ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.27:
ಸ್ಥಳೀಯ ಸಂಸ್ಥೆೆಗಳಲ್ಲಿ ಜೆಡಿಎಸ್ ಜತೆ ಮೈತ್ರಿಿ ಮಾಡಿಕೊಳ್ಳುವ ಸಂಬಂಧ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನಕ್ಕೆೆ ನಾವೆಲ್ಲಾ ಬದ್ಧ ಎಂದು ಬಿಜೆಪಿ ರಾಜ್ಯಾಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬೆಂಗಳೂರಿನಲ್ಲಿಂದು ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆೆಗಳ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿಿ ಇಲ್ಲ ಎಂದು ನಾವ್ಯಾಾರು ಎಲ್ಲೂ ಹೇಳಿಲ್ಲ. ಅಂತಿಮವಾಗಿ ನಮ್ಮ ವರಿಷ್ಠರು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಾಮಿಯವರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾಾರೆ. ಆ ತೀರ್ಮಾನಕ್ಕೆೆ ನಾವು ಬದ್ಧರಾಗಿರುತ್ತೇವೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆೆ ನಮಗೆ ಗೌರವ ಇದೆ. ಅವರು ಮುತ್ಸದ್ಧಿಿಗಳು. ಸ್ಥಳೀಯ ಸಂಸ್ಥೆೆಗಳಲ್ಲಿ ಬಿಜೆಪಿ ಜತೆ ಮೈತ್ರಿಿ ಇಲ್ಲ ಎಂಬ ದೇವೇಗೌಡರ ಹೇಳಿಕೆಯನ್ನು ತಪ್ಪಾಾಗಿ ಅರ್ಥೈಸುವ ಅಗತ್ಯವಿಲ್ಲ. ವರಿಷ್ಠರು ಈ ಗೊಂದಲಗಳನ್ನು ಪರಿಹರಿಸುತ್ತಾಾರೆ. ವರಿಷ್ಠರು ಏನು ಹೇಳುತ್ತಾಾರೋ ಅದನ್ನು ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮೊನ್ನೆೆ ನಡೆದ ಕೆಲ ಸ್ಥಳೀಯ ಸಂಸ್ಥೆೆಗಳ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ. ಕಾರ್ಯಕರ್ತರ ಆಕಾಂಕ್ಷೆಯಂತೆ ಅಧ್ಯಕ್ಷನಾಗಿ ನಾನು ಮಾತನಾಡುವುದು ನನ್ನ ಕರ್ತವ್ಯ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆೆ ಬರಬೇಕು. ಆ ಮೂಲಕ ಮೋದಿಯವರ ಕೈ ಬಲಪಡಿಸಬೇಕು ಎಂಬುದು ನಮ್ಮ ಮತ್ತು ಜೆಡಿಎಸ್ ನಾಯಕರ ಅಪೇಕ್ಷೆಯಾಗಿದೆ ಎಂದು ಅವರು ಹೇಳಿದರು.
ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿರುವುದಕ್ಕೆೆ ಕಾಂಗ್ರೆೆಸ್ನವರು ಪ್ರಧಾನಿ ಮೋದಿಯವರನ್ನು ಟೀಕೆ ಮಾಡುತ್ತಿಿರುವುದು ಸರಿಯಲ್ಲ. ಮಹಾತ್ಮಗಾಂಧಿ ಬಗ್ಗೆೆ ಕಾಂಗ್ರೆೆಸ್ ಪಕ್ಷ ಮೊಸಳೆ ಕಣ್ಣೀರು ಹಾಕುತ್ತಿಿದೆ. ಮಹಾತ್ಮಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಅಂಬೇಡ್ಕರ್ರವರ ಸ್ಮಾಾರಕ ನಿರ್ಮಾಣ ಮಾಡಿರುವುದು ಎನ್ಡಿಎ, ಕಾಂಗ್ರೆೆಸ್ ಅಲ್ಲ. ಗಾಂಧೀಜಿಯವರ ಸಬರಮತಿ ಆಶ್ರಮವನ್ನು ಅಭಿವೃದ್ಧಿಿ ಮಾಡಿದ್ದು ಎನ್ಡಿಿಎ ಎಂದರು.
ಪ್ರಧಾನಿ ಮೋದಿಯವರು ಹಿಂದುಳಿದ ವರ್ಗಕ್ಕೆೆ ಸೇರಿದ್ದಾರೆ. ಆದರೂ ಅವರನ್ನು ಕಾಂಗ್ರೆೆಸ್ ಪಕ್ಷ ಸಹಿಸುತ್ತಿಿಲ್ಲ. ಮುಖ್ಯಮಂತ್ರಿಿ ಸಿದ್ದರಾಮಯ್ಯನವರೇ ಹೆಚ್ಚು ಟೀಕೆ ಮಾಡುತ್ತಿಿದ್ದಾರೆ. ಕಾಂಗ್ರೆೆಸ್ನವರಿಗೆ ಮೋದಿಯವರ ಜನಪ್ರಿಿಯತೆ ಸಹಿಸಲು ಆಗುತ್ತಿಿಲ್ಲ. ಹಾಗಾಗಿ ವೃತಾ ಆರೋಪಗಳನ್ನು ಮಾಡುತ್ತಿಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆೆಸ್ ಪಕ್ಷದವರಿಗೆ ಗಾಂಧೀಜಿಯವರ ಬಗ್ಗೆೆ ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ಹೇಳಿದರು.
ರಾಜ್ಯದ ಕಾಂಗ್ರೆೆಸ್ ಸರ್ಕಾರದಲ್ಲಿ ಭ್ರಷ್ಟಾಾಚಾರ ಮಿತಿ ಮೀರಿದೆ. ವಸತಿ ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ರಾಜ್ ಖಾನ್ ರವರ ಮನೆ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಅವರ ಮನೆಯಲ್ಲಿ 14 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಇಷ್ಟಾಾದರೂ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆೆ ಮೃದು ಧೋರಣೆ ಅನುಸರಿಸುತ್ತಿಿದೆ. ಮುಖ್ಯಮಂತ್ರಿಿ ಸಿದ್ದರಾಮಯ್ಯ ಜನರಿಗೆ ಉತ್ತರ ನೀಡಬೇಕು ಎಂದು ಒತ್ತಾಾಯಿಸಿದರು.
ಕಾಂಗ್ರೆೆಸ್ ಸರ್ಕಾರ ಯಾವುದೇ ಟೀಕೆ ಸಹಿಸಲ್ಲ. ಇದೊಂದು ಅಸಹಿಷ್ಣು ಸರ್ಕಾರ. ರಾಜ್ಯದಲ್ಲಿ ದ್ವೇಷ ಭಾಷಣ ಮಸೂದೆ ತಂದಿದೆ. ಈ ಮಸೂದೆ ಮೂಲಕ ಪ್ರಜಾಪ್ರಭುತ್ವದ ಕಗ್ಗೊೊಲೆಗೆ ಮುಂದಾಗಿದೆ ಎಂದು ಟೀಕಿಸಿ, ದ್ವೇಷ ಭಾಷಣ ಮಸೂದೆ ಪ್ರಜಾಪ್ರಭುತ್ವ ವಿರೋಧಿ ಎಂದರು.
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆೆಗಳ ಬಗ್ಗೆೆ ಸುದೀರ್ಘ ಚರ್ಚೆಯಾಯಿತು. ಆದರೆ ಸರ್ಕಾರ ಸರಿಯಾದ ಸ್ಪಂದನೆ ವ್ಯಕ್ತ ಮಾಡಲಿಲ್ಲ. ನೀರಾವರಿ ಸಮಸ್ಯೆೆ, ಕಾನೂನು ಸುವ್ಯವಸ್ಥೆೆ, ಉತ್ತರ ಕರ್ನಾಟಕದ ಸಮಸ್ಯೆೆಗಳಿಗೆ ಸಮರ್ಪಕ ಉತ್ತರ ಕೊಡಲಿಲ್ಲ ಎಂದು ಅವರು ದೂರಿದರು.
ಅಧಿವೇಶನದ ಸಂದರ್ಭದಲ್ಲಿ ಸಚಿವರುಗಳು, ಡಿನ್ನರ್, ಬ್ರೇೇಕ್ ಾಸ್ಟ್ ಮೀಟಿಂಗ್ನಲ್ಲೇ ಕಾಲ ಹರಣ ಮಾಡಿದರು. ಯಾವುದೇ ಜ್ವಲಂತ ಸಮಸ್ಯೆೆಗಳಿಗೆ ಉತ್ತರ ಕೊಡಲಿಲ್ಲ. ಅಧಿವೇಶನ ಸಂದರ್ಭದಲ್ಲೂ ಕುರ್ಚಿ ಕಚ್ಚಾಾಟ ಮುಂದುವರೆಸಿದರು. ಯಾವ ಪುರುಷಾರ್ಥಕ್ಕೆೆ ಅಧಿವೇಶನ ನಡೆಸಿದರು ಎಂದು ಹರಿಹಾಯ್ದರು.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿ ಹಿಂದೂಗಳ ಭಾವನೆಗೆ ಧಕ್ಕೆೆ ತರುವ ಕೆಲಸ ನಡೆಯಿತು. ರಾಜ್ಯ ಸರ್ಕಾರದ ಬೇಜವಾಬ್ದಾಾರಿ ಬಗ್ಗೆೆ ನಾವು ಧರ್ಮಸ್ಥಳ ಚಲೋ ನಡೆಸಿದೆವು. ಇಷ್ಟೆೆಲ್ಲಾ ಆದರೂ ಮುಖ್ಯಮಂತ್ರಿಿಗಳು ಕ್ಷಮೆ ಕೇಳಲಿಲ್ಲ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರದ ಹಿಂದಿನ ಕೈಗಳ ಹೆಸರುಗಳನ್ನು ಸರ್ಕಾರ ಬಹಿರಂಗ ಮಾಡಿಲ್ಲ ಎಂದು ಟೀಕಿಸಿದರು.
ಈ ಸರ್ಕಾರದಲ್ಲಿ ಬಂಡವಾಳ ಹೂಡಿಕೆ ಸ್ನೇಹಿ ನೀತಿಗಳಿಲ್ಲ. ಹಾಗಾಗಿ ದೊಡ್ಡ ದೊಡ್ಡ ಉದ್ಯಮಗಳು ಹೊರ ರಾಜ್ಯಕ್ಕೆೆ ಹೋಗುತ್ತಿಿವೆ. ಟಯೊಟಾ. ಾಕ್ಸಕಾನ್ ನಮ್ಮ ಕೈ ತಪ್ಪಿಿದೆ ಎಂದು ದೂರಿದರು.
ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಂ. ಕೃಷ್ಣಪ್ಪ, ಕೆ. ಗೋಪಾಲಯ್ಯ, ರಾಜ್ಯ ಮುಖ್ಯ ವಕ್ತಾಾರ ಅಶ್ವತ್ಥನಾರಾಯಣ ಉಪಸ್ಥಿಿತರಿದ್ದರು.
ದೇವೇಗೌಡರ ಹೇಳಿಕೆ ತಪ್ಪಾಾಗಿ ಅರ್ಥೈಸುವ ಅಗತ್ಯವಿಲ್ಲ ಜೆಡಿಎಸ್ ಜೊತೆ ಮೈತ್ರಿಿ ; ಹೈಕಮಾಂಡ್ ನಿರ್ಧಾರ – ವಿಜಯೇಂದ್ರ

