ಸುದ್ದಿಮೂಲ ವಾರ್ತೆ ರಾಯಚೂರು, ಡಿ.28:
ರಾಯಚೂರು ತಾಲೂಕಿನ ಯರಗೇರಾ ಗ್ರಾಾಮದಲ್ಲಿ ಸರ್ವಧರ್ಮ ಭಾವೈಕ್ಯತೆಯ ಸಂಕೇತವಾದ ಶ್ರೀ ದರ್ಗಾ ಹಜರತ್ ಬಡೇಸಾಹೇಬ್ ಅವರ 127ನೇ ವರ್ಷದ ಉರುಸು ಕಾರ್ಯಕ್ರಮ ಆರಂಭವಾಯಿತು.
ಗ್ರಾಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರು ದರ್ಗಾಕ್ಕೆೆ ಭೇಟಿ ನೀಡಿ ಪುಷ್ಪ ಸಲ್ಲಿಸಿ ಹಜರತ್ ಬಡೇಸಾಹೇಬ್ ಅವರ ಆರ್ಶಿವಾದ ಪಡೆದರು.ನಂತರ ದರ್ಗಾ ಸಮಿತಿಯಿಂದ ಶಾಸಕರು ಹಾಗೂ ಮುಖಂಡರನ್ನು ಸನ್ಮಾಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಅಸ್ಲಾಾಂಪಾಷಾ, ಊರಿನ ಹಿರಿಯ ಮುಖಂಡರು, ಗ್ರಾಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು,ಗ್ರಾಾಮಸ್ಥರು ಭಕ್ತಾಾಧಿಗಳು ಉಪಸ್ಥಿಿತರಿದ್ದರು.
ಯರಗೇರಾ : ಹಜರತ್ ಬಡೇಸಾಹೇಬ್ ಉರುಸ್, ಶಾಸಕ ದದ್ದಲ್ ಭಾಗಿ

