ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.25:
ಇಂದಿನ ದಿನಗಳಲ್ಲಿ ಎಲ್ಲರೂ ಬೈಕ್ ಮೇಲೆ ತಿರುಗಾಡುವವರು ಹೆಚ್ಚು ಅಂಥದರಲ್ಲಿ ಸೈಕಲ್ ಮೇಲೆ ದೂರದ ಪಂಜಾಬಿನ ಬಂಗಾಕ್ಕೆೆ ಹೋಗುತ್ತಿಿರುವುದು ಅಚ್ಚರಿಯಾಗಿದೆ. ಸೈಕಲ್ ಸವಾರಿ ಆರೋಗ್ಯಕ್ಕೆೆ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆೆ ಹೇಮಲತಾ ನಾಯಕ ಹೇಳಿದರು.
ಅವರು ಇಂದು ಕೊಪ್ಪಳದಿಂದ ಸೈಕಲ್ ಮೂಲಕ ಪಂಜಾಬ್ಗೆ ಪ್ರಯಾಣ ಬೆಳೆಸಿ ಶಿವರಾಯಪ್ಪ ಹಾಗೂ ನವೀನ ಪ್ರಯಾಣಕ್ಕೆೆ ಚಾಲನೆ ನೀಡಿ ಮಾತನಾಡಿದರು. ಈ ಇಬ್ಬರು ಸ್ವಚ್ಛ ಭಾರತ, ಸ್ವಾಾಸ್ಥ ಭಾರತ. ಪರಿಸರ ಬೆಳೆಸಿ ಜೀವ ವೈವಿಧ್ಯ ಉಳಿಸಿ ಎಂಬ ಘೋಷಣೆಯೊಂದಿಗೆ ಪ್ರಯಾಣ ಬೆಳೆಸಿದ್ದಾಾರೆ. ಇವರ ಧೋರಣೆ ಇನ್ನಿಿತರರಿಗೆ ಮಾದರಿ ಎಂದರು
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್ ಸೈಕಲ್ ಓಡಾಟದಿಂದ ಆರೋಗ್ಯದ ಸಮಸ್ಯೆೆಗಳು ಬಗೆಹರಿಯುತ್ತಿಿವೆ. ಮಹನೀಯರ ಜನ್ಮ ಸ್ಥಳಗಳಿಗೆ ಈ ಇಬ್ಬರು ಸೈಕಲ್ ಮೇಲೆ ಪ್ರಯಾಣಿಸುತ್ತಿಿರುವುದು ಉತ್ತಮ ಮಾದರಿಯ ಕೆಲಸವೆಂದರು.
ಈ ಸಂದರ್ಭದಲ್ಲಿ ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಾಧ್ಯಕ್ಷ ಶರಣಬಸನಗೌಡ ಹಲಗೇರಿ. ಕೃಷಿ ತಜ್ಞ ಆನಂದತೀರ್ಥ ಪ್ಯಾಾಟಿ ಮಾತನಾಡಿದರು.
ಗಾಂಧಿ ಬಳಗದಿಂದ ಪ್ರಾಾಣೇಶ ಪೂಜಾರ, ಬೀರಪ್ಪ ಅಂಡಗಿ, ನಾಗರಾಜ ಡೊಳ್ಳಿಿನ ಸೇರಿ ಹಲವರು ಇದ್ದರು.
ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಹಿರೇಸಿಂದೋಗಿಯ ಶಿವರಾಯಪ್ಪ, ರಂಗಚಟುವಟಿಕೆಯ ತೊಡಗಿರುವ ಹಡಗಲಿ ತಾಲೂಕಿನ ಮುದೇನೂರದ ನವೀನ ಕಡಾರಿ ಎಂಬ ಇಬ್ಬರು ಯುವಕರು ಇಂದು ಕೊಪ್ಪಳದಿಂದ ಪಂಜಾಬ್ನ ಬಂಗಾ ಗ್ರಾಾಮಕ್ಕೆೆ ಪ್ರಯಾಣ ಬೆಳೆಸಿದ್ದಾಾರೆ. ಬಂಗಾ ಕ್ರಾಾಂತಿಕಾರಿ ಸ್ವಾಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ರ ಜನ್ಮ ಸ್ಥಳ. ಶಿವರಾಯಪ್ಪ ಈ ಹಿಂದೆ ಮಹಾತ್ಮ ಗಾಂಧಿ ಜನ್ಮ ಸ್ಥಳ ಪೋರಬಂದರು. ಮತ್ತೊೊಮ್ಮೆೆ ಸುಭಾಶ್ಚಂದ್ರ ಭೋಸರ ಜನ್ಮ ಸ್ಥಳ ಓಡಿಸ್ಸಾಾದ ಕಟಕ್ ಗೆ ಹೋಗಿ ಬಂದಿದ್ದರು. ಬಂಗಾ ಕ್ಕೆೆ ಕೊಪ್ಪಳದಿಂದ ಸರಿಸುಮಾರು 18 ರಿಂದ 20 ದಿನ ಸೈಕಲ್ ಮೂಲಕ ಪ್ರಯಾಣ ಬೆಳೆಸಿದ್ದು ಸೈಕಲ್ ಹಾಗು ವಾಸ್ತವ್ಯಕ್ಕೆೆ ಬೇಕಾಗುವಷ್ಟು ಅಗತ್ಯ ವಸ್ತುಗಳೊಂದಿಗೆ ಪ್ರಯಾಣ ಬೆಳೆಸಿದ್ದಾಾರೆ.
ಶಿವರಾಯಪ್ಪ ಹಾಗು ನವೀನ ರಿಗೆ ಪರಿಸರ ಹಾಗು ಆರೋಗ್ಯಕ್ಕೆೆ ಸಹಕಾರಿಯಾಗುವ ಸೈಕಲ್ ಸವಾರಿ ಹವ್ಯಾಾಸವಿದ್ದು ಅವರ ಪ್ರಯಾಣಕ್ಕೆೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾಾರೆ.
ಸೈಕಲ್ ಮೂಲಕ ಪಂಜಾಬ್ಗೆ ಪ್ರಯಾಣ ಸಾಹಸ ಕಾರ್ಯ – ಹೇಮಲತಾ

