ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.26:
ರಾಜ್ಯ ಸರ್ಕಾರ ದ್ವೇಷ ಭಾಷಣ ಪ್ರತಿಬಂಧಕ ಕಾಯಿದೆ ಜಾರಿಗೆ ತರುತ್ತಿಿರುವುದನ್ನು ನಾವು ಸ್ವಾಾಗತ ಮಾಡುತ್ತೇವೆ ಎಂದು ಟಿಪ್ಪುು ಸುಲ್ತಾಾನ್ ಮೊಮ್ಮಗ ಸೈಯದ್ ಮನ್ಸೂರ್ ಅಲಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಳ್ಳೆೆಯ ನಿರ್ಧಾರ ತೆಗೆದುಕೊಂಡಿದೆ. ಯಾವುದೇ ವ್ಯಕ್ತಿಿ ದೇಶದ ಬಗ್ಗೆೆ, ಯಾವುದೇ ಧರ್ಮದ ಬಗ್ಗೆೆ, ವ್ಯಕ್ತಿಿಯ ಬಗ್ಗೆೆ ಇಲ್ಲ ಸಲ್ಲದ ಮಾತನಾಡುವುದನ್ನು ನಿಲ್ಲುತ್ತದೆ ಎಂದರು.
ಟಿಪ್ಪುು ಸುಲ್ತಾಾನ್ ಬಗ್ಗೆೆ ಅವಹೇಳನಕಾರಿಯಾಗಿ ಮಾತಾಡುತ್ತಿಿದ್ದರು. ಈಗ ಹಲವರ ನಾಲಿಗೆಗೆ ಬಿಗ ಹಾಕಿದಂತಾಗಿದೆ ಎಂದ ಅವರು, ರಾಜ್ಯ ಸರ್ಕಾರ ಟಿಪ್ಪುು ಸುಲ್ತಾಾನ್ ಜಯಂತಿ ಮಾಡಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾಾದೇಶದಲ್ಲಿ ಹಿಂದುಗಳ ಮೇಲೆ ಹಲ್ಲೆ ವಿಚಾರಕ್ಕೆೆ ಪ್ರತಿಕ್ರಿಿಯಿಸಿ, ಬಾಂಗ್ಲಾಾದೇಶದಲ್ಲಿ ಹಿಂದುಗಳ ಮೇಲಿನ ಹಲ್ಲೆ ನೋವಿನ ವಿಚಾರವಾಗಿದೆ. ನಮ್ಮ ಹಿಂದೂಗಳಿಗೆ ರಕ್ಷಣೆ ಕೊಡಲಿಲ್ಲ ಅಂದರೆ ಪ್ರಧಾನಿ ಮೋದಿ ಇದರಲ್ಲಿ ಬರಬೇಕು. ಹಿಂದು ಸಮಾಜಕ್ಕೆೆ ರಕ್ಷಣೆ ಬೇಕಿದೆ.
ನಮ್ಮ ದೇಶದಲ್ಲಿರೋ ಬಾಂಗ್ಲಾಾದೇಶದವರಿಗೂ ಭಾರತ ರಕ್ಷಣೆ ನೀಡಿದೆ. ಹೀಗಾಗಿ ಬಾಂಗ್ಲಾಾದೇಶದಲ್ಲಿರೋ ಹಿಂದುಗಳಿಗೂ ರಕ್ಷಣೆ ಆಗಬೇಕಿದೆ.
ಭಾರತದಲ್ಲಿ ಬೇರೆ ಬೇರೆ ದೇಶದ ಜನರು ವಾಸಿಸುತ್ತಿಿದ್ದಾರೆ. ಆದರೆ, ಭಾರತ ಯಾರಿಗೂ ಕಷ್ಟ ಕೊಟ್ಟಿಿಲ್ಲ. ಬಾಂಗ್ಲಾಾದೇಶ ಹಿಂದುಗಳ ಜೋತೆಗೆ ನಾವಿದ್ದೀವಿ. ಅವರನ್ನು ರಕ್ಷಣೆ ಮಾಡಿ ಭಾರತಕ್ಕೆೆ ಕರೆ ತರಬೇಕಿದೆ ಎಂದು ಹೇಳಿದರು.

