ಸುದ್ದಿಮೂಲ ವಾರ್ತೆ ನವದೆಹಲಿ, ಡಿ.27:
ಮಹಾತ್ಮಾಗಾಂಧಿ ನರೇಗಾ ಯೋಜನೆಯ ಹೆಸರು ಬದಲಾವಣೆ ಮಾಡಿ ಗಾಂಧೀಜಿ ಹೆಸರು ಕೈಬಿಟ್ಟಿಿರುವುದರ ವಿರುದ್ಧ ಜ.5ರಿಂದ ದೇಶಾದ್ಯಂತ ಜನಾಂದೋಲನ ಕೈಗೊಳ್ಳುವುದು ಮತ್ತು 2026ರಲ್ಲಿ ನಡೆಯುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕಾರ್ಯತಂತ್ರಗಳು ಮತ್ತು ಮತಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿಿರುವ ಮತಗಳ್ಳತನದ ಬಗ್ಗೆೆ ಜಾಗೃತಿ ಮೂಡಿಸುವ ಬಗ್ಗೆೆ ಇಂದು ನಡೆದ ಕಾಂಗ್ರೆೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ನವದೆಹಲಿಯಲ್ಲಿ ಶನಿವಾರ ನಡೆದ ಅಖಿಲ ಭಾರತ ಕಾಂಗ್ರೆೆಸ್ ಕಾರ್ಯಕಾರಿಣಿ ಸಭೆ ಹಲವು ವಿಷಯಗಳ ಬಗ್ಗೆೆ ವಿಸ್ತೃತ ಚರ್ಚೆ ನಡೆಸಿ ತೀವ್ರ ಹೋರಾಟ ರೂಪಿಸುವ ನಿರ್ಣಯ ಕೈಗೊಂಡಿದೆ.
ಸಿಡಬ್ಲ್ಯೂಸಿ ಸಭೆಯಲ್ಲಿ ಕಾಂಗ್ರೆೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಶಶಿ ತರೂರ್, ಕರ್ನಾಟಕದ ಮುಖ್ಯಮಂತ್ರಿಿ ಸಿದ್ದರಾಮಯ್ಯಘಿ, ತೆಲಂಗಾಣ ಮುಖ್ಯಮಂತ್ರಿಿ ರೇವಂತ್ರೆಡ್ಡಿಿ ಹಿಮಾಚಲಪ್ರದೇಶ ಸಿಎಂ ಸುಖ್ವಿಿಂದರ್ ಸಿಂಗ್ ಸುಖು ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.
ಮುಂದಿನ ವರ್ಷ ನಡೆಯಲಿರುವ ಅಸ್ಸಾಾಂ, ಕೇರಳ, ಪಶ್ಚಿಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಪಕ್ಷದ ತಯಾರಿ ಮತ್ತು ಚುನಾವಣಾ ಕಾರ್ಯತಂತ್ರ ಬಗ್ಗೆೆ ಚರ್ಚಿಸಲಾಗಿದೆ.
ಎಂಜಿ ನರೇಗಾ ಹೆಸರನ್ನು ವಿಕಸಿತ ಭಾರತ್-ಗ್ಯಾಾರಂಟಿ ಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಾಮೀಣ) ಕಾಯ್ದೆೆ (ವಿಬಿ-ಜಿ ರಾಮ್ ಜಿ) ಎಂದು ಹೆಸರು ಬದಲಾಯಿಸುವುದು ಈ ಸಭೆಯ ಚರ್ಚೆಯ ಪ್ರಮುಖ ಕೇಂದ್ರಬಿಂದುವಾಗಿತ್ತು. ಇದನ್ನು ಪ್ರತಿಭಟಿಸಿ ಜ.5ರಿಂದ ದೇಶಾದ್ಯಂತ ಹೋರಾಟ ರೂಪಿಸುವ ಬಗ್ಗೆೆ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಾರ್ವಜನಿಕರ ಕೋಪ ಹೆಚ್ಚುತ್ತಿಿದೆ:
ಸಿಡಬ್ಲ್ಯೂಸಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಂಜಿ ನರೇಗಾ ಹೆಸರು ಬದಲಾವಣೆ ಬಗ್ಗೆೆ ಸಾರ್ವಜನಿಕರ ಕೋಪ ಹೆಚ್ಚುತ್ತಿಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಕೇಂದ್ರ ಸರ್ಕಾರ ಎದುರಿಸಬೇಕಾಗುತ್ತದೆ. ಹೊಸ ಕಾನೂನನ್ನು ಸಮಾಲೋಚನೆಯಿಲ್ಲದೆ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರ ಎಂದು ಟೀಕಿಸಿದರಲ್ಲದೆ, ಈ ಯೋಜನೆಗೆ ಈಗ ಕೇಂದ್ರ ಮತ್ತು ರಾಜ್ಯಗಳು ಜಂಟಿಯಾಗಿ 60:40 ಅನುಪಾತದಲ್ಲಿ ಹಣವನ್ನು ನೀಡಬೇಕಾಗಿರುವುದರಿಂದ ಇದು ರಾಜ್ಯಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೇರುತ್ತದೆ ಎಂದು ಅವರು ಹೇಳಿದರು.
ಇಂದಿನ ಸಭೆಯಲ್ಲಿ ಜನವರಿ 5 ರಿಂದ ಎಂಜಿ ನರೇಗಾ ಬಚಾವೋ ಅಭಿಯಾನ ್ನ ಪ್ರಾಾರಂಭಿಸಲು ನಾವು ನಿರ್ಣಯವನ್ನು ಅಂಗೀಕರಿಸಿದ್ದೇವೆ. ಮಹಾತ್ಮಾಾಗಾಂಧೀಜಿ ಹೆಸರು ಬದಲಾವಣೆ ಮತ್ತು ಕೇಂದ್ರ ಸರ್ಕಾರದ ಅನುದಾನ ಕಡಿತದ ವಿರುದ್ಧ ಕಾಂಗ್ರೆೆಸ್ ರಾಷ್ಟ್ರವ್ಯಾಾಪಿ ಪ್ರತಿಭಟನೆಯನ್ನು ಪ್ರಾಾರಂಭಿಸಲಿದೆ ಎಂದು ಖರ್ಗೆ ಘೋಷಿಸಿದರು.
ಉದ್ಯೋೋಗ ಖಾತರಿ ಕಾರ್ಯಕ್ರಮದಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಅಳಿಸಿಹಾಕುವ ಮತ್ತು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ವಿರೋಧಿಸಲು ಪಕ್ಷವು ಸಾಮೂಹಿಕವಾಗಿ ಪ್ರಮಾಣವಚನ ಸ್ವೀಕರಿಸಿದೆ. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಪ್ರತಿ ಹಳ್ಳಿಿಯಲ್ಲಿ ನಮ್ಮ ಧ್ವನಿಯನ್ನು ಎತ್ತಲು ಪ್ರತಿಜ್ಞೆ ಮಾಡುತ್ತೇವೆ ಎಂದು ಖರ್ಗೆ ಹೇಳಿದರು.
‘ಎಂಜಿ ನರೇಗಾ ಯೋಜನೆಯನ್ನು ಯಥಾವತ್ತಾಾಗಿ ಮರಳಿ ಸ್ಥಾಾಪಿಸಬೇಕಿದೆ ಎಂಬುದು ರಾಹುಲ್ಗಾಾಂಧಿ ಅವರ ಕಳಕಳಿಯಾಗಿದೆ. ಸಭೆಯಲ್ಲಿಯೂ ಅವರು ತಮ್ಮ ಇದೇ ಅಭಿಪ್ರಾಾಯವನ್ನು ವ್ಯಕ್ತಪಡಿಸಿದ್ದಾರೆ. ಎಂಜಿ ನರೇಗಾ ಕುರಿತು ನಿರ್ದಿಷ್ಟ ಯೋಜನೆಗಳನ್ನು ರೂಪಿಸುವುದು ಮತ್ತು ರಾಷ್ಟ್ರವ್ಯಾಾಪಿ ಸಾರ್ವಜನಿಕ ಅಭಿಯಾನ ಪ್ರಾಾರಂಭಿಸುವುದು ನಮ್ಮ ಸಾಮೂಹಿಕ ಜವಾಬ್ದಾಾರಿಯಾಗಿದೆ ಎಂದು ಖರ್ಗೆ ಹೇಳಿದರು.
ಹಲವು ರಾಜ್ಯಗಳು ಮತ್ತು ಕೇಂದ್ರಾಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿಿರುವ ಮತದಾರರ ಪಟ್ಟಿಿಗಳ ವಿಶೇಷ ತೀವ್ರ ಪರಿಷ್ಕರಣೆ ಬಗ್ಗೆೆ ಸಿಡಬ್ಲ್ಯೂಸಿ ಸಭೆಯಲ್ಲಿ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದು ಕೇಂದ್ರ ಸರ್ಕಾರ ನಡೆಸುತ್ತಿಿರುವ ಪಿತೂರಿಯಾಗಿದ್ದು, ಅದನ್ನು ಚುನಾವಣಾ ಆಯೋಗದ ಮೂಲಕ ಜಾರಿ ಮಾಡಲು ಹೊರಟಿದೆ. ಪ್ರಜಾಪ್ರಭುತ್ವ ಹಕ್ಕುಗಳನ್ನು ನಿರ್ಬಂಧಿಸುವ ಪ್ರಯತ್ನ ಮಾಡಲಾಗಿದೆ. ಇದರ ವಿರುದ್ಧವೂ ಹೋರಾಟ ಮುಂದುವರಿಯುತ್ತದೆ ಎಂದರು.
ಎಸ್ಐಆರ್ ಗಂಭೀರ ಮತ್ತು ಕಳವಳವಳಕಾರಿ ವಿಚಾರವಾಗಿದೆ. ರಾಹುಲ್ ಗಾಂಧಿ ದೇಶದ ಮುಂದೆ ಮತ ಕಳ್ಳತನದ ಪುರಾವೆಗಳನ್ನು ಪದೇ ಪದೇ ಪ್ರಸ್ತುತಪಡಿಸಿದ್ದಾರೆ. ಹೀಗಾಗಿ 2026ರ ವಿಧಾನಸಭಾ ಚುನಾವಣೆಗಳಿಗಿಂತ ಮುಂಚಿತವಾಗಿ ಕಾಂಗ್ರೆೆಸ್ ಪಕ್ಷದಿಂದ ಎಂಜಿ ನರೇಗಾ ರದ್ದತಿ ಮತ್ತು ಎಸ್ಐಆರ್ ಚಟುವಟಿಕೆಗಳ ವಿರುದ್ಧ ತನ್ನ ರಾಜಕೀಯ ಕಾರ್ಯತಂತ್ರ ರೂಪಿಸಲಿದೆ ಎಂದು ಖರ್ಗೆ ಹೇಳಿದರು.
ಬಾಂಗ್ಲಾಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾಾತರ ಮೇಲಿನ ದಾಳಿಗಳನ್ನು ಸಭೆಯಲ್ಲಿ ಖಂಡಿಸಲಾಗಿದೆ. ಹಿಂದೂ ಯುಕವರ ಹತ್ಯೆೆಯ ಬಗ್ಗೆೆ ಇಡೀ ರಾಷ್ಟ್ರ ಅದರ ಬಗ್ಗೆೆ ಕಳವಳ ವ್ಯಕ್ತಪಡಿಸಿದೆ. ಮತ್ತೊೊಂದೆಡೆ ಬಿಜೆಪಿ ಮತ್ತು ಆರ್ಎಸ್ಎಸ್ಗೆ ಪೋಷಿತ ಸಂಘಟನೆಗಳು ಕ್ರಿಿಸ್ಮಸ್ ಆಚರಣೆಯ ಮೇಲೆ ವಿವಿಧೆಡೆ ದಾಳಿಗಳನ್ನು ನಡೆಸುವ ಮೂಲಕ ದೇಶದ ಕೋಮು ಸಾಮರಸ್ಯವನ್ನು ಕದಡಿವೆ. ಜಾಗತಿಕವಾಗಿ ಭಾರತದ ಪ್ರತಿಷ್ಠೆೆ ಕಳಂಕಿತಗೊಳಿಸಿವೆ. ಇದರ ಬಗ್ಗೆೆಯೂ ಸಭೆಯಲ್ಲಿ ಖಂಡಿಸಲಾಗಿದೆ ಎಂದು ಖರ್ಗೆ ಮಾಹಿತಿ ನೀಡಿದರು.
ಜ.5ರಿಂದ ಆಂದೋಲನ: ಸಿದ್ದರಾಮಯ್ಯ
ದೇಶಾದ್ಯಂತ ಜ.5 ರಿಂದ ಮಹಾತ್ಮಾಾ ಗಾಂಧಿ ಉದ್ಯೋೋಗ ಖಾತ್ರಿಿ ಯೋಜನೆ ಬಚಾವ್ ಆಂದೋಲನ ಹಮ್ಮಿಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದರು.
ಸಿಡಬ್ಲ್ಯೂಸಿ ಸಭೆಯ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಹಾತ್ಮಾಾ ಗಾಂಧಿ ಉದ್ಯೋೋಗ ಖಾತ್ರಿಿ ಯೋಜನೆಯನ್ನು ವಿಬಿಜಿ ರಾಮ್ ಜಿ ಎಂದು ಬದಲಾಯಿಸಲಾಗಿದ್ದು ಜನವರಿ ಐದರಿಂದ ದೇಶಾದ್ಯಂತ ಮಹಾತ್ಮಾಾ ಗಾಂಧಿ ಉದ್ಯೋೋಗ ಖಾತ್ರಿಿ ಯೋಜನೆ ಬಚಾವ್ ಆಂದೋಲನ ಕೈಗೊಳ್ಳಲಾಗುತ್ತಿಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ: ನರೇಗಾ, ಎಸ್ಐಆರ್ ವಿರುದ್ಧ ಖಂಡನಾ ನಿರ್ಣಯ- ಮಲ್ಲಿಕಾರ್ಜುನ ಖರ್ಗೆ ಉದ್ಯೋಗ ಖಾತ್ರಿ: ಜ.5ರಿಂದ ಜನಾಂದೋಲನ

