ಅಮರೇಶ ಪತ್ತಾಾರ ಮಸ್ಕಿ, ಡಿ.28:
ಬಡವರ ಹಸಿವನ್ನು ನೀಗಿಸಲು ಸರ್ಕಾರ ಉಚಿತವಾಗಿ ಪಡಿತರ ಧಾನ್ಯಗಳನ್ನು ನೀಡುತ್ತಿಿದೆ. ಆದರೆ, ಆದ್ಯತಾ ಪಡಿತರ ಚೀಟಿ (ಪಿ.ಎಚ್.ಎಚ್.) ಹೊಂದಿರುವವರು ದೂರದ ನ್ಯಾಾಯಬೆಲೆ ಅಂಗಡಿಗೆ ಹೋಗಿ ಪಡಿತರ ಧಾನ್ಯವನ್ನು ಹೊತ್ತು ತರಲು ಒಂದು ದಿನದ ಕೂಲಿ ಕೆಲಸವನ್ನೇ ಬಿಡಬೇಕಾದ ಪರಿಸ್ಥಿಿತಿ ಮಸ್ಕಿಿ ತಾಲೂಕಿನ ಸಾಗರ್ ಕ್ಯಾಾಂಪ್ ಹಾಗೂ ನಾಗರೆಡ್ಡಿಿ ಕ್ಯಾಾಂಪ್ ನಲ್ಲಿದೆ.
ಪಡಿತರ ಅಂಗಡಿಗಳನ್ನು ತೆರೆಯಲು ಸರ್ಕಾರ ರೂಪಿಸಿರುವ ನಿಯಮಾವಳಿಗಳು ಸಾರಿಗೆ ಸೌಲಭ್ಯ ಸಮರ್ಪಕವಾಗಿ ಇಲ್ಲದ ಈ ಗ್ರಾಾಮದ ಜನರಿಗೆ ನ್ಯಾಾಯಬೆಲೆ ಅಂಗಡಿ ದೂರವಾಗಿಸಿದ್ದು, ಪಡಿತರ ಧಾನ್ಯಗಳನ್ನು ಹೊತ್ತು ಮನೆಗೆ ತರಲು ಪ್ರತಿ ತಿಂಗಳೂ ಪ್ರಯಾಸ ಪಡುವಂತಾಗಿದೆ.
ಪ್ರತಿ ತಿಂಗಳು ಪಡಿತರ ಧಾನ್ಯ ತರಲು 03 ಕಿ.ಮೀ ದೂರದ ಬುದ್ದಿನ್ನಿಿ ಗ್ರಾಾಮಕ್ಕೆೆ ಅಕ್ಕಿಿ,ಜೋಳವನ್ನು ಹೊತ್ತು ತರಲು ಹೈರಾಣಾಗುತ್ತಿಿದ್ದೇವೆ. ಗ್ರಾಾಮದಲ್ಲಿ ಸುಮಾರು 180 ಪಡಿತರ ಚೀಟಿ ಪಡೆದ ಕುಟುಂಬಗಳಿವೆ. ಸಾರಿಗೆ ವ್ಯವಸ್ಥೆೆಯೂ ಇಲ್ಲದೆ ಪರದಾಡುವ ಸ್ಥಿಿತಿ ಇದೆ’ ಎಂದು ಸಾಗರ್ಕ್ಯಾಾಂಪ್ ಗ್ರಾಾಮದ ವಿಜಯಕುಮಾರ್ ಅಲವತ್ತುಕೊಳ್ಳುತ್ತಾಾರೆ. ಇನ್ನೂ ಹಲವು ಹಳ್ಳಿಿಗಳಲ್ಲಿ ಪಡಿತರ ವ್ಯವಸ್ಥೆೆ ಸಮರ್ಪಕವಾಗಿಲ್ಲ. ಅಲ್ಲಿನ ಗ್ರಾಾಮದ ಪಡಿತರದಾರರನ್ನು ಪಕ್ಕದ ಗ್ರಾಾಮಗಳ ನ್ಯಾಾಯಬೆಲೆ ಅಂಗಡಿಗಳೊಂದಿಗೆ ಜೋಡಿಸಲಾಗಿದೆ. ಆಯಾ ಹಳ್ಳಿಿಗಳಲ್ಲೇ ಪಡಿತರ ವಿತರಣೆಗೆ ವ್ಯವಸ್ಥೆೆ ಮಾಡಬೇಕು’ ಎಂದು ಗ್ರಾಾಮಸ್ಥರು ಒತ್ತಾಾಯಿಸುತ್ತಾಾರೆ. ಅತ್ಯಂತ ಹಿಂದುಳಿದ ಮಸ್ಕಿಿ ತಾಲ್ಲೂಕಿನ ಬಹುತೇಕ ಹಳ್ಳಿಿಗಳಲ್ಲಿ ಹೊಟ್ಟೆೆ ಪಾಡಿಗಾಗಿ ಕೂಲಿಯನ್ನರಸಿ ದೂರದ ಜಿಲ್ಲೆಗಳಿಗೆ ಗುಳೆ ಹೋಗುವ ಎಷ್ಟೋೋ ವಲಸಿಗರಿಗೆ ಪಡಿತರ ಕೈಗೆಟಕುತ್ತಿಿಲ್ಲ. ಬಳಗಾನೂರ ಹೋಬಳಿಯಾದ್ಯಂತ ಕೂಲಿಕಾರರು ಸಾಮೂಹಿಕವಾಗಿ ಗುಳೇ ಹೋಗುತ್ತಿಿದ್ದು, ಇವರು ಪಡಿತರ ಸೌಲಭ್ಯದಿಂದ ವಂಚಿತರಾಗುತ್ತಿಿದ್ದಾರೆ.
ಬಹುತೇಕ ಬಡ ರೈತರೇ ಇರುವ ಸಾಗರ್ ಕ್ಯಾಾಂಪ್ ಹಾಗೂ ನಾಗರೆಡ್ಡಿಿ ಕ್ಯಾಾಂಪ್ ಗ್ರಾಾಮದ ಜನ ಪಡಿತರ ಧಾನ್ಯ ತರಲು ಬುದ್ದಿನ್ನಿಿಗೆ ಹೋಗಬೇಕು. ಸುಮಾರು 3 ಕಿ.ಮೀ ದೂರ ನಡೆಯಬೇಕು. ಬಸ್ಸಿಿನ ವ್ಯವಸ್ಥೆೆ ಇಲ್ಲದೇ 20 ಕೆ.ಜಿ. ಅಕ್ಕಿಿ ಹೊತ್ತು ತರುವುದು ಆಯಾಸದ ಕೆಲಸ. ಸುಮಾರು350 ಮನೆಗಳಲ್ಲಿ ಬಹುತೇಕ ಕುಟುಂಬಗಳು ಪಡಿತರ ವ್ಯವಸ್ಥೆೆಯಲ್ಲಿ ನೋಂದಣಿ ಆಗಿದ್ದಾರೆ. ನಮ್ಮ ಗ್ರಾಾಮದಲ್ಲಿಯೇ ಪಡಿತರ ವಿತರಣಾ ವ್ಯವಸ್ಥೆೆ ಕಲ್ಪಿಿಸುವ ಮೂಲಕ ಅನುಕೂಲ ಮಾಡಿಕೊಡಬೇಕು.
– ದುರ್ಗಮ್ಮ, ಸಾಗರ್ ಕ್ಯಾಾಂಪ್.
ಕೋಟ್ : 02
ಗ್ರಾಾಮದ ಜನ ಪಡಿತರ ಧಾನ್ಯ ತರಲು 3 ಕಿ.ಮೀ ದೂರದ ಬುದ್ದಿನ್ನಿಿ ಗ್ರಾಾಮಕ್ಕೆೆ ಹೋಗಬೇಕು. ರಸ್ತೆೆಯೂ ಸರಿಯಾಗಿಲ್ಲ. ಸಾರಿಗೆ ಸೌಲಭ್ಯವೂ ಇಲ್ಲ. ಆಟೋ, ಬೈಕ್ನಲ್ಲಿ ಹೋಗಿ ತರಬೇಕಾಗುತ್ತಿಿದೆ. ಮಹಿಳೆಯರು, ವೃದ್ಧರಿಗೆ ಪಡಿತರ ತರುವುದು ಕಷ್ಟವಾಗುತ್ತಿಿದೆ. ಗ್ರಾಾಮದಲ್ಲಿ ಸುಮಾರು 180 ಪಡಿತರ ಕಾರ್ಡ್ದಾರರು ಇದ್ದಾರೆ. ಸಾಗರ್ ಕ್ಯಾಾಂಪಿನಲ್ಲೇ ನ್ಯಾಾಯಬೆಲೆ ಅಂಗಡಿ ತೆರೆಯುವಂತೆ ಮಾಡಿರುವ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಿಲ್ಲ,
ಬಯೋಮೆಟ್ರಿಿಕ್ ಸಮಸ್ಯೆೆಯಾದರೆ ಒಮ್ಮೊೊಮ್ಮೆೆ ಪಡಿತರ ತರಲು ಎರಡು ದಿನ ಅಲೆಯ ಬೇಕಾಗುತ್ತಿಿದೆ. ಒಂದು ದಿನದ ಕೂಲಿ ಕೆಲಸವೂ ಹೋಗಲಿದೆ.
– ದ್ಯಾಾವಮ್ಮ , ಗ್ರಾಾಮ ಪಂಚಾಯತ ಮಾಜಿ ಸದಸ್ಯೆೆ.

