ಸುದ್ದಿಮೂಲ ವಾರ್ತೆ ಗಂಗಾವತಿ, ಡಿ.27:
ಕಿಷ್ಕಿಿಂಧೆ ಮತ್ತು ಶ್ರೀರಾಮಚಂದ್ರನ ಬಂಟ ಹನುಮ ಯದಯಿಸಿದ ನೆಲದ ಜನರು ತಾಯಿ ತುಂಗಭದ್ರಾಾ ನದಿ ಉಳಿವಿಗಾಗಿ ಒಗ್ಗಟ್ಟಿಿನಿಂದ ಅಣಿಯಾಗಬೇಕೆಂದು ನೇತಾಜಿ ಸುಭಾಶ್ಚಂದ್ರ ಭೋಸ್ ಅವರ ಮರಿಮೊಮ್ಮಗಳು ಕೊಲ್ಕತ್ತಾಾದ ರಾಜಶ್ರೀ ಚೌಧರಿ ಬೋಸ್ ಕರೆ ಕೊಟ್ಟರು.
ನಗರದ ಶ್ರೀಪಂಪಾಪತಿ ದೇವಸ್ಥಾಾನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ನಿರ್ಮಲ ತುಂಗಭದ್ರಾಾ ಅಭಿಯಾನದ ಜನ ಜಾಗೃತಿ ಮತ್ತು ಜಲ ಜಾಗೃತಿ ಅಭಿಯಾನದ ಅಂಗವಾಗಿ ಹಮ್ಮಿಿಕೊಂಡ ಮೂರನೇ ಹಂತದ ಪಾದಯಾತ್ರೆೆಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹನುಮನ ನಾಡು ಕಿಷ್ಕಿಿಂಧೆ ಎಂದರೆ ಕೇವಲ ದಕ್ಷಿಣ ಭಾರತ ಮಾತ್ರವಲ್ಲ, ಇಡೀ ದೇಶಕ್ಕೆೆ ಒಂದು ಸಂಚಲನ ಇದ್ದಂತೆ. ಈ ಕಿಷ್ಕಿಿಂಧೆ ನಾಡಿನಿಂದ ಆರಂಭವಾಗಿರುವ ನದಿಗಳನ್ನು ನಿರ್ಮಲ ಮಾಡುವ ಜಲಯಜ್ಞ ಇಡೀ ದೇಶಕ್ಕೆೆ ಮಾದರಿಯಾಗಬೇಕು. ತುಂಗಭದ್ರಾಾ ನದಿಗೆ ಇಂದು ಅಪಾಯ ಬಂದೊದಗಿದೆ. ಇಂತಹ ಸಂದರ್ಭದಲ್ಲಿ ಹನುಮನ ಇಚ್ಛಾಾಶಕ್ತಿಿ ಒಗ್ಗೂಡಿಸಿಕೊಂಡು, ಹನುಮನ ವಂಶಜರಾದ ನೀವೆಲ್ಲಾಾ ಇಡೀ ದೇಶಕ್ಕೆೆ ಮಾದರಿಯಾಗುವ ನಿಟ್ಟಿಿನಲ್ಲಿ ನದಿಗಳ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಬೇಕು ಎಂದರು.
ಪ್ರಕೃತಿ ನಾಶ ಮಾಡಿದರೆ ಅದರ ಸಾವಿರಪಟ್ಟು ಪರಿಣಾಮ ನಾವು ಅನುಭವಿಸಬೇಕಿರುತ್ತದೆ. ಮುಖ್ಯವಾಗಿ ಪ್ಲಾಾಸ್ಟಿಿಕ್ ಬಳಕೆಯಿಂದಾಗಿ ಒಂದಲ್ಲ ಒಂದು ದಿನ ಇಡೀ ಮನುಕುಲ ನಶಿಸಿ ಹೋಗುವಂತ ಸನ್ನಿಿವೇಶ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನೇತಾಜಿ ಸುಭಾಶ್ಚಂದ್ರ ಭೋಸ್ ಕೇವಲ ಸ್ವಾಾತಂತ್ರ ಭಾರತದ ಕನಸಷ್ಟೆೆ ಕಂಡಿರಲಿಲ್ಲ. ಬದಲಿಗೆ ಸದೃಢ, ಸಶಕ್ತ, ನಿರ್ಮಲ ಭಾರತದ ಕನಸು ಹೊಂದಿದ್ದರು. ಉತ್ತರದಲ್ಲಿ ಗುಪ್ತರು, ದಕ್ಷಿಣದಲ್ಲಿ ವಿಜಯನಗರದ ಸಾಮ್ರಾಾಜ್ಯದಿಂದಾಗಿಯೇ ಭಾರತ ಉಪ ಖಂಡ ಎಂಬ ಹೆಸರು ಬಂದಿದೆ ಎಂದು ಅಭಿಪ್ರಾಾಯ ವ್ಯಕ್ತಪಡಿಸಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪ, ಎಸ್. ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿಿ, ಪಾದಯಾತ್ರೆೆಯ ರಾಯಭಾರಿ ಲಲಿತಾರಾಣಿ ಮಾತನಾಡಿದರು. ಹಂಪಿ ಹೇಮಕೂಟದ ಗಾಯತ್ರಿಿ ಪೀಠದ ದಯಾನಂದ ಸ್ವಾಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಸ್ವಾಾಭಿಮಾನಿ ಆಂದೋಲನದ ಸಂಯೋಜಕಿ ಕೊಲ್ಕತ್ತಾಾದ ರಾಜಶ್ರೀ ಚೌಧರಿ, ಗಿರಿರಾಜ ಗುಪ್ತಾಾ, ಗಿರೀಶ್ ಪಾಟೀಲ್, ತಿಪ್ಪೇರುದ್ರಸ್ವಾಾಮಿ, ಸಂತೋಷ್ ಕೇಲೋಜಿ, ಶಿವಕುಮಾರ ಮಾಲಿಪಾಟೀಲ್, ಆಲಂಪಲ್ಲಿ ಜಗನ್ನಾಾಥ, ವಿಷ್ಣುತೀರ್ಥ ಜೋಶಿ, ಬಿ.ಎಂ. ಕುಮಾರಸ್ವಾಾಮಿ, ಶ್ರೀಪತಿ ಎಲ್.ಕೆ, ಸೋಮನಾಥ ಪಟ್ಟಣಶೆಟ್ಟಿಿ ಸೇರಿದಂತೆ ಇತರರಿದ್ದರು.
ಬಾಕ್ಸ್
ಅಪಾಯದಲ್ಲಿದ್ದ ತುಂಗಭದ್ರಾಾ ನದಿ ರಕ್ಷಿಸಬೇಕು-ಬಸವರಾಜ ವೀರಾಪುರ
ಅಪಾಯದ ಅಂಚಿನಲ್ಲಿರುವ ತುಂಗಭದ್ರಾಾ ನದಿ ಈ ಭಾಗದ ಜನರು ಪಕ್ಷಾತೀತವಾಗಿ ಬೃಹತ್ ಮಟ್ಟದ ಹೋರಾಟ ನಡೆಸಿ ರಕ್ಷಿಸಿಕೊಳ್ಳಬೇಕಿದೆ ಎಂದು ದೆಹಲಿಯ ರಾಷ್ಟ್ರೀಯ ಸ್ವಾಾಭಿಮಾನಿ ಆಂದೋಲನದ ಸಂಚಾಲಕ ಬಸವರಾಜ ವೀರಾಪೂರ ಹೇಳಿದರು.
ನಿರ್ಮಲ ತುಂಗಭದ್ರಾಾ ಅಭಿಯಾನದ ಜನ ಜಾಗೃತಿ ಮತ್ತು ಜಲ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾತನಾಡಿದರು.
ದಕ್ಷಿಿಣ ಭಾರತದಲ್ಲಿ ಅದೂ ಕರ್ನಾಟಕದಲ್ಲಿನ ತುಂಗಭದ್ರಾಾ ನದಿ ಅತ್ಯಂತ ಅಪಾಯಕಾರಿ ಸ್ಥಿಿತಿಯಲ್ಲಿದೆ. ಈ ನದಿಯ ನೀರು ಕುಡಿಯಲೂ ಯಗ್ಯವಿಲ್ಲ ಎಂದು ತಜ್ಞರು ವರದಿ ನೀಡಿದ್ದಾಾರೆ ಎಂದು ಖೇದ ವ್ಯಕ್ತಪಡಿಸಿದರು. ಒಂದು ಕಾಲದಲ್ಲಿ ಗಂಗಾ ಸ್ನಾಾನ, ತುಂಗಾ ಪಾನ ಎಂಬ ನಾಣ್ಣುಡಿ ಇತ್ತು. ಆದರೆ ಇಂದು ಗಂಗೆಯಲ್ಲಿ ಮಿಂದರೆ ರೋಗಗಳು, ತುಂಗೆಯ ನೀರು ಕುಡಿದರೆ ಮಾರಣಾಂತಿಕವಾಗಿ ಪರಿಣಾಮಿಸುತ್ತಿಿವೆ. ಎಂದು ಕಳವಳ ವ್ಯಕ್ತಪಡಿಸಿದರು.
ಮಾಜಿ ಸಿಎಂ ಜೆ.ಎಚ್. ಪಟೇಲರ ಪುತ್ರ ಮಹಿಮಾ ಪಟೇಲ್ ಮಾತನಾಡಿ, ಜಲಮೂಲಗಳನ್ನು ಉಳಿಸಿಕೊಳ್ಳುವ ಜವಾಬ್ದಾಾರಿ ನಮ್ಮ ಮೇಲಿದೆ. ಇಂದಿನ ದಿನಗಳಲ್ಲಿ ಎಲ್ಲೆೆಲ್ಲೂ ಸ್ವಾಾರ್ಥ ತುಂಬಿದ್ದು, ಮನುಷ್ಯನಲ್ಲಿನ ಸ್ವಾಾರ್ಥಕ್ಕಾಾಗಿ ಇಡೀ ಪ್ರಕೃತಿ ನಾಶವಾಗುತ್ತಿಿದೆ.ಇಡೀ ವ್ಯವಸ್ಥೆೆ ನಿದ್ರಾಾವಸ್ಥೆೆಗೆ ಜಾರಿದೆ. ಇಂತಹ ಸಂದರ್ಭದಲ್ಲಿ ನಿದ್ದೆೆ ಹೋದವರ ಸಾಲಲ್ಲಿ ನಾವಿದ್ದರೂ ಸದಾ ಜಾಗೃತರಾಗಿ ನಿದ್ದೆೆ ಮಾಡುತ್ತಿಿರವವರನ್ನು ಎಚ್ಚರಿಸುವ ಮತ್ತು ಪ್ರಕೃತಿಗೆ ಪೂಕರವಾದ ಕೆಲಸಗಳನ್ನು ಮಾಡಿಸಬೇಕು ಎಂದು ಸಲಹೆ ನೀಡಿದರು.
ನಿರ್ಮಲ ತುಂಗಭದ್ರಾಾ ಅಭಿಯಾನದ ಜನ ಜಾಗೃತಿ ಮತ್ತು ಜಲ ಜಾಗೃತಿ ಅಭಿಯಾನಕ್ಕೆೆ ಚಾಲನೆ ಒಗ್ಗಟ್ಟಿಿನ ಹೋರಾಟಕ್ಕೆೆ ರಾಜಶ್ರೀ ಚೌಧರಿ ಬೋಸ್ ಕರೆ

