗಳನ್ನು ತೆರೆಯ ಬೇಕು. ಅದಕ್ಕಾಾಗಿ ರಾಜ್ಯ ಸರ್ಕಾರ ಕನಿಷ್ಠ 10 ಸಾವಿರ ಕೋಟಿ ರೂ. ಆವರ್ತ ನಿಢಿ ಸ್ಥಾಾಪಿಸಬೇಕು ಎಂದು ಈಸಂದರ್ಭದಲ್ಲಿ ಒತ್ತಾಾಯಿಸಿದರು.
ಹೊಸಪೇಟೆ ಹಾಗೂ ಕಂಪ್ಲಿಿ ಸಕ್ಕರೆ ಕಾರ್ಖಾನೆಗಳ ಪುನರ್ ಆರಂಭಕ್ಕೆೆ ಒತ್ತಾಾಯ ಮಾಡಿದರು
ಗೋಷ್ಠಿಿಯಲ್ಲಿ ರೈತ ಮುಖಂಡ ಖಾಜಾ ಹುಸೇನ್ ನಿಯಾಜಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಾಗರಾಜ್,ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿಿ ರುದ್ರಪ್ಪ, ಮುಖಂಡರಾದ ಆರ್.ಎಲ್.ತಾಯಪ್ಪ, ಹನುಮಂತಪ್ಪ ಹೊಳೆಯಾಚಿ, ಜಡಿಯಪ್ಪ ಉ ಪಸ್ಥಿಿತರಿದ್ದರು.
ಬೆಳೆ ಬೆಂಬಲ ಬೆಲೆ ‘ಗ್ಯಾರಂಟಿ’ಗೆ ಕೋಡಿಹಳ್ಳಿ ಆಗ್ರಹ

