ಸುದ್ದಿಮೂಲ ವಾರ್ತೆ ರಾಯಚೂರು, ಡಿ.28:
ರಾಯಚೂರು ಜಿಲ್ಲೆೆ ಸೇರಿ ಕಲ್ಯಾಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಕಲಿಕಾ ದುಸ್ಥಿಿತಿ ದುಗುಡ ಹೆಚ್ಚಿಿಸಿದ್ದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಕಚೇರಿ, ಸಭೆಗಳಿಗೆ ಹಾಜರಿ, ತಿಂಗಳ ಸಂಬಳಕ್ಕೆೆ ಸೀಮಿತ ಎನ್ನುವಂತಾಗಿದೆ.
ರಾಯಚೂರು ಜಿಲ್ಲೆೆಯಲ್ಲಷ್ಟೆೆ ಸರ್ಕಾರಿ ಪ್ರಾಾಥಮಿಕ ಹಾಗೂ ಕೆಲ ಪ್ರೌೌಢ ಶಾಲೆಯ ವಿದ್ಯಾಾರ್ಥಿಗಳ ಕಳಪೆ ಕಲಿಕೆ ಎಂದು ಭಾವಿಸಿದರೆ ತಪ್ಪಾಾದೀತು ಅದು ಕಲ್ಯಾಾಣ ಕರ್ನಾಟಕದ ನಮ್ಮ ಪ್ರತಿನಿಧಿಗಳು ಕೆಲ ಜಿಲ್ಲೆೆಯಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದಾಗ ಎಲ್ಲ ಕಡೆಗೂ ಕಳಪೆ ಕಲಿಕೆಯಾಗುತ್ತಿಿದೆ ಎಂಬುದು ಗಮನಕ್ಕೆೆ ಬಂದಿದೆ.
ಅದಕ್ಕೆೆ ಶಿಕ್ಷಕರದ್ದೊೊಂದು ನೆಪದ ಕಾರಣ ನೀಡಿದರೆ, ಅಧಿಕಾರಿಗಳು ಸಹಿತ ನೋಡಿಯೂ ನೋಡದವರಂತೆ ಸರ್ಕಾರದ ಅಂದರೆ ಜನಪ್ರತಿನಿಧಿಗಳತ್ತ ಬೆಟ್ಟು ಮಾಡಿ ಜಾರಿಕೊಳ್ಳುತ್ತಿಿದ್ದಾಾರೆ ಅತ್ತ ಬಿಆರ್ಸಿ, ಸಿಆರ್ಪಿಗಳಂತೂ ಇಂತಿಷ್ಟು ಶಾಲೆಗಳಿಗೆ ತೆರಳಬೇಕು ಪರಿಶೀಲಿಸಬೇಕು ಎಂಬುದನ್ನೆೆ ಮರೆತಂತಿದೆ ಎನ್ನುವ ಮಟ್ಟಿಿಗೆ ನಿರ್ಲಕ್ಷ ಕಂಡು ಬಂದಿದೆ.
ಸುದ್ದಿಮೂಲ ಪತ್ರಿಿಕೆ ನ.20ರಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕಲಿಕಾ ದುಸ್ಥಿಿತಿ ಬಗ್ಗೆೆ ಸರಣಿ ವರದಿ ಮಾಡುತ್ತಿಿದ್ದುಘಿ.ಇದರಿಂದ ನುಣುಚಿಕೊಳ್ಳಲು ಬಹುತೇಕ ಶಿಕ್ಷಕರು ಅದರಲ್ಲೂ ಮುಖ್ಯೋೋಪಾಧ್ಯಾಾಯರು ಮಾಹಿತಿ ಹಕ್ಕು ಅಡಿ ಪಡೆದ ಅನಾಮಧೇಯ ಸುತ್ತೋೋಲೆ ಹಿಡಿದು ತಮ್ಮ ಹುಳುಕು ವರದಿಯಾ ಗದಂತೆ ಕಪ್ಪುು ಹಲಗೆ ಮೇಲೆ ಬರೆಯಿಸಬೇಡಿ, ಪರಿಶೀಲಿಸಬಾರದು ಎಂಬ ಸುತ್ತೋೋಲೆ ತೋರಿಸಿ ತಪ್ಪಿಿಸಿಕೊಳ್ಳುತ್ತಿಿದ್ದಾಾರೆ. ಕೆಲವರು ಸಹಕರಿಸುತ್ತಿಿದ್ದಾಾರಲ್ಲದೆ, ಸಮಸ್ಯೆೆಯೂ ಇದೆ, ಶಿಕ್ಷಕರ ಕೊರತೆ ಇದೆ ಎಂಬುದನ್ನೂ ಹೇಳಿಕೊಳ್ಳುತ್ತಿಿದ್ದಾಾರೆ. ಹಾಗಾಂತ ನಮ್ಮ ತಂಡ ಮಾತ್ರ ಅಲ್ಲಿನ ವಾಸ್ತವ ವರದಿಯನ್ನೇ ಅವರು ಹೇಳಿದ್ದನ್ನೇ ವರದಿ ಮಾಡುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲಘಿ, ಬೀಳುವುದೂ ಇಲ್ಲ ಎಂಬುದು ಈಗಾಗಲೆ ಆರ್ಥವಾಗಿದೆ.
ಬಿಆರ್ಪಿ, ಸಿಆರ್ಪಿ ಹುದ್ದೆೆಗೆ ಸೀಮಿತ :
ಸರ್ಕಾರಿ ಶಾಲೆಯಲ್ಲಿನ ಮಕ್ಕಳ ಕಲಿಕೆ ತೀರಾ ಕಳಪೆ, ಆಯೋಮಯವಾಗಿದ್ದರೂ ಆಯಾ ತಾಲೂಕಿನ ಬಿಆರ್ಪಿ, ವಲಯಕ್ಕೆೆ ಸಂಬಂಧಿಸಿದ ಸಿಆರ್ಪಿ ಅಧಿಕಾರಿಗಳಲ್ಲಿ ಬಹುತೇಕರು ತಮ್ಮ ಹುದ್ದೆೆಗೆ ಅಂಟಿಕೊಂಡಿದ್ದಾಾರೆ. ಬೆರಳೆಣಿಕೆಯಷ್ಟು ಸಿಆರ್ಪಿಗಳು ತಕ್ಕಮಟ್ಟಿಿಗೆ ಕಾರ್ಯ ನಿರ್ವಹಿಸುತ್ತಿಿದ್ದಾಾರೆ.
ವಲಯ ಮಟ್ಟದ ಸಿಆರ್ಪಿಗಳಿಗೆ ಅನುದಾನಿತ, ಅನುದಾನ ರಹಿತ, ಸರ್ಕಾರಿ ಸೇರಿ ಗ್ರಾಾಮೀಣ ಭಾಗದಲ್ಲಿ ಸುಮಾರು 15 ಶಾಲೆಗಳು, ನಗರ ಪ್ರದೇಶದಲ್ಲಿ 30ರಿಂದ 40 ಶಾಲೆಗಳ ಮೇಲುಸ್ತುವಾರಿ, ನಿಗಾ ವಹಿಸಲಿದ್ದಾಾರೆ.
ಆದರೆ, ಸಿಆರ್ಪಿಗಳು ಶಾಲೆಗೆ ಹೋದಾಗ ಮಕ್ಕಳ ಕಲಿಕೆ ಪರಿಶೀಲನೆ ಮಾಡುವುದಿಲ್ಲ ಎಂಬುದು ನಮ್ಮ ತಂಡದ ಗಮನಕ್ಕೆೆ ಬಂದಿದ್ದುಘಿ, ಬಿಸಿಯೂಟ, ಮೂಲಸೌಕರ್ಯ, ಶಿಕ್ಷಕರ ಹಾಜರಾತಿ ಇತರ ಸೇವೆಗಳನ್ನು ಮಾತ್ರ ನೋಡಿಕೊಳ್ಳುತ್ತಿಿದ್ದಾಾರೆ. ಮಕ್ಕಳ ಕಲಿಕೆ ಸುಧಾರಣೆ ಆದ ಬಗ್ಗೆೆ ಅವರ ಬಳಿ ಸಾಕ್ಷಿಿಘಿ, ಪುರಾವೆಗಳಿಲ್ಲ ಎಂಬುದು ಮೇಲ್ನೋೋಟಕ್ಕೆೆ ಕಂಡು ಬಂದಿದೆ.
ಡಿಡಿಪಿಐ-ಬಿಇಓ ಶಾಲೆ ಕಡೆ ಬನ್ನಿಿ :
ರಾಯಚೂರು ಜಿಲ್ಲೆೆಯ ಏಳು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪೈಕಿ ಬಹುತೇಕರೂ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವುದು ಅಪರೂಪವೇ ಸರಿ. ನಿತ್ಯ ಸಭೆ, ಕಾರ್ಯಕ್ರಮ ಬಿಟ್ಟರೆ ಕಚೇರಿಯಲ್ಲಿ ಕಡತ ವಿಲೇವಾರಿ ಮಾಡುವಲ್ಲಿಯೇ ತಿಂಗಳ ಸವೆಸುತ್ತಿಿದ್ದಾಾರೆ.
ಇನ್ನೂ ಉಪನಿರ್ದೇಶಕರು ಮಾತ್ರ ಕಚೇರಿ, ಸಭೆ, ವಿಡಿಯೋ ಕಾನ್ಫರೆನ್ಸ್ಗೆ ಸಮಯ ಸವೆಸುತ್ತಿಿದ್ದು ಎಸ್ಎಸ್ಎಲ್ಸಿ ಲಿತಾಂಶ ಸುಧಾರಣೆ ಜಪ ಮಾಡುತ್ತಿಿದ್ದಾಾರೆ ವಿನಃ ಆ ಮಕ್ಕಳಿಗೆ ಹಿಂದಿನ ತರಗತಿಗಳಲ್ಲಿ ಶಿಕ್ಷಕರು ಏನೇಳಿದ್ದಾಾರೆ. ಈ ಮಕ್ಕಳು ಏನರ್ಥ ಮಾಡಿಕೊಂಡಿದ್ದಾಾರೆ ಎಂಬುದರ ವೌಲ್ಯಮಾಪನವನ್ನೇ ಮಾಡದೆ ಲಿತಾಂಶ ಉತ್ತಮವಾಗಿರಬೇಕೆಂದರೆ ಎಲ್ಲಿಂದ ಸಾಧ್ಯ ಎಂಬುದೆ ಯಕ್ಷ ಪ್ರಶ್ನೆೆಘಿ.
ಒಂದೊಮ್ಮೆೆ ಶಾಲೆಗಳಿಗೆ ಭೇಟಿ ನೀಡಿದರೂ ಬಿಸಿಯೂಟ, ಹಾಜರಾತಿ, ಕೊಠಡಿ, ಪಾಠ ಆದ ಬಗ್ಗೆೆ ಪರಿಶೀಲಿಸುವುದೆ ಹೆಚ್ಚುಘಿ. ಆದರೆ, ಮಕ್ಕಳು ಎಷ್ಟು ಕಲಿತಿದ್ದಾಾರೆ, ಶಿಕ್ಷಕರು ಎಷ್ಟು ಕಲಿಸುತ್ತಿಿದ್ದಾಾರೆ ಎಂಬುದರ ಪರಿಶೀಲನೆ ಮಾಡುತ್ತಿಿಲ್ಲಘಿ.
ನಾವು ಕಲಿತದ್ದೆೆಷ್ಟು ಎಂದು ನೋಡಲು ಹೋದರೆ ಶಿಕ್ಷಕರನ್ನೇ ಬೆಂಬಲಿಸಿ ಕೆಲ ಬಿಇಓಗಳು ಮಾತನಾಡುತ್ತಿಿರುವುದು ಗಮನಿಸಿದರೆ ಮಕ್ಕಳಿಗೆ ಮೋಸ ಮಾಡಿ ಸಂಬಳ ಪಡೆಯುತ್ತಿಿದ್ದೇವೆ ಎಂಬ ಲವಲೇಶದಷ್ಟು ಪಶ್ಚತ್ತಾಾಪ ಅವರ ಮಾತುಗಳಲ್ಲಿ ಕಾಣದೆ ಇರುವುದು ಆ ಭಗವಂತನಿಗೆ ಪ್ರೀತಿ ಇವರ ನಡೆ.
ಡಿಸಿ-ಸಿಇಓ ಸಾಹೇಬ್ರೆೆ ಸ್ವಲ್ಪ ನೋಡ್ರಿಿ :
ಇನ್ನೂ ಇಡೀ ರಾಯಚೂರು ಜಿಲ್ಲೆೆಯ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಕಲಿಕೆಯ ಸ್ಥಿಿತಿ ಯಾವ ಮಟ್ಟದಲ್ಲಿದೆ ಎಂಬುದನ್ನು ಜಿಲ್ಲಾಾಧಿಕಾರಿ ಹಾಗೂ ಇಲಾಖೆಗೆ ಸಂಬಂಧಿಸಿದ ಜಿಲ್ಲಾಾ ಪಂಚಾಯಿತಿ ಸಿಇಓ ಕಚೇರಿ ಬಿಟ್ಟು ತಾವು ಹೊರಗೆ ಭೇಟಿಗೆ ಹೋದಾಗ ಸರ್ಕಾರಿ ಶಾಲೆಗಳಲ್ಲಿ ಒಂದು ಹೆಜ್ಜೆೆ ಹಾಕಿ ಬರಬೇಕಿದೆ. ಕಪ್ಪುು ಹಲಗೆ ಮೇಲೆ ಬರೆಯಿಸಬೇಕಿದೆ. ಮಕ್ಕಳ ಕಲಿಕಾ ಸಾಮರ್ಥ್ಯ ತಿಳಿಯಬೇಕಿದೆ. ಶಿಕ್ಷಕರು ಏನೇಳುತ್ತಿಿದ್ದಾಾರೆ ಎಂಬುದರ ಮಾಹಿತಿಯನ್ನಾಾದರೂ ಒಮ್ಮೆೆ ಕೇಳಿ ಬನ್ನಿಿ ಸಾಹೇಬ್ರೆೆ ಅಂತಿದ್ದಾಾರೆ ಶಿಕ್ಷಣ ಪ್ರೇಮಿಗಳು ಮತ್ತು ಪಾಲಕರು.
ಪತ್ರಿಿಕೆಯ ಸರಣಿ ವರದಿಗಳು ನೋಡಿಯೂ ಜಿಲ್ಲಾಾಧಿಕಾರಿ, ಸಿಇಓಗಳು ವೌನ ವಹಿಸಿರುವುದು ಗಮನಿಸಿದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲಿನಗೊಳಿಸುವ ಸರ್ಕಾರದ ದೋರಣೆಗೆ ಪರೋಕ್ಷವಾಗಿ ಬೆಂಬಲಿಸಿ ಪೋಷಿಸುವಂತಿದೆ ಎಂಬ ಬೇಸರವಂತೂ ಇದೆ.

