ಸುದ್ದಿಮೂಲ ವಾರ್ತೆ ರಾಯಚೂರು, ಡಿ.28:
ಜಾತ್ಯಾತೀತ ತತ್ವ ಸಿದ್ಧಾಾಂತದ ಮೌಲ್ಯಾಾಧಾರಿತ ಆಡಳಿತ ನಡೆಸಿದ ಕಾಂಗ್ರೆೆಸ್ ಪಕ್ಷ ಕೋಮುವಾದವನ್ನು ಎಂದಿಗೂ ಸಹಿಸುವುದಿಲ್ಲ ಸಂವಿಧಾನದ ಆಶಯಗಳೆ ಕಾಂಗ್ರೆೆಸ್ ಪಕ್ಷದ ಗುರಿ ಮತ್ತು ಧ್ಯೇಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಎ.ವಸಂತ ಕುಮಾರ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆೆಸ್ ಪಕ್ಷದ ಕಚೇರಿಯಲ್ಲಿ ನಡೆದ ಕಾಂಗ್ರೆೆಸ್ ಪಕ್ಷದ 141ನೇ ಸಂಸ್ಥಾಾಪನಾ ದಿನದ ಅಂಗವಾಗಿ ಹಮ್ಮಿಿಕೊಂಡಿರುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಸ್ವಾಾತಂತ್ರ್ಯ ಹೋರಾಟದಲ್ಲಿ ಸಕ್ರಿಿಯವಾಗಿ ಪಾಲ್ಗೊೊಂಡು, ಬ್ರಿಿಟಿಷರ ಕಪಿಮುಷ್ಟಿಿಯಿಂದ ದಾಸ್ಯ ಮುಕ್ತಗೊಳಿಸಿ, ಭಾರತವನ್ನು ವಿಶ್ವಗುರುವಿನ ಮಟ್ಟಕ್ಕೆೆ ತಲುಪಲು ಅಡಿಪಾಯ ಹಾಕಿದ ಭಾರತೀಯ ರಾಷ್ಟ್ರೀಯ ಕಾಂಗ್ರೆೆಸ್ ಇಂದಿಗೂ ದೇಶದ ಪ್ರತಿಯೊಬ್ಬರ ಧ್ವನಿಯಾಗಿ ಸಂವಿಧಾನದ ಆಶಯ ಎತ್ತಿಿ ಹಿಡಿಯುವ ಕೆಲಸ ಮಾಡುತ್ತಿಿದೆ ಎಂದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎನ್ನುವ ಮಹಾನಾಯಕನ ಮುಖೇನ ಸಂವಿಧಾನ ಎಂಬ ದೇಶದ ಧರ್ಮಗ್ರಂಥವನ್ನು ಭಾರತೀಯರಿಗೆ ಸಮರ್ಪಿಸಿದ್ದು ಕಾಂಗ್ರೆೆಸ್ ಪಕ್ಷ.
ಇಂದಿರಾಗಾಂಧಿಯವರಿಂದ ಉಳುವವನೇ ಹೊಲದೊಡೆಯ, ಲಾಲ್ ಬಹದ್ದೂರ್ ಶಾಸಿ ಅವರಿಂದ ಹಸಿರುಕ್ರಾಾಂತಿ, ಕ್ಷೀರಕ್ರಾಾಂತಿ, ರಾಜೀವ್ ಗಾಂಧಿ ಅವರಿಂದ ಆಧುನಿಕ ಭಾರತಕ್ಕೆೆ ಅಡಿಪಾಯ ಹೀಗೇ ಲಕ್ಷಾಂತರ ಯೋಜನೆ, ಕಾರ್ಯಕ್ರಮಗಳನ್ನು ಕೊಟ್ಟ ಕಾಂಗ್ರೆೆಸ್ ಪಕ್ಷ ಸದಾ ಸರ್ವ ಧರ್ಮ ಸಮನ್ವ ಯತೆ ಕಾಪಾಡುವಲ್ಲಿ ಯಶಸ್ವಿಿ ಆಗಿದೆ.
2014 ರಿಂದ ಹುಟ್ಟಿಿಕೊಂಡಿರುವ ನಕಲಿ ದೇಶಭಕ್ತರು ವಾಟ್ಸ್ಆ್ಯಪ್ ಯೂನಿವರ್ಸಿಟಿಯಿಂದ ದೂರ ಉಳಿದು ಕಾಂಗ್ರೆೆಸ್ ಪಕ್ಷದ ಭವ್ಯ ಇತಿಹಾಸ ಸರಿಯಾಗಿ ಅಧ್ಯಯನ ಮಾಡಿದರೆ, ಆರ್ಎಸ್ ಎಸ್ ಮತ್ತು ಬಿಜೆಪಿ ಎಂಬ ಸುಳ್ಳಿಿನ ್ಯಾಕ್ಟರಿ ಭಾರತದಲ್ಲಿ ತನ್ನ ಅಸ್ತಿಿತ್ವ ಕಳೆದುಕೊಳ್ಳಲಿದೆ. ಇದನ್ನೆೆಲ್ಲ ಅರಿತಿರುವ ನಾಗಪುರದ ಚಡ್ಡಿಿಗ್ಯಾಾಂಗ್ ಕಾಂಗ್ರೆೆಸ್ ಪಕ್ಷದ ಬಗ್ಗೆೆ ಸದಾ ಸುಳ್ಳು ಅಪಪ್ರಚಾರಗಳನ್ನು ಸಮಾಜಕ್ಕೆೆ ಹಂಚುತ್ತಿಿರುತ್ತಾಾರೆ ಎಂದು ಹೇಳಿದರು.
400 ವರ್ಷಗಳ ಕಾಲ ದೇಶ ದೋಚಿದ ಬ್ರಿಿಟಿಷರನ್ನೇ ಭಾರತದಿಂದ ಕಾಲ್ಕಿಿತ್ತು ಓಡುವಂತೆ ಮಾಡಿದ ಕಾಂಗ್ರೆೆಸ್ ಪಕ್ಷಕ್ಕೆೆ ಏಳೆಂಟು ವರ್ಷಗಳ ಹಿಂದೆ ಜನಿಸಿರುವ ಕೋಮುಶಿಶುಗಳನ್ನು ಒದ್ದೋಡಿಸುವುದು ದೊಡ್ಡ ವಿಷಯವಲ್ಲ ಎಂದು ಹೇಳಿದರು.
ಕೆಪಿಸಿಸಿ ವಕ್ತಾಾರ ಡಾ.ರಜಾಕ್ ಉಸ್ತಾಾದ್ ಮಾತನಾಡಿ, ಗಾಂಧಿ, ನೆಹರು, ಶಾಸೀಜಿ, ಇಂದಿರಾಗಾಂಧಿ, ಸೋನಿಯಾಗಾಂಧಿ ಹಾಗೂ ರಾಹುಲ್ಗಾಂಧಿಯವರ ಶ್ರಮದಿಂದ ಇಂದು ರಾಷ್ಟ್ರದಲ್ಲಿ ಕಾಂಗ್ರೆೆಸ್ ಪಕ್ಷ ಹೆಮ್ಮರವಾಗಿ ಬೆಳೆದಿದೆ. ಈ ರಾಷ್ಟ್ರದ ಸಮಗ್ರ ಅಭಿವೃದ್ಧಿಿ ಮಾಡುವಲ್ಲಿ ಬೃಹತ್ ಪಾತ್ರ ವಹಿಸಿದ ಕೀರ್ತಿ ಪಕ್ಷಕ್ಕೆೆ ಸಲ್ಲುತ್ತದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಅಸ್ಲಂ ಪಾಷಾ ಮಾತನಾಡಿ, ಸ್ವಾಾತಂತ್ರ್ಯ ಭಾರತದ ಆಡಳಿತದಲ್ಲಿ ದೇಶದ ಜನಸಾಮಾನ್ಯರ ಬದುಕನ್ನು ಸುಧಾರಿಸಲು ಅನೇಕ ರಾಜಕೀಯ, ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳು ಕಾಂಗ್ರೆೆಸ್ ಪಕ್ಷದ ಹೆಮ್ಮೆೆಯ ಸಾಧನೆ ಎಂದು ತಿಳಿಸಿದರು.
ಮುಖಂಡ ಮಹ್ಮದ್ ಶಾಲಂ ಮಾತನಾಡಿ, ಕಾಶ್ಮೀರದಿಂದ ಕನ್ಯಾಾಕುಮಾರಿಯವರೆಗೆ ಕಾರ್ಯಕರ್ತರ ಪಡೆ, ಅನುಭವಿ ನಾಯಕರನ್ನು ಹೊಂದಿರುವ ಕಾಂಗ್ರೆೆಸ್ ಪಕ್ಷ ಭಾರತದ ಸಂವಿಧಾನದ ಆಶಯಕ್ಕೆೆ ಅನುಗುಣವಾಗಿ ಈ ರಾಷ್ಟ್ರದ ಆಡಳಿತ ನಡೆಯುವಂತಹ ಸ್ಥಿಿತಿ ನಿರ್ಮಾಣ ಮಾಡಲು ನಮ್ಮನ್ನು ನಾವು ಪುನರ್ ಸಮರ್ಪಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾಾ ಮಹಿಳಾ ಕಾಂಗ್ರೆೆಸ್ನ ಅಧ್ಯಕ್ಷೆೆ ನಿರ್ಮಲಾ ಬೆಣ್ಣಿಿಯವರು ಮಾತನಾಡಿ, ಕಾಂಗ್ರೆೆಸ್ ಪಕ್ಷ ಸುದೀರ್ಘ ಇತಿಹಾಸ ಹೊಂದಿದೆ. ದೇಶಕ್ಕೆೆ ಕಾಂಗ್ರೆೆಸ್ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಸುಧೀಂದ್ರ ಜಾಗೀರದಾರ, ಜಿಲ್ಲಾಾ ಉಪಾಧ್ಯಕ್ಷ ನರಸಿಂಹಲು ಮಾಸದೊಡ್ಡಿಿ, ನಗರ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಎನ್.ಶ್ರೀನಿವಾಸರೆಡ್ಡಿಿ, ಭೀಮನಗೌಡ ನಾಗಡದಿನ್ನಿಿ, ಪ್ರಧಾನ ಕಾರ್ಯದರ್ಶಿಗಳಾದ ದರೂರು ಬಸವರಾಜ ಪಾಟೀಲ್, ಈಶಪ್ಪ, ಕಾರ್ಯದರ್ಶಿಗಳಾದ ಜೆ.ಮಾರೆಪ್ಪ, ರಾಮಕೃಷ್ಣ ನಾಯಕ, ಜೆ.ಅಂಜನಕುಮಾರ, ಕೆ.ಇ.ಕುಮಾರ, ಮುಖಂಡರುಗಳಾದ ಸುಧಾಮ, ಎ.ಅರುಣಕುಮಾರ, ಮುರಳಿ ಯಾದವ, ಜಿ.ಮಲ್ಲಿಕಾರ್ಜುನ ನಾಯಕ, ಸೈಯದ್ ಯಾಜುದ್ದೀನ್, ಚನ್ನಬಸವ ನಾಯಕ, ರಮೇಶ ರೋಸ್ಲಿಿ, ಭೀಮನಗೌಡ ಇಟಗಿ, ತಿಮ್ಮಪ್ಪ, ಶಂಕರ ಕಲ್ಲೂರು, ವಿಶ್ವನಾಥ ಪಟ್ಟಿಿ, ಜಿ.ಕೇಶವಮೂರ್ತಿ, ಪ್ರತಿಭಾ ರೆಡ್ಡಿಿ, ಸುರೇಖಾ, ನಂದಿನಿ, ಶ್ರೀದೇವಿ, ನಂದಿನಿ ಗಾಯತ್ರಿಿ, ಉಮಾ, ಕವಿತಾ, ಶಾಂತ, ರೆಹನಾ ಬೇಗಂ, ಖನೀಸ್ ಾತಿಮಾ, ಶಬಾನ, ಬಸ್ಸಮ್ಮ, ಅಶ್ವಿಿನಿ, ಮೀನಾಕ್ಷಿ, ರಾಧಿಕ, ಇಲ್ಲೂರು ಗೋಪಾಲಯ್ಯ ಸೇರಿದಂತೆ ಇನ್ನಿಿತರರು ಉಪಸ್ಥಿಿತರಿದ್ದರು.

