ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ರಾಯಚೂರು ನಗರದ ಕರ್ನಾಟಕ ಸಂಘದಲ್ಲಿ ಡಿ.28ರಂದು ಬೆಳಿಗ್ಗೆೆ 10.30ಕ್ಕೆೆ ಪಿ.ವೆಂಕಟೇಶ ಬಾಗಲವಾಡ ರಚಿಸಿದ ಹಾಸ್ಯ ಬರಹಗಳ ಸಂಕಲನ ನಿಮಗೆ ತಿಳಿಯುವುದಿಲ್ಲ ಬಿಡ್ರಿಿ ಕೃತಿ ಬಿಡುಗಡೆ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಕಾರ್ಯಕ್ರಮ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಉದ್ಘಾಾಟಿಸಲಿದ್ದು ಕೃತಿಯನ್ನು ಸಾಹಿತಿ ಡಾ.ವಿ.ಲಕ್ಷ್ಮೀಕಾಂತ ವಿ ಮೊಹರೀರ ಬಿಡುಗಡೆ ಮಾಡಲಿದ್ದು ಅಧ್ಯಕ್ಷತೆಯನ್ನು ಸಾಹಿತಿ ಡಾ.ಜಯಲಕ್ಷ್ಮೀ ಮಂಗಳಮೂರ್ತಿ ವಹಿಸಲಿದ್ದಾಾರೆ ಕೃತಿ ಕುರಿತು ಸಾಹಿತಿ ಪ್ರಸನ್ನ ಮಂಡಲಗಿರಿ ಮಾತನಾಡಲಿದ್ದಾಾರೆ ಎಂದರು.
32 ನೈಜ ಘಟನೆಗಳನ್ನಾಾಧರಿಸಿ ಹಾಸ್ಯ ಬರಹಗಳು ಈ ಕೃತಿಯಲ್ಲಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಬ್ರಾಾಹ್ಮಣ ಮಹಾಸಭಾ ಅಧ್ಯಕ್ಷ ರಮೇಶ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಕೃತಿಕಾರ ಪಿ.ವೆಂಕಟೇಶ ಬಾಗಲವಾಡ, ಗುರುರಾಜ್, ವೀರೇಶ ಇದ್ದರು.

