ಬೂದಯ್ಯಸ್ವಾಾಮಿ ಇಂಗಳದಾಳ ಗಬ್ಬೂರು, ಡಿ.28:
ನಾರಾಯಣಪುರ ಬಲದಂಡೆ ನಾಲೆಗೆ ನೀರು ಬಿಟ್ಟು ನಾಲ್ಕು ದಿನ ಕಳೆದರೂ ಸಮೀಪದ 16, 17, 18ನೇ ನಾಲೆಗೆ ಹನಿ ನೀರು ಬಂದಿಲ್ಲ. ಗೇಜ್ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಬುದ್ಧಿಿಯಿಲ್ಲ, ಬೆಳೆ ಬೆಳೆದ ಅನ್ನದಾತರಿಗೆ ನಿದ್ದೆೆಯಿಲ್ಲ ಎನ್ನುವಂತಾಗಿದೆ.
ನಾರಾಯಣಪುರ ಬಲದಂಡೆ ನಾಲೆ ಮೇಲ್ಭಾಾಗದಲ್ಲಿ ಗೇಜ್ನಂತೆ ನೀರು ಬಿಟ್ಟರೂ ನಿರ್ವಹಣೆ ಇಲ್ಲದೆ ನೀರು ಪೋಲಾಗುತ್ತಿಿವೆ. ಇದರಿಂದ ಟೇಲೆಂಡ್ ಭಾಗಕ್ಕೆೆ ನೀರು ಬರುತ್ತಿಿಲ್ಲ. ಡಿ.25ರಂದು ರಾತ್ರಿಿ ನಾಲೆಗೆ ನೀರು ಹರಿಸಲಾಗಿದೆ. ನಾಲ್ಕು ದಿನ ಕಳೆದರೂ ಗಬ್ಬೂರು ಹೋಬಳಿಯ ಮೂರು ಉಪನಾಲೆಗಳಿಗೆ ನೀರು ಬರುತ್ತಿಿಲ್ಲ. ಹೀಗಾಗಿ ಗಬ್ಬೂರು ಹೋಬಳಿ ರೈತರು ಅಕ್ಷರಶಃ ನರಕಯಾತನೆ ಅನುಭವಿಸುತ್ತಿಿದ್ದಾಾರೆ.
ಬೆಂಗಳೂರಿನಲ್ಲಿ ಜರುಗಿದ ಕೃಷ್ಣಾಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಯಲ್ಲಿ ರೈತರ ಅಭಿಪ್ರಾಾಯ ಪಡೆಯದೆ 14 ದಿನ ಚಾಲು, 10 ದಿನ ವಾರಬಂಧಿ ಹಾಕಲು ನಿರ್ಣಯಿಸಿ ಒಟ್ಟು 73 ಟಿಎಂಸಿ ನೀರು ಹರಿಸಲು ತೀರ್ಮಾನಿಸಲಾಯಿತು. ವಾರಬಂಧಿ 8 ದಿನಕ್ಕೆೆ ಇಳಿಸಲು ರೈತರು ಪ್ರತಿಭಟನೆ ಮಾಡಿದರೂ ಅಧಿಕಾರಿಗಳು ಹಾಗೂ ಸರ್ಕಾರ ಸೊಪ್ಪುು ಹಾಕಿರಲಿಲ್ಲ. ಹೀಗೆ 10 ದಿನ ವಾರಬಂಧಿ ಹಾಕಿ ನೀರು ಬಿಟ್ಟಿಿದ್ದು ಟೇಲೆಂಡ್ ಭಾಗಕ್ಕೆೆ ನೀರು ಬರುತ್ತಿಿಲ್ಲ. ಹೀಗಾಗಿ ಮೆಣಸಿನಕಾಯಿ ಬೆಳೆಗಳು ಹಾಳಾಗುತ್ತಿಿವೆ.
ಐಸಿಸಿ ನಿರ್ಣಯ ಪ್ರಕಾರ ಬೇಸಿಗೆ ಬೆಳೆಗೆ ಅನ್ವಯ ಆಗುವಂತೆ ಡಿ.2ರಿಂದ ನೀರು ಬಿಟ್ಟು 15 ಕ್ಕೆೆ ಬಂದ್ ಮಾಡಲಾಗಿತ್ತು. ಡಿ.15 ರಿಂದ 25 ರವರೆಗೆ ಬಂದ್ಮಾಡಿ ಡಿ.25ರ ರಾತ್ರಿಿ ನೀರು ಹರಿಸಲಾಗಿದೆ. ನೀರು ಹರಿಸಿ 4 ದಿನ ಕಳೆದರೂ ಉಪಕಾಲುವೆ 16, 17, 18 ನೇ ಟೇಲೆಂಡ್ಗೆ ಇನ್ನೂ ನೀರು ಬಂದಿಲ್ಲ. ನೀರು ಬಂದ್ ಆಗಿ 14ದಿನ ಕಳೆದಿದ್ದು ಮೆಣಸಿನಕಾಯಿ ಬೆಳೆಗೆ ಸಮಸ್ಯೆೆಯಾಗುತ್ತಿಿದೆ.
16 ನೇ ಉಪಕಾಲುವೆ ವ್ಯಾಾಪ್ತಿಿಯಲ್ಲಿ ಮಿಯ್ಯಾಾಪುರ ಕ್ರಾಾಸ್, ಮಸರಕಲ್, ನಾಗರಾಳ, ಗುಂಟ್ರಾಾಳ, ಹಿರೇಬೂದೂರು, ಚಿಕ್ಕಬೂದೂರು, ಹಂಚಿನಾಳ, ರಾಯಕುಂಪಿ, ಗುಂಟ್ರಾಾಳ್ ಹಾಗೂ ಗೂಗಲ್ ಸುತ್ತಮುತ್ತಲಿನ ಹಳ್ಳಿಿಗಳು. 17ನೇ ಉಪಕಾಲುವೆ ನಾಗೋಲಿ ಗ್ರಾಾಮದ ಮೇಲ್ಭಾಾಗದಿಂದ ಜಾಗಟಗಲ್, ಬುದ್ದಿನ್ನಿಿ, ಜಿನ್ನಾಾಪುರ, ಸುಂಕೇಶ್ವರಹಾಳ, ಬೂದಿನಾಳ, ಹದ್ದಿನಾಳ, ಇಂಗಳದಾಳ, ಕೂಡ್ಲಿಿಗಿ ಖಾನಾಪುರ ಒಳಪಡುತ್ತಿಿದ್ದು ಸುಮಾರು 17ಕಿಮೀ ವ್ಯಾಾಪ್ತಿಿ ಹೊಂದಿದೆ. 18 ನೇ ಉಪಕಾಲುವೆ ನಾಗೋಲಿ ಕೆಳಭಾಗದಿಂದ ಗಬ್ಬೂರು, ಹೊನ್ನಟಗಿ, ಮಸಿದಾಪುರ, ಹೇಮನಾಳ, ಬೊಮ್ಮನಾಳ, ಹರಿಸಿಣಿಗಿ, ಮಸರಕಲ್ ಇದಲ್ಲದೆ ಕೆಳಭಾಗಕ್ಕೆೆ ಕವಲೊಡೆದು ಜಾಗಟಗಲ್, ರಾಮದುರ್ಗ, ಎನ್.ಗಣೇಕಲ್, ಕರಡಿಗುಡ್ಡ, ಗೋವಿಂದಪಲ್ಲಿ ಸೇರಿ ವಿವಿಧ ಹಳ್ಳಿಿ ಒಳಪಡುತ್ತಿಿವೆ.ಇವರು ನೀರಿಲ್ಲದೆ ಆತಂಕಕ್ಕೆೆ ಒಳಗಾಗಿದ್ದಾಾರೆ.
ಕೋಟ್====
ನೀರಾವರಿ ಸಚಿವರು ಹಾಗೂ ಅಧಿಕಾರಿಗಳ ಅವೈಜ್ಞಾಾನಿಕ ನೀತಿಯಿಂದ ರೈತರು ಸಂಕಷ್ಟ ಅನುಭವಿಸುತ್ತಿಿದ್ದಾಾರೆ. ಟೇಲೆಂಡ್ ಭಾಗದ 16, 17, 18ನೇ ಉಪಕಾಲುವೆಯಲ್ಲಿ ನೀರು ಬಿಟ್ಟು 4ದಿನಕಳೆದರೂ ಹನಿನೀರು ಬರುತ್ತಿಿಲ್ಲ. ಮೆಣಸಿನಕಾಯಿ ಹೂವು ಉದುರುತ್ತಿಿದ್ದು ಎಕರೆ 4-5ಕ್ವಿಿಂಟಾಲ್ ಇಳುವರಿ ಕುಸಿಯಲಿದೆ. ತಕ್ಷಣವೇ ನಾಲೆಗೆ ನೀರು ಹರಿಸಬೇಕು.
ಪ್ರಭಾಕರ ಪಾಟೀಲ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಾಧ್ಯಕ್ಷ
ಬುದ್ದಿನ್ನಿಿ ನ್ಯಾಾಯಬೆಲೆ ಅಂಗಡಿ ಬಲು ದೂರ; ಪಡಿತರ ಹೊತ್ತು ತರಲು ಭಾರ ಅಂಗವಿಕಲರು, ವೃದ್ಧರ ಗೋಳು ಕೇಳುವರು ಯಾರು? ಅಧಿಕಾರಿಗಳೆ, ಜನಪ್ರತಿನಿಧಿಗಳೆ ಇತ್ತ ನೋಡಿ !

