ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.26:
ಯುವಜನೋತ್ಸವವು ವಿದ್ಯಾಾರ್ಥಿಗಳ ಅಡಗಿರುವ ಪ್ರತಿಭೆಯನ್ನು ಹೊರತರುವ ಮಹತ್ವದ ವೇದಿಕೆಯಾಗಿದೆ. ಪಠ್ಯಾಾಭ್ಯಾಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗಲೇ ಸಂಪೂರ್ಣ ವ್ಯಕ್ತಿಿತ್ವ ವಿಕಸನ ಸಾಧ್ಯ ಎಂದು ರಾಯಚೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ ಹೇಳಿದರು.
ಇಲ್ಲಿನ ಕೃಷಿ ಮಹಾವಿದ್ಯಾಾಲಯದಲ್ಲಿ ಆಯೋಜಿಸಲಾಗಿರುವ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯದ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯದ 16ನೇ ಅಂತರ ಮಹಾವಿದ್ಯಾಾಲಯಗಳ ಯುವಜನೋತ್ಸವ 2025-26 ಕಲಾ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯುವಜನೋತ್ಸವದಂತಹ ಕಾರ್ಯಕ್ರಮಗಳು ವಿದ್ಯಾಾರ್ಥಿಗಳ ಆತ್ಮವಿಶ್ವಾಾಸ, ನಾಯಕತ್ವ ಮತ್ತು ಸೃಜನಶೀಲತೆ ಹೆಚ್ಚಿಿಸುತ್ತವೆ ಎಂದರು.
ಈ ಯುವಜನೋತ್ಸವದಲ್ಲಿ ಏಳು ಮಹಾವಿದ್ಯಾಾಲಯಗಳ ವಿದ್ಯಾಾರ್ಥಿಗಳು ಭಾಗವಹಿಸಿದ್ದು, ದೇಶಭಕ್ತಿಿ ಗೀತೆ, ಸುಗಮ ಸಂಗೀತ, ಸಮೂಹ ಗಾಯನ, ಏಕಾಂಕ ನಾಟಕ, ಭಿತ್ತಿಿ ಚಿತ್ರ, ವ್ಯಂಗ್ಯಚಿತ್ರ ರಚನೆ, ಚರ್ಚಾ ಸ್ಪರ್ಧೆ, ಆಶುಭಾಷಣ, ಏಕಪಾತ್ರಾಾಭಿನಯ, ಸ್ಥಳದಲ್ಲೇ ಚಿತ್ರ ಬಿಡಿಸುವುದು ಹಾಗೂ ಮಣ್ಣಿಿನಿಂದ ಆಕೃತಿ ರಚನೆ ಸೇರಿದಂತೆ ವೈವಿಧ್ಯಮಯ ಸ್ಪರ್ಧೆಗಳು ನಡೆಯಲಿವೆ.
ತೀರ್ಪುಗಾರರು ನಿಜವಾದ ಪ್ರತಿಭೆಗಳನ್ನು ಗುರುತಿಸಿ ಪ್ರೋೋತ್ಸಾಾಹ ನೀಡಬೇಕು.
ಯುವಜನೋತ್ಸವ ಕಾರ್ಯಕ್ರಮಕ್ಕೆೆ ರಾಜ್ಯ ಪ್ರಶಸ್ತಿಿ ಪುರಸ್ಕೃತ ಹಾಗೂ ಖ್ಯಾಾತ ಹಾಸ್ಯ ಕಲಾವಿದ ವೈಜನಾಥ ಬಿರಾದರ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಡಾ. ಸಂದೀಪ್ ಬಿ. ಮಾಳಗಿ, ಡಾ. ಯು.ಸತೀಶಕುಮಾರ ಮಾತನಾಡಿದರು. ವಿವಿಧ ಮಹಾವಿದ್ಯಾಾಲಯಗಳ ವಿದ್ಯಾಾರ್ಥಿಗಳಿಂದ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಡಿ., ಮಲ್ಲೇಶ ಕೊಲಿಮಿ, ಡಾ.ಗುರುರಾಜ ಸುಂಕದ, ಡಾ. ಎ.ಅಮರೇಗೌಡ, ಡಾ.ಶ್ಯಾಾಮರಾವ ಜಹಾಗೀರದಾರ, ಡಾ.ರವಿಶಂಕರ, ಡಾ. ಜಾಗೃತಿ ಬಿ. ದೇಶಮಾನ್ಯ, ಡಾ. ಶಿವಶರಣಪ್ಪ ಬಿ. ಗೌಡಪ್ಪ, ಸೇರಿದಂತೆ ಉಪನ್ಯಾಾಸಕರು, ಶಿಕ್ಷಕೇತರ ಸಿಬ್ಬಂದಿಗಳು, ವಿಶ್ವವಿದ್ಯಾಾಲಯದ ವಿದ್ಯಾಾರ್ಥಿಗಳು ಹಾಗೂ ಶಿಕ್ಷಕೇತರ ಸಿಬ್ಬಂದಿ ಇದ್ದರು.
ಯುವಜನೋತ್ಸವ ವಿದ್ಯಾರ್ಥಿಗಳ ಆತ್ಮವಿಶ್ವಾಸ ನಾಯಕತ್ವ ಸೃಜನಶೀಲತೆ ಹೆಚ್ಚಿಸುತ್ತದೆ :ಡಾ. ಎಂ. ಹನುಮಂತಪ್ಪ

