ಸುದ್ದಿಮೂಲ ವಾರ್ತೆ ಮಸ್ಕಿ, ಡಿ.26:
ತಾಲೂಕಿನ ಕೊಳಬಾಳ, ಗುಡದೂರು ಗ್ರಾಾಮ ಪಂಚಾಯತಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅವರು ಶುಕ್ರವಾರ ಭೇಟಿ ನೀಡಿ, ವಿವಿಧ ಕಡತಗಳ ಪರಿಶೀಲಿಸಿದರು.
ಕೊಳಬಾಳ ಗ್ರಾಾಪಂಯ ಹಂಚಿನಾಳ ಕ್ಯಾಾಂಪ್ನ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ, ನೀರು ಸಂಗ್ರಹಣೆ ಪ್ರಮಾಣ, ಕೆರೆಯಿಂದ ಎಷ್ಟು ಹಳ್ಳಿಿಗಳಿಗೆ ನೀರು ಪೂರೈಕೆಯಾಗುತ್ತದೆ ಎಂಬುದರ ಕುರಿತು ಮಾಹಿತಿ ಪಡೆದರು.
ತುಂಗಭದ್ರಾಾ ಎಡದಂಡೆ ನಾಲೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವುದರಿಂದ ತಾಲೂಕಿನ ಎಲ್ಲಾ ಕೆರೆಗಳನ್ನು ಭರ್ತಿ ಮಾಡಬೇಕು.ಬೇಸಿಗೆಯಲ್ಲಿ ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚಿಸಿದಲ್ಲದೆ ಇನ್ನೂ ಹಲವು ಪರಿಶೀಲನಾ ಕಾರ್ಯದಲ್ಲಿ ಪಾಲ್ಗೊೊಂಡರು.
ಗುಡದೂರು ಗ್ರಾಾಪಂ ಹತ್ತಿಿರದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಗೆ ಭೇಟಿ ನೀಡಿ, ನಿರ್ಮಾಣ ಹಂತದಲ್ಲಿರುವ ಶಾಲಾ ಕೊಠಡಿ ವೀಕ್ಷಿಸಿದರು. ಅಂದಾಜು ಪತ್ರಿಿಕೆಯಂತೆ ಕಟ್ಟಡ ನಿರ್ಮಾಣ ಕೈಗೊಂಡು, ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಹಸ್ತಾಾಂತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತರಗತಿಗಳಿಗೆ ತೆರಳಿ, ವಿದ್ಯಾಾರ್ಥಿಗಳೊಂದಿಗೆ ಬೆರೆತರು. ನರೇಗಾದಡಿ ಕೈಗೊಂಡ ಶಾಲಾ ಕಂಪೌಂಡ್, ಹೈಟೆಕ್ ಶೌಚಾಲಯ, ಅಡುಗೆ ಕೋಣೆ ವೀಕ್ಷಿಸಿದರು.
ಈ ವೇಳೆ ಕೊಳಬಾಳ ಗ್ರಾಾಪಂ ಅಧ್ಯಕ್ಷರಾದ ರಾಜೇಶ್, ಮಸ್ಕಿಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ್, ಸಹಾಯಕ ನಿರ್ದೇಶಕರಾದ (ಗ್ರಾಾ.ಉ) ಶಿವಾನಂದರಡ್ಡಿಿ, ಕೊಳಬಾಳ ಗ್ರಾಾಪಂ ಅಭಿವೃದ್ಧಿಿ ಅಧಿಕಾರಿ ಶಾಂತಪ್ಪ, ಗುಡದೂರು ಗ್ರಾಾಪಂ ಅಭಿವೃದ್ಧಿಿ ಅಧಿಕಾರಿಗಳಾದ ಕೃಷ್ಣ ಹುನಗುಂದ, ರಾಷ್ಟ್ರೀಯ ಗ್ರಾಾಮೀಣ ಜೀವನೋಪಾಯ ಯೋಜನೆಯ ವಲಯ ಮೇಲ್ವಿಿಚಾರಕ ಪ್ರಕಾಶ್, ತಾಪಂ ಸಿಬ್ಬಂದಿ ಇದ್ದರು.
‘ಬೇಸಿಗೆ ಕುಡಿಯುವ ನೀರು ಸಮರ್ಪಕ ಪೂರೈಸಿ’

