ಸುದ್ದಿಮೂಲ ವಾರ್ತೆ ಮೈಸೂರು, ಡಿ.27:
ಯಾರಿಗೆ ಯಾರುಂಟು.. ಎರವಿನ ಸಂಸಾರ ನೀರ ಮೇಲನ ಗುಳ್ಳೆೆ ನಿಜವಲ್ಲವೋ ಪ್ರಭುವೇ..
ಇದು ಅಕ್ಷರಶಃ ಸತ್ಯ. ಏಕೆಂದರೆ, ಮೈಸೂರು ಕಾರಾಗೃಹದಲ್ಲಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾದ ಮಹಿಳೆಯನ್ನು ಕರೆದುಕೊಂಡು ಹೋಗಲು ಯಾರೂ ಬಾರದ ಕಾರಣ ಆಕೆಯನ್ನು ಮಹಿಳಾ ಶಕ್ತಿಿ ಸದನಕ್ಕೆೆ ಸೇರಿಸಿರುವ ಅಮಾನವೀಯ ಘಟನೆ ನಡೆದಿದೆ.
ಇದೇ ವೇಳೆ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ, ಆ ಮಹಿಳೆಯನ್ನು ಹಾಸನದ ಶಕ್ತಿಿ ಸದನಕ್ಕೆೆ ಸೇರಿಸಿ ರಕ್ಷಣೆ ಮಾಡುವ ಮಾನವೀಯತೆ ಮೆರೆದಿದ್ದಾರೆ.
ಘಟನೆ ಏನು?
ಮೈಸೂರು ಕೇಂದ್ರ ಕಾರಾಗೃಹದ ಮಹಿಳಾ ಶಿಕ್ಷಾ ಬಂದಿ ಸಂಖ್ಯೆೆ: 19451-ಶಾಂತಮ್ಮ ಗಂಡ ಮಂಜಪ್ಪ ಹಾಸನದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಾಯಾಲಯ (ಪ್ರಕರಣ ಸಂಖ್ಯೆೆ:ಎಸ್.ಸಿ.ನಂ:224/2015 ಬಾಣಾವರ ಪೊಲೀಸ್ ಠಾಣೆ ಸಿ.ಆರ್.ನಂ:161/2015) ಕಲಂ: 302 ಭಾ.ದಂ.ಸಂ ಅಡಿಯಲ್ಲಿ 2016, ನವೆಂಬರ್ 5 ರಂದು ಜೀವಾವಧಿ ಶಿಕ್ಷೆ ಮತ್ತು 20 ಸಾವಿರ-ರೂ.ಗಳ ಕಟ್ಟುವಂತೆ ಶಿಕ್ಷೆ ವಿಧಿಸಿತ್ತು.
ಅದರಂತೆ ಸದರಿ ಬಂದಿಯು ಮೈಸೂರು ಕಾರಾಗೃಹಕ್ಕೆೆ ದಾಖಲಾಗಿ ಶಿಕ್ಷೆ ಅನುಭವಿಸುತ್ತಿಿದ್ದರು. ಕರ್ನಾಟಕ ಸರ್ಕಾರದ ಆದೇಶದಂತೆ, ಈ ಮಹಿಳೆಯನ್ನು 2025, ಡಿ. 9 ರಂದು ಮೈಸೂರು ಕಾರಾಗೃಹದಿಂದ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು.
ಆದರೆ, ಈ ಮಹಿಳೆ ಜೈಲಿನಿಂದ ಬಿಡುಗಡೆಯಾದರೂ ಆಕೆಯನ್ನು ಮನೆಗೆ ಕರೆದೊಯ್ಯಲು ಯಾರೂ ರಕ್ತಸಂಬಂಧಿಕರು ಬರಲೇ ಇಲ್ಲ. ಹೀಗಾಗಿ ಯಾರೂ ಸಂಬಂಧಿಕರು, ಸ್ನೇಹಿತರು ಬಾರದ ಕಾರಣ ಬಾಣಾವರದ ಪೋಲೀಸ್ ಠಾಣಾಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿಿ ಅಧಿಕಾರಿ ಮಹಿಳೆಯ ರಕ್ಷಣೆಯ ಜವಾಬ್ದಾಾರಿ ವಹಿಸಿಕೊಂಡಿದ್ದಾರೆ. ಕೂಡಲೇ ಇದನ್ನು ಅವರ ಮೇಲಾಧಿಕಾರಿಗಳ ಗಮನಕ್ಕೆೆ ತಂದಿದ್ದಾರೆ.
ನಂತರ ಮಹಿಳೆಯನ್ನು ಕೇಂದ್ರ ಕಾರಾಗೃಹದ ಮಹಿಳಾ ಅಧಿಕಾರಿ ಮತ್ತುಸಿಬ್ಬಂದಿಗಳ ಬೆಂಗಾವಲಿನಲ್ಲಿ ಹಾಸನ ಶಕ್ತಿಿ ಸದನ ಕೇಂದ್ರಕ್ಕೆೆ ದಾಖಲು ಮಾಡಿದ್ದಾರೆ. ಆಗಿಂದಾಗ್ಗೆೆ ಹಾಸನ ಕಾರಾಗೃಹದ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ ಶಾಂತಮ್ಮರವರ ಆರೋಗ್ಯ ವಿಚಾರಿಸುತ್ತಾಾರೆ ಎಂದು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ.ಶೇಷುಮೂರ್ತಿ ತಿಳಿಸಿದ್ದಾರೆ.
ಅಭಿನಂದನೆ
ಮಹಿಳೆಗೆ ಪುನರ್ವಸತಿಗೆ ಕ್ರಮ ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಮಹಾ ನಿರ್ದೇಶಕ ಅಲೋಕ್ ಕುರ್ಮಾ ಅವರು ಶ್ಲಾಾಘಿಸಿ, 10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

