ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಾಲಯದಲ್ಲಿನ 75 ಜನ ಸಹ ಪ್ರಾಾಧ್ಯಾಾಪಕರ ನೇರ ನೇಮಕಾತಿಯ ಪರೀಕ್ಷೆೆಯನ್ನು ಕರ್ನಾಟಕ ಪರೀಕ್ಷಾಾ ಪ್ರಾಾಧಿಕಾರದ ಮೂಲಕ ನಡೆಸದೆ ಹೋದರೆ ವಿಶ್ವ ವಿದ್ಯಾಾಲಯಕ್ಕೆೆ ಬೀಗ ಹಾಕಲಾಗುವುದು ಎಂದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಅಂಬಣ್ಣ ಅರೋಲಿ ಎಚ್ಚರಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ವಿಶ್ವ ವಿದ್ಯಾಾಲಯದ ಹುದ್ದೆೆಗಳ ನೇಮಕಾತಿಗೆ ಜನವರಿ 17ರಿಂದ 20ರವರೆಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಿಖಿತ ಪರೀಕ್ಷೆೆ ನಡೆಸಲು ಉದ್ದೇಶಿಸಿರುವುದರ ಹಿಂದೆ ಕುಲಪತಿ ಡಾ.ಹನುಮಂತಪ್ಪ ಅಕ್ರಮವಾಗಿ ಹುದ್ದೆೆಗಳ ನೇಮಕಾತಿಗೆ ಒಳ ಒಪ್ಪಂದ ಮಾಡಿಕೊಂಡು ಅಧಿಸೂಚನೆ ಪ್ರಕಟಿಸಿದ್ದಾಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಬಗ್ಗೆೆ ನ್ಯಾಾಯಾಲಯಕ್ಕೆೆ ಮೊರೆ ಹೋಗಿದ್ದರಿಂದ ಮೂರು ಬಾರಿ ಮುಂದೂಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಸೇವಾ ನಿವೃತ್ತಿಿ ಹೊಂದಲಿರುವ ಹನುಮಂತಪ್ಪ ಅಭ್ಯರ್ಥಿಗಳಿಂದ ಲಕ್ಷಾಾಂತರ ಹಣ ವಸೂಲಿ ಮಾಡಿ 40 ಕೋಟಿ ಸಂಗ್ರಹಿಸಲು ಕಾನೂನು ಬಾಹಿರವಾಗಿ ನೇಮಕಾತಿ ಪ್ರಕ್ರಿಿಯೆ ನಡೆಸಲು ಮುಂದಾಗಿದ್ದಾಾರೆ ಎಂದು ಟೀಕಿಸಿದರು. ಹೀಗಾಗಿ, ಯುಜಿಸಿ ನಿಯಮಗಳ ಪ್ರಕಾರ ನೇಮಕಾತಿ ನಡೆಸಲು ಆಗ್ರಹಿಸಿದರು.
2023ರಿಂದಲೂ ವಿಶ್ವ ವಿದ್ಯಾಾಲಯದಲ್ಲಿ ಅಕ್ರಮ ನಡೆಯುತ್ತಿಿದ್ದರೂ ಯಾರೂ ಗಮನ ಹರಿಸುತ್ತಿಿಲ್ಲ ಇದರಿಂದ ಐಸಿಎಆರ್ನಿಂದ ಎಸ್ಸಿ, ಎಸ್ಟಿ ಮೀಸಲಾದ 2 ಕೋಟಿ ಎಸ್ಇಪಿ, ಟಿಎಸ್ಪಿ ಅನುದಾನ, ಜ್ಞಾನ ಕೇಂದ್ರದ ಪ್ರತಿ ವರ್ಷದ 1 ಕೋಟಿ ಅನುದಾನವನ್ನೂ ಸಮರ್ಪಕವಾಗಿ ಬಳಸದೆ ದುರ್ಬಳಕೆ ಮಾಡಿಕೊಂಡಿದ್ದಾಾರೆ ಅದಕ್ಕೆೆ ಯಾವುದೆ ಲೆಕ್ಕಗಳೇ ಇಲ್ಲ , ವಿದೇಶ ಪ್ರವಾಸಕ್ಕೆೆ ಬಳಸಬಹುದಾದ ಅನುದಾನ ಒಬ್ಬ ವಿದ್ಯಾಾರ್ಥಿಯನ್ನು ಮೂರು ಬಾರಿ ಆಯ್ಕೆೆ ಮಾಡಿ ಹಣ ಎತ್ತುವಳಿ ಮಾಡಿ ನಿಯಮ ಗಾಳಿಗೆ ತೂರಿದ್ದಾಾರೆ. ವರ್ಗಾವಣೆ, ಬಡ್ತಿಿಯಲ್ಲಂತೂ ಇವರದ್ದೆೆ ರ್ಮಾನು ಮೀರುವಂತಿಲ್ಲಘಿ. 1 ಲಕ್ಷ ಬಿಲ್ ಪಾವತಿಗೆ ಶೇ.20ರಷ್ಟು ಕಮಿಷನ್ ಕಡ್ಡಾಾಯವಾಗಿ ಮಾಡಲಾಗಿದೆ ಎಂದು ದೂರಿದರು.
ಕೃಷಿ ವಿವಿಯ ಕುಲಪತಿಯವರ ಸರ್ವಾಧಿಕಾರಿ ಧೋರಣೆಗೆ ಉಸ್ತುವಾರಿ ಸಚಿವರು ಸೇರಿ ಜಿಲ್ಲೆೆಯ ಶಾಸಕರು ವಾರದೊಳಗೆ ಕ್ರಮ ವಹಿಸದೆ ಹೋದರೆ ವಿಶ್ವ ವಿದ್ಯಾಾಲಯಕ್ಕೆೆ ಬೀಗ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಕೆ.ಪಿ.ಅನಿಲಕುಮಾರ್, ರಾಘವೇಂದ್ರ ಬೋರೆಡ್ಡಿಿಘಿ, ಜಿ.ರಾಜು ಇತರರಿದ್ದರು.
ವಾರದಲ್ಲಿ ಸರಿಪಡಿಸದಿದ್ದರೆ ವಿವಿಗೆ ಬೀಗದ ಎಚ್ಚರಿಕೆ ಕೃಷಿ ವಿವಿ ಸಹಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆೆ ಕೆಇಎದಿಂದಲೆ ನಡೆಸಿ – ಅಂಬಣ್ಣ ಅರೋಲಿ

