ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.28:
ಮೈಸೂರು ಜಿಲ್ಲೆಯಹುಣಸೂರು ತಾಲೂಕಿನ ಚಿನ್ನಾಾಭರಣ ಮಳಿಗೆಗೆ ನುಗ್ಗಿಿದ ಡಕಾಯಿತರು ಮ್ಯಾಾನೇಜರ್ ಮೇಲೆ ಗುಂಡಿನ ದಾಳಿ ನಡೆಸಿ, ಸುಮಾರು 4 ರಿಂದ 5 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರಾಾಭರಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಹುಣಸೂರು ಬಸ್ ನಿಲ್ದಾಾಣದ ಹಿಂದಿರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಶಾಪ್ಗೆ ಬೈಕ್ನಲ್ಲಿ ಬಂದ ಐವರು ಮುಸುಕುಧಾರಿಗಳು ದರೋಡೆ ಮಾಡಿದ್ದಾರೆ. ಚಿನ್ನದ ಮಳಿಗೆಯಲ್ಲಿ ಮ್ಯಾಾನೇಜರ್ ಅಜ್ಗರ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಮ್ಯಾಾನೇಜರ್ ಪ್ರಾಾಣಾಪಾಯಯಿಂದ ಪಾರಾಗಿದ್ದಾರೆ. ಪರಾರಿಯಾಗುವ ವೇಳೆ ಓರ್ವ ದರೋಡೆಕೋರ ಹೆಲ್ಮೆೆಟ್ ಬಿಟ್ಟು ಹೋಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆೆ ಹುಣಸೂರು ಗ್ರಾಾಮಾಂತರ ಹಾಗೂ ಪಟ್ಟಣ ಪೊಲೀಸರು ದೌಡಾಯಿಸಿದ್ದಾರೆ. ಶ್ವಾಾನದಳ, ಬೆರಳಚ್ಚು ತಂಡ ಪರಿಶೀಲನೆ ನಡೆಸುತ್ತಿಿದೆ. ಮಾಹಿತಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಎನ್. ವಿಷ್ಣುವರ್ಧನ್, ಎಎಸ್ಪಿಿ ಎಲ್. ನಾಗೇಶ್ ಸ್ಥಳಕ್ಕೆೆ ತೆರಳಿದ್ದಾರೆ. ಹಾಡಹಗಲೇ ನಡೆದ ದರೋಡೆಯಿಂದ ಸಾರ್ವಜನಿಕರು ಬೆಚ್ಚಿಿಬಿದ್ದಿದ್ದಾರೆ.

