ಸುದ್ದಿಮೂಲ ವಾರ್ತೆ ಹುಬ್ಬಳ್ಳಿಿ, ಡಿ.26:
ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಿ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಖಾಸಗಿ ಬಸ್ ಚಾಲಕ ಶುಕ್ರವಾರ ಆಸ್ಪತ್ರೆೆಯಲ್ಲಿ ನಿಧನರಾದರು.
ಇವರ ನಿಧನದೊಂದಿಗೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆೆ 7ಕ್ಕೆೆ ಏರಿದೆ.
ಹಿರಿಯೂರು ಕಡೆಯಿಂದ ಬರುತ್ತಿಿದ್ದ ಲಾರಿ ಡಿವೈಡರ್ ದಾಟಿ ಗೋಕರ್ಣದತ್ತ ಸಾಗುತ್ತಿಿದ್ದ ಬಸ್ಗೆ ಗುದ್ದಿದ ಪರಿಣಾಮ ಚಾಲಕನ ಮೊಹಮ್ಮದ್ ರಫೀಕ್ ಹುಲಗೂರು (45) ಅವರ ಕಾಲು ಹಾಗೂ ಹೊಟ್ಟೆೆಗೆ ತೀವ್ರ ಪೆಟ್ಟಾಾಗಿತ್ತು. ಇದರಿಂದ ಅವರು ಬಹು ಅಂಗಾಂಗ ವೈಲ್ಯ ಉಂಟಾಗಿತ್ತು.
ಹುಬ್ಬಳ್ಳಿಿಯ ಕೆಎಂಸಿ-ಆರ್ಐ ಆಸ್ಪತ್ರೆೆಯಲ್ಲಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆೆ ಪಡೆಯುತ್ತಿಿದ್ದರು.
ಚಿಕಿತ್ಸೆೆ ಬಳಿಕ ಚೇತರಿಸಿಕೊಳ್ಳಬಹುದು ಎನ್ನುವ ಭರವಸೆಯನ್ನು ವೈದ್ಯರು ಕುಟುಂಬದವರಿಗೆ ಹೇಳಿದ್ದರು. ಆದರೆ ಶುಕ್ರವಾರ ಅವರು ಮೃತಪಟ್ಟಿಿದ್ದಾರೆ ಎಂದು ಆಸ್ಪತ್ರೆೆಯ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ತಿಳಿಸಿದ್ದಾರೆ.
ಚಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿಿದೆ. ಮೃತ ಮೊಹಮ್ಮದ್ ರಫೀಕ್ ಸಹೋದರಿ ಮಾತನಾಡಿ ಮನೆಯ ಯಜಮಾನನನ್ನೇ ಕಳೆದುಕೊಂಡಿದ್ದೇವೆ. ನಮ್ಮ ಅಣ್ಣನೇ ನಮಗೆಲ್ಲ ಆಸರೆಯಾಗಿದ್ದ. ಕುಟುಂಬ ಮುನ್ನಡೆಸುತ್ತಿಿದ್ದ. ಅಪಘಾತದಲ್ಲಿ ಬದುಕುಳಿದಾಗ ಸ್ವಲ್ಪ ಸಮಾಧಾನ ಆಗಿತ್ತು. ಹುಬ್ಬಳ್ಳಿಿ ಕಿಮ್ಸ್ ಆಸ್ಪತ್ರೆೆಗೆ ನಿನ್ನೆೆ ಕರೆದುಕೊಂಡು ಬಂದಿದ್ದೆವು. ಆದರೆ ರಾತ್ರಿಿ ಆಪರೇಷನ್ ಮಾಡುವವರೆಗೂ ಮಾತನಾಡುತ್ತಾಾ ಇದ್ದರು. ರಾತ್ರಿಿ 12:30ಕ್ಕೆೆ ಆಪರೇಷನ್ಗೆ ಕರೆದುಕೊಂಡು ಹೋಗಿದ್ದರು. ಆಪರೇಷನ್ ಮುಗಿದ ಮೇಲೆ ಕೇವಲ ಉಸಿರಾಟ ಇತ್ತು. ಆದರೆ ಇಂದು ಬೆಳಗ್ಗೆೆ 6 ಗಂಟೆಗೆ ನಮ್ಮ ಅಣ್ಣ ಸಾವನ್ನಪ್ಪಿಿದ್ದಾರೆ ಎಂದು ಕಣ್ಣೀರು ಹಾಕಿದರು.
ಘಟನೆ ಬಳಿಕ ಮಾಧ್ಯಮಕ್ಕೆೆ ಪ್ರತಿಕ್ರಿಿಯಿಸಿದ್ದ ಚಾಲಕ: ಘಟನೆ ಬಳಿಕ ಆಸ್ಪತ್ರೆೆಗೆ ದಾಖಲಾಗಿದ್ದ ಚಾಲಕ ಮೊಹಮ್ಮದ್ ರಫೀಕರನ್ನು ಮಾಧ್ಯಮದವರು ಮಾತನಾಡಿಸಿದ್ದಾಗ ಲಾರಿಯು ಬಸ್ನ ಡಿಸೇಲ್ ಟ್ಯಾಾಂಕ್ಗೆ ಡಿಕ್ಕಿಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಿಕೊಂಡಿದೆ. ನಮ್ಮ ಬಸ್ನಲ್ಲಿ ಇಬ್ಬರು ಮಕ್ಕಳಿದ್ದರು. ಶಿವಮೊಗ್ಗ, ಕುಮಟಾ ಮೂಲಕ ಗೋಕರ್ಣಕ್ಕೆೆ ತೆರಳುತ್ತಿಿದ್ದೆವು. ದಾರಿ ಮಧ್ಯೆೆ, ಊಟ ಮುಗಿಸಿ ಪ್ರಯಾಣ ಮುಂದುವರೆಸಿದ್ದೆವು. ಆಗ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದರು.
ಬಾಕ್ಸ್
ಹುಬ್ಬಳ್ಳಿಿಯಲ್ಲಿ ಡಿಎನ್ಎ ಪರೀಕ್ಷೆ
ಚಿತ್ರದುರ್ಗ ಬಸ್ ದುರಂತ ಪ್ರಕರಣದಲ್ಲಿ ಮೃತರ ಡಿಎನ್ಎ ಪರೀಕ್ಷೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಮೃತ ದೇಹದ ಮೂಳೆಗಳ ಸ್ಯಾಾಂಪಲ್ಸ್ ಹುಬ್ಬಳ್ಳಿಿಗೆ ರವಾನೆ ಮಾಡಿದ್ದು, ಹುಬ್ಬಳ್ಳಿಿಯ ಪ್ರಾಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಯಲಿದೆ. ಹುಬ್ಬಳ್ಳಿಿಯ ಗೋಕುಲ ರಸ್ತೆೆಯಲ್ಲಿರುವ ಪ್ರಾಾದೇಶಿಕ ನ್ಯಾಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಯ ವರದಿ ಆಧಾರದ ಮೇಲೆ ಮೃತರ ಗುರುತು ಪತ್ತೆೆ ಹಚ್ಚಲು ಸಹಕಾರಿಯಾಗಲಿದೆ.

