ಈರಣ್ಣ ಬೆಂಗಾಲಿಯ ಮೊಗವು ಸುಂದರ ಮನವೂ ಸುಂದರ. ಅಗಲವಾದ ಹಣೆಯ, ಗೌರವ ವರ್ಣದ, ಸದಾ ಕ್ರಿಿಯಾಶೀಲತೆಯನ್ನೇ ತನ್ನ ದೈನಂದಿನ ಚಟುವಟಿಕೆಯನ್ನಾಾಗಿ ರೂಪಿಸಿಕೊಂಡ ಈ ಯುವಕ ಈಗಗಾಲೇ ಹದಿನೆಂಟು ಕೃತಿಗಳನ್ನು ಸಾರಸ್ವತ ಲೋಕಕ್ಕೆೆ ನೀಡುವದರ ಮೂಲಕ ತನ್ನ ಸೃಜನಶೀಲತೆಯನ್ನು ಸಾಬೀತುಪಡಿಸಿದ್ದಾಾನೆ. ನಮ್ಮ ಹೆಮ್ಮೆೆ ನಮ್ಮ ರಾಯಚೂರು ದ್ಯೋೋತಕ.
ನಮ್ಮ ರಾಯಚೂರು ಕೃತಿಯನ್ನು ಕೈಗೆತ್ತಿಿಕೊಳ್ಳುತ್ತಿಿದ್ದಂತೆ ವಾಚಕರ ಮನಸ್ಸು ಹೂವಂತೆ ಅರಳಿದರೆ ಆಶ್ಚರ್ಯಪಡಬೇಕಿಲ್ಲ. ಕಾರಣ ನಮ್ಮ ರಾಯಚೂರು ಶೀರ್ಷಿಕೆ ಬಂಗಾರ ಬಣ್ಣದಲ್ಲಿ ಥಳಥಳನೆ ಹೊಳೆಯುತ್ತಿಿರುವುದು ಮೇಲೆ ನಯನ ಮನೋಹರವಾದ ಸುಂದರ ನೋಟ. ಬಹುಶಃ ಕವಿ ಕಲಾವಿದ ಏಕೀಕೃತಗೊಂಡುದರ ಪರಿಣಾಮ ಮುಖ ಪುಟ ಸರ್ವರ ಮನಸ್ಸನ್ನು ಆಕರ್ಷಿಸುತ್ತದೆ ಎಂದು ಹೇಳಿದರೆ ಅತಿ ಶಯೋಕ್ತಿಿಯಾಗಲಾರದು.
ಜನಮನದಲ್ಲಿ ಐತಿಹಾಸಿಕ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿಿನಲ್ಲಿ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಂಪರೆಯ ಮಹತ್ವವನ್ನು ಸೂಕ್ತ ಮತ್ತು ಸಮರ್ಪಕ ಚಿತ್ರಗಳೊಂದಿಗೆ ಜನತೆಗೆ ನೀಡುವ ಪ್ರಯತ್ನ ಅನನ್ಯ ಹಾಗೂ ಅರ್ಥಪೂರ್ಣ. ಒಂದು ಕೃತಿ ಕಾಲ ಕಾಲಕ್ಕೂ ಓದಿಸಿಕೊಂಡು ಹೋಗುವಂತಿರಬೇಕು, ವೈಚಾರಿಕ ಚಿಂತನೆಗಳ ಮೂಲಕ ಜನರ ಹೃದಯವನ್ನು ಗೆಲ್ಲಬೇಕು ಎನ್ನುವುದಕ್ಕೆೆ ಜೀವಂತ ಸಾಕ್ಷಿಿ ನಮ್ಮ ರಾಯಚೂರು ಸತತ ಪ್ರಯತ್ನದ ಪ್ರತೀಕ.
ಈರಣ್ಣ ಬೆಂಗಾಲಿ ಭಾವನಾ ಜೀವಿ. ಮಗು ಮನದ ಅಂತರ್ಮುಖಿ, ಕಣ್ಣಿಿಗೆ ಕಂಡದ್ದನ್ನು ಬಣ್ಣವಾಗಿಸುವ ಕಲೆ, ಅವರಿಗೆ ಕರಗತ, ಅದು ದೈವದತ್ತ ದೇಣಿಗೆ.
ಗಜಲ್, ಕಥೆ, ಕವನ, ಕಾದಂಬರಿ, ಲೇಖನ, ವಚನ, ಹನಿಗವನ, ಹೈಕು, ಮಕ್ಕಳ ಸಾಹಿತ್ಯ, ಜೀವನ ಚರಿತ್ರೆೆ ಹೀಗೆ ಕನ್ನಡ ಸಾಹಿತ್ಯದ ಹತ್ತು ಹಲವು ಪ್ರಕಾರಗಳಲ್ಲಿ ಕೃಷಿ ಮಾಡುವುದರ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾಾರೆ.
ಏಕಲವ್ಯನ ರೇಖೆಗಳು ಕೃತಿಯಿಂದ ನಮ್ಮ ರಾಯಚೂರು ಕೃತಿಯವರೆಗೆ ಹದಿನೆಂಟು ಕೃತಿಗಳನ್ನು ರಚಿಸಿದ ಶ್ರೀಯುತರು ಕುಂಚ ಕಲೆಯ ಮೂಲಕ ಸೌಂದರ್ಯದ ಸವಿಯನ್ನು ಉಣಬಡಿಸಿದ್ದಾಾರೆ.
‘ಅರಿವಿನ ಅಂಬರ’ ಗಜಲ್ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಾಲಯದ ಪ್ರಸಾರಾಂಗದ ರಾಜ್ಯೋೋತ್ಸವ ಪ್ರಶಸ್ತಿಿ ಅಪರೂಪದ ‘ಕನ್ನಡ ಮೇಷ್ಟು ’ಕೃತಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಿನ ದತ್ತಿಿ ಪ್ರಶಸ್ತಿಿ ಮೊಸಳೆ ಮತ್ತು ಮಿಂಚುಳ್ಳಿಿ ಕೃತಿಗೆ ಅಡ್ವೈಜರ್ ಪ್ರಶಸ್ತಿಿ ‘ಚಿಮಣಿಯ ಬೆಳಕಿ’ನಲ್ಲಿ ಕೃತಿಗೆ ಸಿರವಾರದ ಚುಕ್ಕಿಿ ಪ್ರತಿಷ್ಠಾಾನ ಪ್ರಶಸ್ತಿಿ ‘ಎಲ್ಲೊೊ ಹುಡುಕಿದೆ ’ಕೃತಿಗೆ ಬಸವ ಪುರಸ್ಕಾಾರ ಲಭಿಸಿದೆ.ಹಂಪಿ ಉತ್ಸವ ಅಖಿಲ ಭಾರತ ಕನ್ನಡ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ವೇದಿಕೆಗಳಲ್ಲಿ ಭಾಗವಹಿಸುವುದರ ಮೂಲಕ ನಿರಂತರವಾಗಿ ಕಾರ್ಯಶೀಲರಾಗಿರುವುದು ಈರಣ್ಣ ಬೆಂಗಾಲಿಯವರ ಸಾಹಿತ್ಯ ಒಲವನ್ನು ಪ್ರತಿಬಿಂಬಿಸುತ್ತದೆ.
ಕಳೆದ ಇಪ್ಪತ್ತು ವರ್ಷಗಳಿಂದ ಸತತ ಸಾವಿರಾರು ವ್ಯಂಗ್ಯ ಚಿತ್ರಗಳನ್ನು ಚಿತ್ರಿಿಸಿದ ಬೆಂಗಾಲಿ ನಾಡಿನ ಖ್ಯಾಾತ ದಿನಪತ್ರಿಿಕೆಯಾದ ಪ್ರಜಾವಾಣಿಯಲ್ಲಿ ವನ್ಯಜೀವಿ ಪೋಟೊಗ್ರಾಾಫಿ ಹಾಗೂ ನಾರದಗಡ್ಡೆೆಯಂತಹ ಅಪೂರ್ವ ದ್ವೀಪದ ವಿನೂತನ ಪರಿಚಯವನ್ನು ನೀಡಿದುದಲ್ಲದೇ ಸುಮಾರು ನೂರಾ ಐವತ್ತಕ್ಕೂ ಅಧಿಕ ಪಕ್ಷಿಿ ಪ್ರಭೇದಗಳನ್ನು ತಮ್ಮ ಕ್ಯಾಾಮೆರಾದಲ್ಲಿ ಸೆರೆ ಹಿಡಿದು ಬೆರಗುಗೊಳಿಸಿದ್ದಾಾರೆ.
ನಮ್ಮ ರಾಯ ಚೂರು ಒಂದು ವಿಶಿಷ್ಠವಾದ ಕೃತಿ. ಎಡೆದೊರೆನಾಡು, ರಾಯಚೂರು ಹಿನ್ನೆೆಲೆ, ಶಾಸನ, ಗುಹಾಚಿತ್ರಗಳನ್ನು, ಆಡಳಿತ, ರಾಯಚೂರು ಜಿಲ್ಲೆೆಯ ಎಲ್ಲಾಾ ತಾಲೂಕುಗಳ, ಭೌಗೋಳಿಕ, ಐತಿಹಾಸಿಕ, ಸಾಹಿತ್ಯಿಿಕ, ಧಾರ್ಮಿಕ, ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕೃತಿಕ, ಇತಿಹಾಸವನ್ನು ಸಮಗ್ರವಾಗಿ ಕಟ್ಟಿಿಕೊಟ್ಟಿಿರುವುದು ಅವರ ಕ್ಷೇತ್ರ ಕಾರ್ಯವನ್ನು ಎತ್ತಿಿ ತೋರಿಸುತ್ತದೆ.
ವೀರಶೈವ ಮಠಗಳು, ಜೈನ ಕೇಂದ್ರಗಳು, ಚರ್ಚ್ಗಳು ಅಲ್ಲದೇ ನರಬಲಿ ಕಥೆ, ಮಲಿಯಾಬಾದ್ ಅಲಂಕೃತ ಕಲ್ಲಾಾನೆಗಳು, ಇತಿಹಾಸದ ಕುರುಹು, ಗಣೇಶಮೂರ್ತಿ, ಜಲದುರ್ಗ ಕೋಟೆ, ಭೌಗೋಳಿಕ ದರ್ಶನ ಮಾತ್ರವಲ್ಲದೇ ರಾಯಚೂರಿನಲ್ಲಿ ಜಿಲ್ಲಾಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಅರವತ್ನಾಾಲ್ಕು ಜಿಲ್ಲಾಾಧಿಕಾರಿಗಳ ವಿವರಗಳ ಮಾಹಿತಿಯನ್ನು ನೀಡಿ ಅರ್ಥಪೂರ್ಣ ವಿವರವನ್ನು ಕೊಟ್ಟಿಿರುವುದು ಸಂತಸದ ವಿಷಯ.
ಚಿನ್ನದಗಣಿ, ಥರ್ಮಲ್ ಘಟಕ, ಕರ್ನಾಟಕ ಸಂಘ, ವಚನ ಸಾಹಿತ್ಯ, ದಾಸ ಸಾಹಿತ್ಯ, ಬಂಡಾಯ ಸಾಹಿತ್ಯ, ಕಥಾ, ಕಾದಂಬರಿ, ಮಕ್ಕಳ ಸಾಹಿತ್ಯ, ಗಜಲ್, ಹೈಕು, ಸಂಗೀತ, ಕಲೆ, ರಂಗಭೂಮಿ, ಚಲನಚಿತ್ರ, ಸ್ವಾಾತಂತ್ರ್ಯ ಹೋರಾಟಗಾರರು, ಆದಿಕವಿ ಮಹರ್ಷಿ ವಾಲ್ಮೀಕಿ ವಿದ್ಯಾಾಲಯ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯ ಪಂಡಿತ ತಾರಾನಾಥರ ಅಪೂರ್ವ ಸಾಧನೆಯನ್ನು ಒಳಗೊಂಡಂತೆ ಆರೋಗ್ಯ, ಹತ್ತಿಿ ಮಾರುಕಟ್ಟೆೆಘಿ, ಕೈಗಾರಿಕೆ, ಪತ್ರಿಿಕೆಗಳು, ಮುಂಗಾರು ಸಾಂಸ್ಕೃತಿಕ ಸಂಭ್ರಮ, ನ್ಯಾಾಯಾಲಯಗಳು, ಪೋಲಿಸ್ ವ್ಯವಸ್ಥೆೆಘಿ, ದೂರದರ್ಶನ ಕೇಂದ್ರ, ರಾಯಚೂರಿನ ಪಕ್ಷಿಿ ಲೋಕ, ತೀನ್ ಕಂದೀಲ್ ಮತ್ತು ಕಲ್ಲಾಾನೆಗಳು, ಕೇಂದ್ರೀಯ ಜೈಲು, ಸುಧಾರಣಾ ಕೇಂದ್ರ, ಮಾವಿನಕೆರೆ, ಖಾಸಬಾವಿ, ಪಂಡಿತ ಸಿದ್ದರಾಮ ಜಂಬಲದಿನ್ನಿಿ ರಂಗಮಂದಿರ ಜಿಲ್ಲಾಾ ಕನ್ನಡ ಸಾಹಿತ್ಯ ಪರಿಷತ್ತು, ನಿಸರ್ಗ ಮಾತೆ, ಕಲ್ಲಾಾದ ಗೋಧಿ ರಾಶಿ, ಇವು ಲಗೋರಿ ಕಲ್ಲುಗಳಲ್ಲ, ನಮ್ಮ ರಾಯಚೂರು ನಮ್ಮ ಹೆಮ್ಮೆೆ ಕಲಾಂ ಅವರ ಆರ್ಡರ್ ! ಮುಂತಾದ ಮಾಹಿತಿಗಳನ್ನಲ್ಲದೇ ಗಜಲ್ ! ನಮ್ಮ ರಾಯಚೂರು, ಅನ್ನವನ್ನು ನೀಡುವ ಕತ್ತಲೆಯನ್ನು ಹೊಡೆದೋಡಿಸುವ, ಚಿನ್ನವನ್ನು ಕೊಡುವ ಹೊಲಗಳಲ್ಲಿ ಹತ್ತಿಿ ಬೆಳೆಯಿಂದ ಮಿಂಚುವ ನಮ್ಮೂರು ನಮ್ಮ ರಾಯಚೂರು, ರಾಯರ ಹಿರಿಮೆಯ ಹೆಮ್ಮೆೆಯ ನಗರ.
ಈರಣ್ಣ ಬೆಂಗಾಲಿಯವರಿಗೆ ಅಧ್ಯಯನದಲ್ಲಿ ಅಪೇಕ್ಷೆೆಯಿದೆ, ವಿಚಕ್ಷಣ ದೃಷ್ಠಿಿಕೋನವಿದೆ, ವಿಶೇಷವಾಗಿ ವಿಶಾಲವಾದ ಮನಸ್ಸಿಿದೆ, ಆ ಕಾರಣಕ್ಕಾಾಗಿಯೇ ಅವರು ಮುಟ್ಟಿಿದ್ದೆೆಲ್ಲ ಅಪ್ಪಟ ಬಂಗಾರ. ಸರ್ವ ಕಾಲಕ್ಕೂ ಶಾಶ್ವತ ಅಕ್ಷರ.
– ಅಯ್ಯಪ್ಪಯ್ಯ ಹುಡಾ, ರಾಯಚೂರು
‘ನಮ್ಮ ರಾಯಚೂರು’ ಅಪರೂಪದ ಐತಿಹಾಸಿಕ ಪ್ರಜ್ಞೆಯ ಅಧ್ಯಯನಶೀಲ ಕೃತಿ

