ಸುದ್ದಿಮೂಲ ವಾರ್ತೆ ದಾವಣಗೆರೆ, ಡಿ.26:
ಕೇಂದ್ರ ಸರ್ಕಾರ ಏಕಾಏಕಿ ರೈಲ್ವೇ ಪ್ರಯಾಣ ದರ ಏರಿಕೆ ಮಾಡಿರುವುದನ್ನು ರಾಜ್ಯದ ಬಿಜೆಪಿ ನಾಯಕರು ಏಕೆ ಪ್ರಶ್ನಿಿಸುತ್ತಿಿಲ್ಲ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಆಕ್ರೋೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ದಿ. ಶಾಮನೂರು ಶಿವಶಂಕರಪ್ಪ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ರಾಜ್ಯ ಸರ್ಕಾರ ಅನಿವಾರ್ಯ ಕಾರಣಗಳಿಗಾಗಿ ಕೆಲ ದರ ಏರಿಕೆ ಮಾಡಿದಾಗ ಬೊಬ್ಬಿಿರಿಯುವ ಬಿಜೆಪಿ ನಾಯಕರು ರೈಲು ಪ್ರಯಾಣದ ದರ ಏರಿಕೆ ಮಾಡಿರುವುದರ ಬಗ್ಗೆೆ ತುಟಿ ಬಿಚ್ಚುತ್ತಿಿಲ್ಲ. ದರ ಏರಿಕೆ ಬಗ್ಗೆೆ ಮಾತನಾಡಬೇಕು ಎಂದು ಅವರು ಆಗ್ರಹಿಸಿದರು.
ರೈಲು ಪ್ರಯಾಣ ದರ ಏರಿಕೆ ಜನ ಸಾಮಾನ್ಯರ ಮೇಲೆ ದೊಡ್ಡ ಹೊರೆಯಾಗುತ್ತಿಿದೆ. ಈ ಹೊರೆ ರಾಜ್ಯದ ಬಿಜೆಪಿ ನಾಯಕರಿಗೆ ಗೊತ್ತಿಿಲ್ಲ. ಅವರು ಕಾಂಗ್ರೆೆಸ್ ಸರ್ಕಾರ ಪತನವಾಗುವುದರ ಬಗ್ಗೆೆಯೇ ಚಿಂತೆ ನಡೆಸುತ್ತಿಿದ್ದಾರೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಬಾಕ್ಸ್
ಹಿರಿಯೂರು ಬಸ್ ಅಪಘಾತ: ತನಿಖೆ
ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ಮತ್ತು ಟ್ರಕ್ ಅಪಘಾತದ ಬಗ್ಗೆೆ ಪತ್ರಕರ್ತರ ಪ್ರಶ್ನೆೆಗೆ ಉತ್ತರಿಸುತ್ತಾಾ, ಈ ಅಪಘಾತದಲ್ಲಿ ಟ್ರಕ್ ಚಾಲಕನ ತಪ್ಪಿಿರುವುದಾಗಿ ಮೇಲ್ನೋೋಟಕ್ಕೆೆ ಕಂಡು ಬರುತ್ತಿಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿರುದ್ಧ ದಿಕ್ಕಿಿನಲ್ಲಿ ಬರುತ್ತಿಿದ್ದ ಟ್ರಕ್ ವಿಭಜಕವನ್ನು ದಾಟಿ ಬಸ್ಗೆ ಡಿಕ್ಕಿಿ ಹೊಡೆದಿದೆ. ಅಪಘಾತದಲ್ಲಿ 4 ಮಹಿಳೆಯರು ಹಾಗೂ ಒಂದು ಮಗು ಹಾಗೂ ಟ್ರಕ್ ಚಾಲಕ ಸಾವಿಗೀಡಾಗಿದ್ದಾರೆ. ಬಸ್ಸುಗಳು ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಅನುಸರಿಸುವುದು ಅವಶ್ಯಕ. ಅಪಘಾತದ ಬಗ್ಗೆೆ ತನಿಖೆ ನಡೆಸಲಾಗುವುದು ಎಂದರು.

