ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.27:
ಕಾಂಗ್ರೆೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊೊಳ್ಳಲು ನವದೆಹಲಿಗೆ ತೆರಳಿದ್ದ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ನಾಯಕರ ಪ್ರತ್ಯೇಕ ಭೇಟಿ ಸಾಧ್ಯವಾಗಿಲ್ಲ. ಆದರೆ, ಸಿದ್ದರಾಮಯ್ಯನವರ ಕುರ್ಚಿಗೆ ಸದ್ಯ ಯಾವುದೇ ಕಂಟಕ ಇಲ್ಲ ಎಂಬ ಸಂದೇಶವನ್ನು ಹೈಕಮಾಂಡ್ ಪರೋಕ್ಷವಾಗಿ ರವಾನಿಸಿದಂತಿದೆ.
ನವದೆಹಲಿಯಲ್ಲಿ ಶನಿವಾರ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊೊಳ್ಳಲು ಶುಕ್ರವಾರ ಸಂಜೆಯೇ ಸಿಎಂ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ನವದೆಹಲಿಗೆ ತೆರಳಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅವರು ರಾಹುಲ್ಗಾಂಧಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಬಯಸಿದ್ದರೂ ಸಹ ಅದು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಸಿಡಬ್ಲ್ಯೂಸಿ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಕರ್ನಾಟಕದ ಬೆಳವಣಿಗೆಗಳನ್ನು ವೇಣುಗೋಪಾಲ್ ಅವರಿಗೆ ವಿವರಿಸಿರುವ ಸಿಎಂ ಎಲ್ಲ ಗೊಂದಲಗಳಿಗೂ ಇತಿಶ್ರೀ ಹಾಡುವುದರ ಜೊತೆಗೆ ಸಂಪುಟ ಪುನಾರಚನೆಗೆ ಅವಕಾಶ ನೀಡುವಂತೆ ರಾಹುಲ್ಗಾಂಧಿ ಅವರ ಗಮನಕ್ಕೆೆ ತರಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಕೆ.ಸಿ. ವೇಣುಗೋಪಾಲ್, ‘ರಾಹುಲ್ಗಾಂಧಿ ಅವರು ಮತ್ತೆೆ ವಿದೇಶಕ್ಕೆೆ ತೆರಳಲಿದ್ದಾರೆ. ಜ.9ರಂದು ಅವರು ಭಾರತಕ್ಕೆೆ ಮರಳಲಿದ್ದು, ತದನಂತರದಲ್ಲಿ ನೀವು ಇನ್ನೊೊಮ್ಮೆೆ ದೆಹಲಿಗೆ ಬಂದಲ್ಲಿ ಅವರೊಂದಿಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆೆ ಚರ್ಚಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಮೂಲಕ ಸಿಡಬ್ಲ್ಯೂಸಿ ಸಭೆಯಲ್ಲಿ ಕರ್ನಾಟಕದ ಅಧಿಕಾರ ಹಂಚಿಕೆಯ ಬಿಕ್ಕಟ್ಟಿಿಗೆ ಮದ್ದು ಅರೆಯಲಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಅಧಿಕಾರದ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆೆ ನಿರಾಸೆ ಮೂಡಿಸಿದೆ.
ಮೂಲಗಳ ಪ್ರಕಾರ ಸಂಕ್ರಾಾಂತಿ ಕಳೆಯುವವರೆಗೂ ಹೈಕಮಾಂಡ್ ನಾಯಕರ ಭೇಟಿ ಸಾಧ್ಯ ಆಗುವುದಿಲ್ಲ. ಹೀಗಾಗಿ ಅಧಿಕಾರ ಹಂಚಿಕೆಯಾಗಬೇಕು ಎಂದು ಬೇಡಿಕೆ ಇಡುವವರು ಬಹುತೇಕ ಇನ್ನೊೊಂದು ತಿಂಗಳು ಕಾಯಬೇಕಾಗಬಹುದು ಎಂದು ಹೇಳಲಾಗುತ್ತಿಿದೆ.
ರಾಹುಲ್ಗಾಂಧಿ ವಿದೇಶದಿಂದ ಮರಳಿದ ಬಳಿಕ ಭೇಟಿಗೆ ಅವಕಾಶ: ಸಿಎಂಗೆ ವೇಣುಗೋಪಾಲ್ ಭರವಸೆ ಸಿಡಬ್ಲ್ಯೂಸಿ ಸಭೆಯಲ್ಲಿ ಪ್ರಸ್ತಾಪವಾಗದ ಕರ್ನಾಟಕದ ರಾಜಕೀಯ

