ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.26:
ದೆಹಲಿಯಲ್ಲಿ ಶನಿವಾರ ನಡೆಯುವ ಕಾಂಗ್ರೆೆಸ್ ಪಕ್ಷದ ರಾಷ್ಟ್ರಿಿೈಯ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಭಾಗವಹಿಸಲು ಆಹ್ವಾಾನಿತರಾಗಿ ಇಂದು ಸಂಜೆ ದೆಹಲಿಗೆ ತೆರಳಿದರು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಹ್ವಾಾನ ಇಲ್ಲದೆ ಸಭೆಯಿಂದ ದೂರ ಉಳಿದಿದ್ದಾರೆ. ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ನಡೆಯುತ್ತಿಿರುವ ಅಧಿಕಾರ ಹಂಚಿಕೆಯ ಗೊಂದಲಕ್ಕೆೆ ಇಂದು ಹೈಕಮಾಂಡ್ ತೆರೆ ಎಳೆಯಬಹುದೇ ಎಂಬ ಕುತೂಹಲ ಮೂಡಿಸಿದೆ.
ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಕಾರ್ಯಕಾರಣಿಗೆ ಆಹ್ವಾಾನ ನೀಡಿಲ್ಲ. ಇದನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆೆಲೆಯನ್ನು ನೋಡಿದಾಗ ಕಾಂಗ್ರೆೆಸ್ ಹೈಕಮಾಂಡ್ ಯಾವ ರೀತಿಯ ಸಂದೇಶ ನಿಗೂಢವಾಗಿ ಕಾಣಿಸುತ್ತಿಿದೆ.
ತಮಗೆ ಕಾರ್ಯಕಾರಿಣಿಗೆ ಆಹ್ವಾಾನ ನೀಡದ ಹಾಗೂ ಅಧಿಕಾರ ಹಂಚಿಕೆ ವಿಚಾರದಲ್ಲಿ ತಮ್ಮನ್ನು ನಿರ್ಲಕ್ಷಿಸಿದ ಬಗ್ಗೆೆ ಸ್ವತಃ ಕಾಂಗ್ರೆೆಸ್ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚಿಸಿದ್ಧಾಾರೆ. ಹೈಕಮಾಂಡ್ ತಮ್ಮ ವಿಚಾರದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಡಿ.ಕೆ. ಶಿವಕುಮಾರ್ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಅವರು ಏಕಾಂಗಿಯಾಗಿ ದೆಹಲಿಗೆ ತೆರಳುತ್ತಿಿರುವುದರಿಂದ, ಪಕ್ಷದ ವರಿಷ್ಠ ನಾಯಕರ ಜೊತೆ ನಾಯಕತ್ವ ವಿಚಾರವಾಗಿ ಚರ್ಚೆ ಮಾಡುವ ಸದಾವಕಾಶ ದೊರೆತಂತಾಗಿದೆ. ಸಿಡಬ್ಲ್ಯೂಸಿ ಸಭೆ ಬಳಿಕ ಅಧಿಕಾರ ಹಂಚಿಕೆಯ ಪ್ರಹಸನ ತಾರ್ಕಿಕ ಅಂತ್ಯ ಕಾಣಬಹುದು ಎಂಬ ನಿರೀಕ್ಷೆಗಳು ಗರಿಗೆದರಿವೆ.
ಕಳೆದ ವಾರ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದರು. ಆದರೆ ಆ ಸಂದರ್ಭದಲ್ಲಿ ಈ ರಾಷ್ಟ್ರೀಯ ಮಟ್ಟದ ಯಾವ ನಾಯಕರನ್ನೂ ಭೇಟಿ ಮಾಡದೆ ಬರಿ ಕೈಯಲ್ಲಿ ವಾಪಸ್ ಬಂದಿದ್ದರು. ಬೆಂಗಳೂರಿಗೆ ಬಂದ ಬಳಿಕ ಇಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಹಕ್ಕೊೊತ್ತಾಾಯವನ್ನು ಮಂಡಿಸಿದ್ದರು. ಮುಖ್ಯಮಂತ್ರಿಿ ಹುದ್ದೆ ತಮಗೆ ಸಿಗಲೇಬೇಕು ಎಂಬುದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದರು.
ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಹೈಕಮಾಂಡ್ ನಿರ್ಧಾರಗಳಿಗೆ ತಾವು ಬದ್ಧ ಎಂದು ಸಿದ್ದರಾಮಯ್ಯ ಹೇಳುವ ಮೂಲಕ ತಣ್ಣಗೆ ಪ್ರತಿಕ್ರಿಿಯಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ನಾಯಕತ್ವದ ಗೊಂದಲಗಳನ್ನು ಸೃಷ್ಟಿಿ ಮಾಡಿಕೊಂಡಿರುವವರು ರಾಜ್ಯದ ನಾಯಕರು. ಅವರೇ ಬಗೆಹರಿಸಿಕೊಳ್ಳಲಿ. ಈ ವಿಷಯವಾಗಿ ಹೈಕಮಾಂಡ್ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅದರ ಹೊರತಾಗಿಯೂ ಡಿ.ಕೆ.ಶಿವಕುಮಾರ್ ಬಣ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ನಾಯಕತ್ವದ ಗೊಂದಲಗಳನ್ನು ಬಗೆಹರಿಸಬೇಕು ಎಂದು ಪ್ರತಿಪಾದಿಸುತ್ತಲೇ ಇದೆ.
ಈ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜೊತೆ ಚರ್ಚೆ ಮಾಡುವ ಸಾಧ್ಯತೆ ಇದೆ. ಕಳೆದ ತಿಂಗಳು ರಾಹುಲ್ ಗಾಂಧಿಯವರು ಡಿ.ಕೆ.ಶಿವಕುಮಾರ್ ಭೇಟಿಗೆ ಸಮಯ ನೀಡಲು ಹಿಂದೇಟು ಹಾಕಿದ್ದರು. ಅದೇ ವೇಳೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಡಿಕೆ ಶಿವಕುಮಾರ್ ಒಂದು ತಿಂಗಳ ಅಂತರದಲ್ಲಿ ನಾಲ್ಕು ಬಾರಿ ದೆಹಲಿಗೆ ತೆರಳಿದ್ದಾರೆ. ಆದರೆ ಒಮ್ಮೆೆಯೂ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗಿಲ್ಲ. ಸಿಡಬ್ಲ್ಯೂಸಿ ಸಭೆಯಲ್ಲಿ ಒಂದು ವೇಳೆ ರಾಹುಲ್ಗಾಾಂಧಿ ಅವರು ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ನಡೆಸಿದಲ್ಲಿ ಡಿ.ಕೆ.ಶಿವಕುಮಾರ್ ಬಣವನ್ನು ಮತ್ತಷ್ಟು ಕೆರಳಿಸುವ ಮಾಡಬಹುದು.
ಹೈಕಮಾಂಡ್ ಮೇಲೆ ಸಿಎಂ ಒತ್ತಡ?
ಅಧಿಕಾರ ಹಂಚಿಕೆಯ ವಿಚಾರವಾಗಿ ಹೈಕಮಾಂಡ್ ನಿರ್ಧಾರಕ್ಕೆೆ ಬದ್ಧ ಎಂದು ಹೇಳುತ್ತಲೇ ಇರುವ ಸಿಎಂ ಸಿದ್ದರಾಮಯ್ಯ ಸಿಡಬ್ಲ್ಯೂಸಿ ಸಭೆ ವೇಳೆ ರಾಜ್ಯ ರಾಜಕಾರಣದ ಬಗ್ಗೆೆಯೂ ಹೈಕಮಾಂಡ್ ನಾಯಕರ ಜೊತೆ ಚರ್ಚಿಸುವ ಸಾಧ್ಯತೆ ಇದೆ. ನಾಯಕತ್ವಕ್ಕೆೆ ಸಂಬಂಧಪಟ್ಟಂತೆ ಉಂಟಾಗಿರುವ ಗೊಂದಲಗಳನ್ನು ತಳ್ಳಿಿಹಾಕಿ ಹೈಕಮಾಂಡ್ ತಮ್ಮ ಪರವಾಗಿ ನಿರ್ಣಯ ಕೈಗೊಳ್ಳಲು ಒತ್ತಡ ಹಾಕಬಹುದು ಎಂದು ಮೂಲಗಳು ತಿಳಿಸಿವೆ.
ಎಐಸಿಸಿ ಕಾರ್ಯಕಾರಿ ಸಭೆಯಲ್ಲಿ ಪ್ರಮುಖವಾಗಿ ಉದ್ಯೋೋಗ ಖಾತ್ರಿಿ ಯೋಜನೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಜಾರಿಗೆ ತರುತ್ತಿಿರುವ ತಿದ್ದುಪಡಿಗಳ ಬಗ್ಗೆೆ ಚರ್ಚೆಯಾಗಲಿದೆ. ಸಭೆಗೆ ಆರಂಭದಲ್ಲಿ ಸಿದ್ದರಾಮಯ್ಯ ತಮಗೆ ಆಹ್ವಾಾನ ಇಲ್ಲ ಎಂದು ಹೇಳಿದ್ದರು. ಆದರೆ ಹೈಕಮಾಂಡ್, ಪಕ್ಷ ಆಡಳಿತವಿರುವ ಎಲ್ಲಾ ಮೂರು ರಾಜ್ಯಗಳ ಮುಖ್ಯಮಂತ್ರಿಿಗಳಿಗೂ ಸಭೆಯಲ್ಲಿ ಭಾಗವಹಿಸಲು ಸೂಚನೆ ನೀಡಿದೆ. ಅದರಂತೆ ಕರ್ನಾಟಕ, ಹಿಮಾಚಲಪ್ರದೇಶ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಿಗಳು ಭಾಗವಹಿಸುತ್ತಿಿದ್ದಾರೆ.

