ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ಕರ್ನಾಟಕ ಸರ್ಕಾರದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಗಳ ನಿಷೇಧ ಪ್ರತಿಬಂಧಕ ಕಾಯಿದೆ ಜಾರಿ ವಿರೋಧಿಸಿ ರಾಯಚೂರಿನಲ್ಲಿ ಜಿಲ್ಲಾಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಪದಾಧಕಾರಿಗಳು, ಕಾರ್ಯಕರ್ತರು ಪಾಲ್ಗೊೊಂಡು ರಾಜ್ಯ ಕಾಂಗ್ರೆೆಸ್ ಸರ್ಕಾರದ ವಿರುದ್ಧ ಘೋಷಣೆ ಹಾಕಿ ಆಕ್ರೋೋಶ ವ್ಯಕ್ತಪಡಿಸಿ ನಂತರ ಜಿಲ್ಲಾಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಗಳ ನಿಷೇಧ ಪ್ರತಿಬಂಧಕ ಕಾಯಿದೆಗೆ ರಾಜ್ಯಪಾಲರು ಅಂಕಿತ ಹಾಕದಂತೆ ಆಗ್ರಹಿಸಿದ ಅವರು ಕಾಂಗ್ರೆೆಸ್ ಪಕ್ಷಕ್ಕೆೆ ಕುಮ್ಮಕ್ಕು ನೀಡಿದಂತಾಗುತ್ತಿಿದೆ ಎಂದು ದೂರಿದರು.
ಈ ಕಾಯಿದೆಯು ಸಂವಿಧಾನದಲ್ಲಿ ಅಂಬೇಡ್ಕರ್ ಅವರು ನೀಡಿದ ಮಾತನಾಡುವ ಹಕ್ಕಿಿನ ವಿರುದ್ಧವಾಗಿದೆ ಯಾಕೆಂದರೆ ಯಾವುದೆ ಒಬ್ಬ ವ್ಯಕ್ತಿಿ ಯಾವುದೆ ಒಂದು ಕೃತ್ಯ ಮಾಡಿದಾಗ ಅದನ್ನು ಖಂಡಿಸುವುದು ಪ್ರತಿಯೊಬ್ಬರ ಕರ್ತವ್ಯ ಆದರೆ, ಅಂತಹ ಜವಾಬ್ದಾಾರಿ ಹಕ್ಕು ಕಸಿಯುವ ಹುನ್ನಾಾರ ಅಡಗಿದೆ ಎಂದು ಶಾಸಕ ಡಾ.ಶಿವರಾಜ ಪಾಟೀಲ ಆಕ್ರೋೋಶ ವ್ಯಕ್ತಪಡಿಸಿದರು.
ತಕ್ಷಣ ಈ ಕಾಯಿದೆಯನ್ನು ಅಂಗೀಕರಿಸಬಾರದು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾಾಧ್ಯಕ್ಷ ವೀರನಗೌಡ ಪಾಟೀಲ ಲೆಕ್ಕಿಿಹಾಳ, ನಗರಾಧ್ಯಕ್ಷ ರಾಘವೇಂದ್ರ ಉಟ್ಕೂರು, ಕಡಗೋಲು ಆಂಜನೇಯ್ಯಘಿ, ರವೀಂದ್ರ ಜಲ್ದಾಾರ್, ಶಂಕರರೆಡ್ಡಿಿಘಿ, ರಾಮಚಂದ್ರ ಕಡಗೋಲು, ಸಂತೋಷ ರಾಜಗುರು, ಈ.ಶಶಿರಾಜ್, ಶಿವಕುಮಾರ ಪಾಟೀಲ ನಾಗರಾಜ ಬಾಲ್ಕಿಿಘಿ, ನಾಗವೇಣಿ, ಸಂಗೀತಾ, ವಿಪಿ ರೆಡ್ಡಿಿಘಿ, ಬಂಡೇಶ ವಲ್ಕಂದಿನ್ನಿಿಘಿ, ಶರಣಮ್ಮಘಿ, ರಾಧಾ, ಶಿವಲಕ್ಷ್ಮೀ ವೀರೇಶ, ಚಂದ್ರಶೇಖರ ಸೇರಿ ಅನೇಕರು ಪಾಲ್ಗೊೊಂಡಿದ್ದರು.
ಬಿಜೆಪಿಯಿಂದ ಪ್ರತಿಭಟನೆ, ಸರ್ಕಾರದ ವಿರುದ್ಧ ಆಕ್ರೋೋಶ ದ್ವೇಷ ಭಾಷಣ ನಿಷೇಧ ಪ್ರತಿಬಂಧಕ ಕಾಯಿದೆ ಜಾರಿಗೆ ವಿರೋಧ

