ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ರಾಯಚೂರು ವಿಭಾಗೀಯ ಡಾಕ್ ಅದಾಲತ್ ರಾಯಚೂರು ವಿಭಾಗದ ಅಂಚೆ ಕಚೇರಿಗಳ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 31ರ ಬೆಳಗ್ಗೆೆ 11 ಗಂಟೆಗೆ ನಗರದ ಕನಕದಾಸ ವೃತ್ತದ ಬಳಿಯಲ್ಲಿರುವ ಅಂಚೆ ಕಚೇರಿಗಳ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ.
ಸಾರ್ವಜನಿಕರು ಅಂಚೆ ಸೇವೆಗಳ ಬಗ್ಗೆೆ ತಮ್ಮ ದೂರುಗಳನ್ನು ಡಿಸೆಂಬರ್30ರೊಳಗೆ, ಅಂಚೆ ಕಚೇರಿಗಳ ಅಧೀಕ್ಷಕರ ಕಾರ್ಯಾಲಯ, ರಾಯಚೂರು ವಿಭಾಗ-584102ಗೆ ಸಲ್ಲಿಸಬೇಕು ಎಂದು ಅಂಚೆ ಕಚೇರಿಯ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.

