ಸುದ್ದಿಮೂಲ ವಾರ್ತೆ ಬೀದರ್, ಡಿ.26:
ಅಕ್ರಮ ಹಣ ವರ್ಗಾವಣೆ, ಹಣ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆೆ ಹೆಚ್ಚುತ್ತಿಿದ್ದು, ಇದೀಗ ರಾಷ್ಟ್ರಿಿಕೃತ ಬ್ಯಾಾಂಕ್ನ ಮ್ಯಾಾನೇಜರ್ ಒಬ್ಬರು ವಂಚನೆ ಪ್ರಕರಣದಲ್ಲಿ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ.
ಹುಮನಾಬಾದ್ ಎಸ್ಬಿಿಐ ಬ್ಯಾಾಂಕ್ನಲ್ಲಿ ಈ ಘಟನೆ ನಡೆದಿದ್ದು, ಬ್ಯಾಾಂಕ್ನ ರಿಜನಲ್ ಕಚೇರಿಯ ಎಟಿಎಂ ಚನಲ್ ಮ್ಯಾಾನೇಜರ್ಪ್ರವೀಣಕುಮಾರ್ ಹಾಗೂ ಇತರರ ವಿರುದ್ಧ 1.25 ಕೋಟಿ ರೂ. ವಂಚನೆ ನಡೆಸಿದ ಹಿನ್ನೆೆಲೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಲ್ಲಾ ಎಸ್ಬಿಐನ ಎಟಿಎಂ ನಿರ್ವಹಣೆ ನೋಡಿಕೊಳ್ಳುತ್ತಿಿದ್ದ ಪ್ರವೀಣಕುಮಾರ್ ಅಕ್ರಮ ಎಸಗಿ ಬ್ಯಾಾಂಕ್ಗೆ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 16 ಎಟಿಎಂಗಳ ಬ್ಯಾಾಂಕ್ ಖಾತೆಯಿಂದ ಹಣ ಡ್ರಾಾ ಮಾಡುವ ಅಧಿಕಾರ ಪ್ರವೀಣಗೆ ಇತ್ತು. ಇದನ್ನೇ ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬ್ಯಾಾಂಕ್ ಮಾನೇಜರ್ ರಘುನಾಥ್ ಕೆಎಲ್ ದೂರು ನೀಡಿದ್ದು, 31-8-24ರಿಂದ 29-11-25ರವರೆಗೆ ಆರೋಪಿ ಪ್ರವೀಣಕುಮಾರ್ ಸ್ನೇಹಿತರ ಹಾಗೂ ಸಂಬಂಧಿಗಳ ಖಾತೆಗಳಿಗೆ ಅಕ್ರಮವಾಗಿ ನಕಲಿ ಓಚರ್ಗಳನ್ನು ಬರೆದು ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿಿದ್ದಾರೆ.

