ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ವೃತ್ತಿಿಯ ಘನತೆ ಕಾಪಾಡುವ ಜೊತೆಗೆ ಬ್ಲಾಾಕ್ ಮೇಲ್ ಮಾಡುವ ಪತ್ರಕರ್ತರಿಗೆ ಕಡಿವಾಣ ಹಾಕಲು ನಾವೆಲ್ಲ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ನಗರದ ಕನ್ನಡ ಭವನದಲ್ಲಿ ಗುರುವಾರ ಸಂಜೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಯಚೂರು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಾಟಿಸಿ ಮಾತನಾಡಿದರು. ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗಾಗಿಯೇ ಸಂಘ ಅನೇಕ ಕಾರ್ಯಕ್ರಮ ಹಮ್ಮಿಿಕೊಳ್ಳುತ್ತಿಿದೆ. ಜೀವನ ನಡೆಸಲು ಕಷ್ಟವಾಗುತ್ತಿಿದೆ ಎಂಬ ಕಾರಣಕ್ಕೆೆ ಪತ್ರಕರ್ತರು ಬ್ಲಾಾಕ್ ಮೇಲ್ ಹಾದಿ ಹಿಡಿಯುವುದು ನಮ್ಮ ವೃತ್ತಿಿಗೆ ಗೌರವ ತರುವಂಥದ್ದಲ್ಲ. ನೈಜ ಪತ್ರಕರ್ತರ ಹಿತ ಕಾಯುವುದು, ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಲು ನಾವೆಲ್ಲ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದರು.
ಗ್ರಾಾಮೀಣ ಬಸ್ ಪಾಸ್ ಯೋಜನೆ ಜಾರಿ ಬಗ್ಗೆೆ ಸಿಎಂ ಸಿದ್ದರಾಮಯ್ಯ ನೀಡಿದ ಭರವಸೆಯಂತೆ ಬಜೆಟ್ನಲ್ಲಿಯೇ ಘೋಷಣೆ ಮಾಡಿದರು. ಆದರೆ, ಕೆಲವೊಂದು ತಾಂತ್ರಿಿಕ ಕಾರಣದಿಂದ ವಿಳಂಬವಾಗುತ್ತಿಿದೆ. ವಾರ್ತಾ ಇಲಾಖೆ ವಿಧಿಸಿದ ನಿಯಮಗಳಿಂದ ತೊಂದರೆಯಾಗುತ್ತಿಿದೆ. ಅವುಗಳ ಬದಲಾವಣೆ ಮಾಡುವಂತೆ, ಆರೋಗ್ಯ ಸಂಜೀವಿನಿ ಯೋಜನೆಗೆ ಎಲ್ಲ ಪತ್ರಕರ್ತರಿಗೂ ವಿಸ್ತರಿಸುವಂತೆ ನಿರಂತರ ಒತ್ತಾಾಯ ಮಾಡಿಕೊಂಡೇ ಬರುತ್ತಿಿದ್ದೇವೆ. ಈ ಎರಡು ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.
ಈ ಬಾರಿ ಚುನಾವಣೆ ನಡೆಸಿ 54 ಲಕ್ಷ ರೂ. ಠೇವಣಿ ಹಣ ಸಂಗ್ರಹಗೊಂಡಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಒಮ್ಮೆೆ ಸೋತರೆ ಹತಾಶರಾಗದಿರಿ. ಗೆದ್ದವರು ಹಿಗ್ಗಬಾರದು, ಸೋತವರು ಕುಗ್ಗಬಾರದು. ಮತ್ತೊೊಮ್ಮೆೆ ಪ್ರಯತ್ನಿಿಸಿ ಎಂದು ಸಲಹೆ ನೀಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಳೆದ ಐದು ವರ್ಷದಲ್ಲಿ 21 ಲಕ್ಷ ಹಣ ಪತ್ರಕರ್ತರ ಸಂಕಷ್ಟದ ವೇಳೆ ನೀಡಿದ್ದೇವೆ. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾಾರ ಆರಂಭಿಸಿದ್ದೇವೆ. ವಾರ್ಷಿಕ ಪ್ರಶಸ್ತಿಿಗಳನ್ನು ಕೊಡ ಮಾಡುತ್ತಿಿದ್ದೇವೆ. ನಿವೃತ್ತಿಿಯಾದವರಿಗೆ ದತ್ತಿಿ ಪ್ರಶಸ್ತಿಿ ಮೊತ್ತ 32 ಲಕ್ಷ ಆಗಿದೆ ಎಂದರು. ಈ ಬಾರಿ ರಾಜ್ಯ ಸಮ್ಮೇಳನ ರಾಯಚೂರಿನಲ್ಲಿ ನಡೆಯಲಿದ್ದು, ಎಲ್ಲರೂ ಒಗ್ಗೂಡಿ ಮಾಡಬೇಕಿದೆ ಎಂದರು.
ಇದೇ ವೇಳೆ ಪತ್ರಕರ್ತ ಬಿ.ಎನ್.ನಂದಿಕೋಲಮಠ ಹೆಸರಿನಲ್ಲಿ ಅವರ ಸಹೋದರ ಶಿವಕುಮಾರ ನಂದಿಕೋಲ ಮಠ ಸಂಘಕ್ಕೆೆ 1 ಲಕ್ಷ ರೂ. ದತ್ತಿಿ ನಿಧಿ ದೇಣಿಗೆ ನೀಡಿದರು. ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯ ಸ್ವಾಾಮಿ ಕುಕನೂರು, ನಿಕಟಪೂರ್ವ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿಿ, ಉಪಾಧ್ಯಕ್ಷರಾದ ಸೂಗೂರೇಶ್ವರ ಎಸ್.ಗುಡಿ, ಮಹಾನಂದ ನಾಯಕ, ಅಶೋಕ ಬೆನ್ನೂರು, ಕಾರ್ಯದರ್ಶಿಗಳಾದ ಶರಣಯ್ಯ ಒಡೆಯರ, ರಾಘವೇಂದ್ರ ಗುಮಾಸ್ತೆೆ, ಖಜಾಂಚಿ ಮಲ್ಲಿಕಾರ್ಜುನಯ್ಯ ಪಾಲ್ಗೊೊಂಡಿದ್ದರು.
ವೃತ್ತಿಯ ಘನತೆ ಕಾಪಾಡಿ, ಬ್ಲಾಾಕ್ ಮೇಲ್ ಪತ್ರಕರ್ತರಿಗೆ ಕಡಿವಾಣ ಹಾಕಲು ಸಂಘ ಬದ್ಧ – ತಗಡೂರು

