ಸುದ್ದಿಮೂಲ ವಾರ್ತೆ ಗಬ್ಬೂರು, ಡಿ.28:
ಸಂಘ ಸಂಸ್ಥೆೆಗಳು ಸಮಾಜಮುಖಿ ಚಿಂತನೆಯಿಂದ ಕೆಲಸ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ಧಿಿ ಸಾಧ್ಯವಿದೆ. ಈ ನಿಟ್ಟಿಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ವಿವಿಧ ಯೋಜನೆ ಜಾರಿಗೊಳಿಸಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಾಮಾಭಿವೃದ್ಧಿಿ ಯೋಜನೆಯ ತಾಲೂಕು ಯೋಜನಾಧಿಕಾರಿ ವೇಣುಗೋಪಾಲ್ ಹೇಳಿದರು.
ತಾಲೂಕಿನ ಸುಂಕೇಶ್ವರಹಾಳ ಗ್ರಾಾಮದಲ್ಲಿ ಆಯೋಜಿಸಿದ್ದ ಸಾಮೂಹಿಕ ಲಕ್ಷ್ಮಿಿ ಪೂಜೆ ಹಾಗೂ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಸಾಮೂಹಿಕ ಲಕ್ಷ್ಮಿಿಪೂಜೆ ಕಾರ್ಯಕ್ರಮದಿಂದ ಇಷ್ಟಾಾರ್ಥ ಸಿದ್ಧಿಿಯಾಗಲಿದೆ. ಮಹಿಳೆಯರು ಮನೆ ಬೆಳಗುವ ಯಜಮಾನರು ಇದ್ದಂತೆ. ಅವರಿಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಮಾಜದ ಎಲ್ಲ ರಂಗದ ಜನರಿಗೆ ಅನುಕೂಲವಾಗುವ ನಿಟ್ಟಿಿನಲ್ಲಿ ವಿವಿಧ ಯೋಜನೆ ಜಾರಿಗೊಳಿಸಲಾಗಿದೆ. ಶ್ರೀಶಕ್ತಿಿ ಸಂಘ ಸ್ಥಾಾಪನೆ, ಸಾಲಸೌಲಭ್ಯ, ಅಂಗವಿಕಲರಿಗೆ ಉಪಕರಣ ವಿತರಣೆ, ನಿರ್ಗತಿಕರಿಗೆ ಮಾಸಾಶನ, ಮನೆ ನಿರ್ಮಿಸಲು ವಾತ್ಸಲ್ಯ ಯೋಜನೆ, ಮದ್ಯವರ್ಜನ ಶಿಬಿರ, ದೇವಸ್ಥಾಾನ ಜೀರ್ಣೋದ್ಧಾಾರ ಸೇರಿ ವಿವಿಧ ಯೋಜನೆ ಜಾರಿಗೊಳಿಸಲಾಗಿದೆ. ಜನರು ಯೋಜನೆ ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿಹೊಂದಬೇಕು ಎಂದರು.
ಗಬ್ಬೂರು ಶ್ರೀಮಹಾನಂದಿಶ್ವರ ದೇವಸ್ಥಾಾನ ಸಮಿತಿ ಅಧ್ಯಕ್ಷ ಪ್ರಸಾದ್ ಯಲಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಮಾಡುವಂಥ ಸಮಾಜಮುಖಿ ಕಾರ್ಯಗಳು ಬೇರೆಬೇರೆ ಸಂಘ ಸಂಸ್ಥೆೆಗಳಿಗೆ ಮಾದರಿಯಾಗಿದೆ. ದುಷ್ಟಶಕ್ತಿಿಗಳು ಶ್ರೀಕ್ಷೇತ್ರಕ್ಕೆೆ ಕಳಂಕತರಲು ನಾನಾ ಪ್ರಯತ್ನ ನಡೆಸಿದರೂ ಕ್ಷೇತ್ರದ ಒಡೆಯ ಮಂಜುನಾಥ ಎಲ್ಲವನ್ನೂ ನೋಡಿಕೊಳ್ಳುತ್ತಾಾನೆ. ಭಕ್ತರು ಶ್ರೀಕ್ಷೇತ್ರದ ಕಾರ್ಯವನ್ನು ಮಾತ್ರ ನೋಡಬೇಕು ಎಂದರು.
ಸುಲ್ತಾಾನಪುರ ಪಂಚಾಕ್ಷರಿ ಬ್ರಹನ್ಮಠದ ಪೀಠಾಧಿಪತಿ ಶ್ರೀಶಂಭು ಸೋಮನಾಥ ಶಿವಾಚಾರ್ಯ ಸ್ವಾಾಮೀಜಿ ಸಾನ್ನಿಿಧ್ಯವಹಿಸಿದ್ದರು. ವಿವಿಧ ಯೋಜನೆ ಲಾನುಭವಿಗಳಿಗೆ ಕಿಟ್ ವಿತರಿಸಲಾಯಿತು. ವೈದ್ಯಾಾಧಿಕಾರಿ ಡಾ.ಪ್ರತಿಮಾ ಪಾಟೀಲ್, ಪ್ರಮುಖರಾದ ಈರಣ್ಣಗೌಡ ಬೋಳಗುಂಡ, ಚನ್ನಬಸವ ರೆಡ್ಡಿಿಗೌಡ ಬಿರಾದಾರ, ಭೀಮಪ್ಪ, ವಿಶ್ವನಾಥ ಖಾನಾಪುರ, ರವೀಂದ್ರಗೌಡ, ನಾಗೇಂದ್ರ ಗಬ್ಬೂರು, ಅಶ್ವಿಿನಿ, ಎಂ.ರಾಮು ಗಬ್ಬೂರು, ರವಿ ಗಣೇಶ, ಸರಸ್ವತಿ, ಗೀತಾ, ಇಂದಿರಾ, ಲಿಂಗರಾಜ, ಮಹೇಶ್, ಮಾರುತಿ, ಭಾಗ್ಯ, ಅಂಬುಜಾ, ಅನಿತಾ, ಶ್ವೇತಾ, ಮಂಜುಳಾ ಇತರರಿದ್ದರು.
ಸುಂಕೇಶ್ವರಹಾಳದಲ್ಲಿ ಸಾಮೂಹಿಕ ಲಕ್ಷ್ಮಿಪೂಜೆ

