ಸುದ್ದಿಮೂಲ ವಾರ್ತೆ ಕವಿತಾಳ, ಡಿ.28:
ಮನೆಯವರು ಊರಿಗೆ ತೆರಳಿದ ಸಂದರ್ಭದಲ್ಲಿ ಮನೆ ಬೀಗ ಮುರಿದು ನಗದು ಮತ್ತು ಚಿನ್ನಾಾಭರಣ ಕಳ್ಳತನ ಮಾಡಿದ ಘಟನೆ ಸಮೀಪದ ಬಾಗಲವಾಡ ಗ್ರಾಾಮದಲ್ಲಿ ಶನಿವಾರ ರಾತ್ರಿಿ ನಡೆದಿದೆ.
ಗ್ರಾಾಮದ ಗುರುಲಿಂಗಯ್ಯಸ್ವಾಾಮಿ ಅವರು ತಮ್ಮ ಮಕ್ಕಳ ಭೇಟಿಗೆ ಕುಟುಂಬ ಸಮೇತರಾಗಿ ಬೆಂಗಳೂರಿಗೆ ತೆರಳಿದ ಸಂದರ್ಭದಲ್ಲಿ ಮನೆ ಬೀಗ ಮುರಿದ ಕಳ್ಳರು ಬೀರು ಮುರಿದು ಅದರಲ್ಲಿದ್ದ 70 ಸಾವಿರ ನಗದು ಹಣ ಮತ್ತು 2 ತೊಲೆ ಚಿನ್ನಾಾಭರಣ ಕದ್ದಿದ್ದಾರೆ. ಬಾಗಿಲು ಮುರಿದದ್ದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆೆ ಭೇಟಿ ನೀಡಿದ ಕವಿತಾಳ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

